Sadguru Vani (Kannada)

Sadguru Vani

ಅಪ್ಪನ ವಚನ ವೇದ — sacred words of Paramahamsa Sadguru SriSatUpasi in Kannada.

ಕನ್ನಡ · English

ಅಪ್ಪನ ವಚನ ವೇದ

ನಮಗೆ ಈ ಶರೀರ ಸಿಕ್ಕಿರದೇ ಒಂದು ಭಾಗ್ಯ.ಮನುಷ್ಯನ ಜನ್ಮ ಇದ್ದಂಗೇನೇ ಪರಮಾತ್ಮನನ್ನು ಕಾಣಲು ಪ್ರಯತ್ನ ಮಾಡಬೇಕು. ಅಂದು ಇಂದು ಅನ್ನದೇ ಸರ್ವ ಶಕ್ತಿಯನ್ನು , ಸಮಯವನ್ನು ಭಗವದ್ ಪ್ರಾಪ್ತಿಗಾಗಿ ಮೀಸಲಿಡಬೇಕು.
ಬಹಳಾ ಸಾರಿ ಬಂದು ಹೋಗಿ ಆಗೈತೆ.ಇನ್ನಾದರೂ ಹುಟ್ಟು ಸಾವಿನ ಬಳ್ಳಿಯಿಂದ ಬಿಡುಗಡೆ ಆಗಬೇಕು. ಸಿಕ್ಕಿರೋ ಈ ಜನ್ಮದಾಗೇ ಮತಿಗೆಟ್ಟು ಮರೆವಿಗೊಳಗಾಗಿ ಅರಿವುಗೆಟ್ಟು ಭೋಗ ಜೀವನವನ್ನು ಮಾಡ್ತಾ ಇದ್ರೆ ಪಾರಾಗದ್ಯಾವಾಗ ?ಮುಂದೆ ಮನುಷ್ಯನ ಜನ್ಮನೇ ಸಿಗುತ್ತೆ ಅಂತ ಏನು ಗ್ಯಾರೆಂಟಿ ?ಕತ್ತೆ ತರ ದುಡಿದರೂ ಈ ಸಂಸಾರದಲ್ಲಿ ಕಡೆಗೆ ದುಃಖ ಕಾದಿರುತ್ತೆ.ಅರಿವು ಮೂಡೋ ಹೊತ್ತಿಗೆ ಕಣ್ಣು ಮಂಜಾಗಿ ,ಶರೀರ ಬತ್ತಿ ಹೋಗಿ ,ಕಾಲುಗಳು ನಿಶ್ಯಕ್ತವಾಗಿರ್ತಾವೆ.ಅದಿಕ್ಕೆ ದೇಹ ,ಮನಸ್ಸು ಸದೃಢವಾಗಿ ಇದ್ದಾಗಲೇ ಪರಮಾತ್ಮನ ಪ್ರಾಪ್ತಿಗೆ ಪ್ರಯತ್ನ ಮಾಡಿದವರು ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ.
ಜೈಗುರುದೇವದತ್ತ

ಅಪ್ಪನ ವಾಣಿ.

ನಿರ್ಲಿಪ್ತವಾದ ಪರವಸ್ತುವೇ
ಎಲ್ಲಾ ಜಗತ್ತಿನ ಸೃಷ್ಟಿ ಮಾಡಿದೆ.ತ್ರಿಮೂರ್ತಿಗಳ ರೂಪದಲ್ಲಿ ಅದರ ಪಾಲನೆ ಮಾಡ್ತಾ ಐತೆ.ಒಂದೇ ಬಂಗಾರದಿಂದ ಸರ,ಬಳೆ,ಬುಗುಡಿ,ಬೆಂಡೋಲೆ ಎಲ್ಲಾ ಮಾಡಂಗೆ.

ಗುರು ಏನು ಮಾಡ್ತಾನೆ ಅಂದರೆ ನಾಮ ರೂಪಾದಿಗಳಾಗಿ ತೋರಿಕೊಂಡಿರುವುದನ್ನೇ ನಿಜ ಅಂತ ಜೀವಿ ಏನು ತಿಳಕಂಡಿರ್ತಾನೆ , ಆ ಭ್ರಾಂತಿ ಅಳಿಸಿ ಒಂದೇ ಬಂಗಾರದ ಗಟ್ಟಿ ಉಳಿಸುತ್ತಾನೆ.ಗುರು ಇದನ್ನೇ ಮಾಡದು
ಜೈಗುರುದೇವದತ್ತ

ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸಾಧನೆ

“ಮನುಷ್ಯ ತನ್ನ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡುವುದು ಒಂದು ಕಡೆಗಿರಲಿ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ವಿಚಾರಗಳಿವೆ, ಅದರಲ್ಲಿ ‘ಮತ್ತೊಬ್ಬರ ಮನಸ್ಸು ನೋಯಿಸದಂತೆ ನಡ್ಕಣದೂ ಒಂದು . ಅದೂ ಅಧ್ಯಾತ್ಮ ಸಾಧನೆನೇ. ನಮ್ಮ ಮಾತಿನಿಂದಾಗ್ಲೀ, ನಡವಳಿಕೆಯಿಂದಾಗ್ಲೀ ಇನ್ನೊಬ್ಬರನ್ನು ಹಂಗಿಸಬಾರದು, ಇದನ್ನು ಸಾಧಿಸ್ತಾಹೋದರೆ ಅದೂ ತಪಸ್ಸೇ ಆಗುತ್ತೆ.

ಎಲ್ಲಾ ಜೀವಿಗಳ ಆಂತರ್ಯದಲ್ಲೂ ಭಗವಂತ ಇದಾನೆ. ನೀವು ಬೇರೆಯವರಿಗೆ ದುಃಖ ಕೊಡುವುದು,
ಭಗವಂತನಿಗೆ ನೋವು ಕೊಟ್ಟಂಗೆ. ನಿನ್ನೊಳಗಿರೋ ಸದ್ಗುರು ನಿನ್ನ ಎಲ್ಲಾ ಕ್ರಿಯೆಗಳನ್ನೂ ನೋಡ್ತಾ ಇದ್ದಾನೆ. ಬೇರೆಯವರಿಗೆ ನೀನು ಕೊಡೋ ನೋವು ನೂರು ಪಟ್ಟು ಜಾಸ್ತಿಯಾಗಿ ನಿನಗೆ ಸಂಕಟ ತಂದೊಡ್ಡುತ್ತದೆ ಅನ್ನುದುನ್ನ ಅರ್ಥ ಮಾಡ್ಕಳಿ.

ಶ್ರೀ ಸತ್ಉಪಾಸಿ ಜ್ಞಾನನಿಧಿ

ಗುರುವು ಅಧಿಕವಾದದ್ದನ್ನೇ ಕೊಡುವುದು .ನೀವು ಬೇಡಿದರೆ ಬೇಡಿದ್ದನ್ನು ನೀಡುತ್ತಾನೆ , ಕೊಟ್ಟಂಗೆ ಮಾಡಿ, ಸಾಕಪ್ಪಾ ಅನ್ನುವಷ್ಟು ಕೊಟ್ಟು ,ನನಗಿದು ಸಾಕಪ್ಪಾ ,ಇದರಲ್ಲಿ ಯಾವ ಸುಖನೂ ಇಲ್ಲ ಅಂತ ತನಿಗೇ ಅರಿವಾಗಂಗೆ ಮಾಡಿ ಬಿಡ್ತಾನೆ .. ಆಸೆಯನ್ನು ಅಳಿಸಿ , ಪರಮಾನಂದಮಯ ತತ್ವದ ಕಡೆಗೆ ಗಮನ ಹರಿಸು ಅಂತಾನೆ.

ನಿಜವಾದ ಭಕ್ತರಿಗೆ ತನ್ನ ಹತ್ತಿರ ಇರೋ ಅತಿಶಯವಾದ ಅತ್ಯಧಿಕವಾದ ಮೋಕ್ಷವನ್ನು ಕರುಣಿಸಿಬಿಡ್ತಾನೆ.ಆದ್ದರಿಂದ ಅರಿವನ್ನು ಹೊಂದಿದಂತೆಲ್ಲಾ ಮುಂದುವರೀತಾ ಹೋಗಬೇಕು .ಗುರುವು ಸಾಕಾರದಲ್ಲಿ ಬಂದಾಗಲೇ ಅರಿವನ್ನು ಇಟ್ಟುಕೊಳ್ಳದವರು ಇನ್ನು ನಿರಾಕಾರ ಪರಮಾತ್ಮನಿಗೆ ಹೆದರುತಾರೇನು ? .ಇವನು ಬೇರೆ ಏನಲ್ಲ ! ಅವನು ಕಾಣಲ್ಲ ,ಇವನು ಕಾಣಿಸ್ತನೆ ಅಷ್ಟೇ.

ಸಾಕಾರನಾದ ಗುರುವಿಗೆ ಮೆಚ್ಚುಗೆ ಆಗುವಂತೆ ನಡೆದುಕೊಂಡರೆ ತಕ್ಷಣ ನಿರಾಕಾರ ಪರಮಾತ್ಮನಿಗೂ ಮೆಚ್ಚುಗೆ ಆಗಿಬಿಡುತ್ತೆ.

ಜೈ ಗುರುದೇವ ದತ್ತ

ಸತ್ಕಾರ್ಯಗಳಿಗೆ ಪರಮಾತ್ಮನ ಅಭಯ

ಮಾನವನು ತನ್ನ ಹೆಂಡತಿ ಮಕ್ಕಳಿಗೆಂದು ಜನ್ಮವಿಡೀ ಹೆಣಗಾಡುತ್ತಾನೆ. ಆದರೆ ಭಗವತ್ಕಾರ್ಯಕ್ಕೆ ಒಂದು ಕಲ್ಲು ಎತ್ತಾಕಿದ್ದೂ ಕೂಡಾ ಅಪಾರವಾದ ಪುಣ್ಯ ದೊರಕಿಸಿಕೊಡುತ್ತೆ.

ಭಗವಂತ ಅಂದರೆ ಬರೀ ವಿಗ್ರಹ ಅಲ್ಲ,ಕಲ್ಲಲ್ಲ.ಸತ್ಯವಾಗೂ ಪರಮಾತ್ಮ ಅಲ್ಲಿ ಪ್ರಕಟನಾಗುತ್ತಾನೆ. ಪ್ರತಿ ದಿನ ದೇವರಿಗೆ ನಮಸ್ಕಾರ ಮಾಡ್ರಿ, ಅವನು ರಕ್ಷಣೆ ಮಾಡುತ್ತಾನೆ. ಘೋರವಾದ ವಿಪತ್ತು ಬಂದಾಗಲೂ ಪರಮಾತ್ಮನ ಕೃಪೆಯಿಂದ ನಿಮಿಷಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನೆಲ್ಲಾ ನಾನು ಅನುಭವಿಸಿದ್ದನ್ನೇ ಹೇಳುತಾ ಇರೋದು. ಭಿಕ್ಷೆ ಬೇಡಿ ತಂದು ಪ್ರಸಾದ ಮಾಡಿ ಕನ್ನೇಶನ ಗುಡಿ ಹತ್ತಿರ ಬಂದೋರಿಗೆ ಪ್ರಸಾದ ಕೊಡುತ್ತಿದ್ದೆ. ಭಗವಂತ ಇವತ್ತು ನನ್ನನ್ನು ಈ ಸ್ಥಿತಿಯಲ್ಲಿ ಇಟ್ಟಿದ್ದಾಗಲೂ, ಬಂದೋರಿಗೆ ನನ್ನ ಕೈಯಲ್ಲಾದ ಸಹಾಯ ಮಾಡಿಕೊಂಡು, ಒಂದು ತುತ್ತು ಪ್ರಸಾದ ಕೊಟ್ಕಂಡು ಇದೀನಿ. ನೀವುಗಳು ಕೂಡಾ ಭಗವಂತನ ಸ್ಮರಣೆ ಮಾಡಿಕೊಂಡು, ಜೀವನ ಮಾಡ್ಕಂಡೋಗ್ರಿ. ಮನುಷ್ಯ ತಾನು ಪ್ರಯತ್ನ ಮಾಡದಲೆ ಒಂದು ಕಾರ್ಯ ನಿಂತಿರುತ್ತದೆಯೇ ಹೊರತು, ಪ್ರಯತ್ನ ಮಾಡಿದರೆ ಸತ್ಕಾರ್ಯಗಳಿಗೆ ಪರಮಾತ್ಮನ ಅಭಯ ಖಂಡಿತಾ ಸಿಗುತ್ತದೆ.

ಜೈ ಗುರುದೇವ ದತ್ತ

ಗುರುನಾಮಸ್ಮರಣೆಯು ನೆನ್ನೆಯ ಅಗತ್ಯವಲ್ಲ.
ನಾಳೆಯ ಯೋಜನೆಯಲ್ಲ
ಅವೆರಡೂ ನಮ್ಮ ಕೈಯಲ್ಲಿಲ್ಲ.
ಜಪ ,ಧ್ಯಾನ ,ಭಜನೆ ಇವು ಈ ದಿನದ , ಈ ಕ್ಷಣದ ಅಗತ್ಯ .
ಈ ಕ್ಷಣವಂತೂ ಕೈಯಲ್ಲಿ ಇದೆಯಲ್ಲ ?
ನಾಳೆ ನೀ ಇರುವೆ ಎಂಬುದು ಧೃಡವಿಲ್ಲ , ಈ ಕ್ಷಣದಲ್ಲಿ ಮಾಡಬೇಕಾದ್ದನ್ನು ಮಾಡು .

             

ಪ್ರೆಶ್ನೆ — ಕೆಲವರು ಭಕ್ತರು ಅವಿಶ್ರಾಂತ ಸೇವೆ ಮಾಡಿಯೂ ಗುರು ಕೃಪೆಗೆ ಪಾತ್ರರಾಗಿಯೂ ಪಾರಮಾರ್ಥಿಕ ಆನಂದ ಹೊಂದುವ ದಾರಿಯಲ್ಲಿ ಮುಂದೆ ಸಾಗದೇ ಅಳುತ್ತಾ ಇರುತ್ತಾರೆ , ದುಃಖ ಪಡುತ್ತಿರುತ್ತಾರೆ ಏಕೆ ಅಪ್ಪಾಜಿ ?

ಪರಮ ಪೂಜ್ಯ ಸದ್ಗುರು ಹೇಳಿದರು – ಭಗವಂತ ತನ್ನ ಭಕ್ತರಿಗೆ ಮೋಕ್ಷ ಮಾರ್ಗವನ್ನು ಕರುಣಿಸಲು ಕಾದು ಕೊಂಡು ಇರುತ್ತಾನೆ.ಬಾಗಿಲು ತೆಗೆದು ಒಳಗೆ ಬಾ ಅಂದರೂ ಅಂತವರು ಮುಂದಕ್ಕೇ ಬರಲ್ಲ.ನಿರ್ಮಲವಾಗಿ ಪರಮಾತ್ಮನನ್ನು ನೆನೆಯುತ್ತಿರು , ಕರೆದಾಗ ಬಂದುಬಿಡು ಅಂದರೆ ಬರಲ್ಲ , ಮಗಳದು ಕಷ್ಟ ಪರಿಹಾರ ಆಗಬೇಕು ,ಮಗ ಇನ್ನೂ ಅಭಿವೃದ್ಧಿ ಆಗಬೇಕು, ತಂಗಿ ಇನ್ನೂ ನೆಮ್ಮದಿ ಕಾಣಬೇಕು ,ನಾನು ಬರಲ್ಲ ಅಂದರೆ ಗುರು ತಾನೇ ಏನು ಮಾಡುತಾನೆ ?
ಭಗವಂತನ ಕೃಪೆಯಿಂದ ಎಲ್ಲರೂ ಚೆನ್ನಾಗೇ ಇರ್ತಾರೆ. ಅವರದ್ದು ಅವರು ನೋಡಿಕೊಂಡು ಅವರು ಚೆನ್ನಾಗೇ ಇರ್ತಾರೆ.ಇವರು ಸುಮ್ಮನೆ ಮೋಹ ಇಟ್ಕಂಡಿರ್ತಾರೆ.
ಗುರು ಸೂಕ್ಷ್ಮವಾಗಿ ನೋಡುತ್ತಿರುತ್ತಾನೆ. ಇವರದೇನೇನೈತೋ ಎಲ್ಲಾ ಅವನಿಗೆ ಗೊತ್ತಾಗಿ ಬಿಡುತ್ತೆ…ಜೀವಿ ತನ್ನ ಒಳಗೆ ಖಾಲಿಯಾಗಬೇಕು.ಸುತ್ತಲಿನ ಜಗತ್ತನ್ನು ಅದರ ಪಾಡಿಗೆ ಅದು ನಡೆದುಕೊಂಡು ಹೋಗಲು ಬಿಟ್ಟು , ತನ್ನ ಕರ್ತವ್ಯ ಏನೈತೋ ಅದನ್ನು ಮಾಡ್ಕಂಡು ಅರುಗಾಗಬೇಕು.ತನ್ನ ಪಾಡಿಗೆ ತಾನು ಪರಮಾತ್ಮ ತತ್ವವನ್ನು ಅನುಸರಿಸಬೇಕು .ಇದೇ ಸೂಕ್ಷ್ಮ ವಿಚಾರ.

ಜೈ ಗುರುದೇವ ದತ್ತ

              

ಶ್ರೀಸತ್‌ ಉಪಾಸಿ ಜ್ಞಾನನಿಧಿ

“ಶ್ರದ್ಧೆ ಇಲ್ಲದವ ಶವಕ್ಕೆ ಸಮಾನ”

ಭಜನೆಯಾಗಲೀ, ಪೂಜೆಯಾಗಲೀ, ಕಸ ಗುಡಿಸುವುದೇ ಆಗಲಿ, ಯಾವುದೇ ಸೇವೆಯಾಗಲಿ, ನೀವೇನೇ ಮಾಡಿ..ಅದನ್ನು ಶ್ರದ್ಧೆಯಿಂದ ಮಾಡಿ.

ಮಾಡಿದರೆ ಅದಕ್ಕಾಗಿಯೇ ಮಾಡಿ.ಅದು ಕಡ್ಡಿ ಮುರಿದಂಗಿರಬೇಕು, ಬಾಣ ಹೊಡೆದಂಗಿರಬೇಕು, ಗೆರೆ ಕೊಯ್ದಂಗಿರಬೇಕು.

ಶ್ರದ್ಧೆಯಿಂದ ಮಾಡುವುದಾದರೆ ಮಾಡಿ , ಅಶ್ರದ್ಧೆಯಿಂದ ಮಾಡಿದರೆ ಮಾಡಿಯೂ ಪ್ರಯೋಜನವಿಲ್ಲ ..ಈ ದಾರಿಯಲ್ಲಿ ನಡೆದೂ ಪ್ರಯೋಜನವಿಲ್ಲ.

             

ಪ್ರಾಪಂಚಿಕ ಜೀವನ ನಡೆಸುವವರು ಸಂಸಾರಿಗಳು ..ಆದರೆ ಪ್ರಪಂಚದಲ್ಲಿ ಜೀವನ ಮಾಡಿಕೊಂಡೇ , ಭಗವಂತ ಬೇಕು ಅಂತ ಸಾಧನೆ ಮಾಡುವವರುರು “ಅಸಂಸಾರಿಗಳು” !. ಅವರದು “ಭಗವಜ್ಜೀವನ” ಆಗುತ್ತದೆ.

ತನ್ನನ್ನು ತಾನು ತಿಳಿಯಬೇಕು ಎನ್ನುವ ಹಂಬಲ ಇರುವವರು ಸಂಸಾರದಲ್ಲಿ ಇದ್ದರೂನೂ , ತಮ್ಮ ಪಾಡಿಗೆ ತಾವು ಕರ್ತವ್ಯ ಮಾಡಿಕೊಂಡು , ಸದ್ದಿಲ್ಲದೆ ಸಾಧನೆ ಮಾಡಿಕೊಂಡು , ಹಗುರವಾಗಿ ಅರುಗಾಗಿ ಭವದಿಂದ ಪಾರಾಗಿಬಿಡಬೇಕು.

ಜೈಗುರುದೇವದತ್ತ

             

ಘನಾನುಭವಸಾರ

ವನಕೆ ಹಸಿರ ತಂದವನ್ಯಾರೆ
ಹೂವಿಗೆ ಬಣ್ಣ ಬಳಿದವನ್ಯಾರೆ
ಕೆಂಪು ಸೂರ್ಯನ ಬೆಳಗುವನ್ಯಾರೆ
ತಂಪು ಭೂಮಿಗೆ ನೀಡಿದವನ್ಯಾರೆ
ಎತ್ತಾ ನೋಡಿದರತ್ತ ಶಿವನಮ್ಮಾ
ಬ್ರಹ್ಮಾಂಡವಾ ತುಂಬಿಕೊಂಡಾ ಶಿವನಾ ನೋಡಮ್ಮಾ.

ಬೀಸುತಿರುವ ಗಾಳಿಯ ನೋಡೆ
ತಳ್ಳುತ್ತಿರುವ ಮಹಿಮನ್ಯಾರೆ
ಗಣಿತವಿಲ್ಲದ ಗಗನವ ನೋಡೆ
ಮಿನುಗುತಿರುವ ತಾರೆಯ ಸೊಬಗೆ.

ಈ ಸಾಲುಗಳನ್ನು ಹಾಡಿದ ನಂತರ ಅಪ್ಪ ಹೇಳಿದರು…

ಮನುಷ್ಯನ ಮನಸ್ಸು ಎಷ್ಟರ ಮಟ್ಟಿಗೆ ಪ್ರಜ್ಞೆ ಕಳಕೊಂಡಿದೆ ಅಂದರೆ ಸೃಷ್ಟಿಯ ಸೊಬಗನ್ನು ಸವಿಯಲು ಅವನಿಗೆ ಪುರುಸೊತ್ತೇ ಇಲ್ಲದಂಗೆ ಪರಿಸ್ಥಿತಿಯನ್ನ ತಾನೇ ನಿರ್ಮಾಣ ಮಾಡಿಕೊಂಡು ಬಿಟ್ಟಿದ್ದಾನೆ.
ಬೆಳಗಿನ ಸೂರ್ಯೋದಯ , ಬೆಳದಿಂಗಳ ಚೆಲುವು, ನೀಲಾಕಾಶದಲ್ಲಿ ಮಿನುಗೊ ಕೋಟಿ ನಕ್ಷತ್ರಗಳ ಸೌಂದರ್ಯ ಅವನಿಗೆ ಏನೂ ಅನ್ನಿಸಲ್ಲ.

ಏ ದಿನಾ ಹುಟ್ಟೋ ಸೂರ್ಯನ್ನ ಏನು ನೋಡದು ಅಂತಾರೆ.ತಾನು ಕಟ್ಕಂಡಿರದ್ರಾಗೇ ಮುಳುಗೋಗಿಬಿಟ್ಟಿದಾನೆ.ತನ್ನ ಪದವಿ ,ಅಧಿಕಾರ ಇವುಕ್ಕೇ ಜೋತು ಬಿದ್ದಿರ್ತಾನೆ.ದೇಹನೇ ನಾನು ಅಂದುಕಣದು ಒಂದು ಕಡೆಗೆ ಇರಲಿ…ಶರೀರಕ್ಕಿಂತಲೂ ಕಡೆಯಾದ ಪದವಿ ಪ್ರತಿಷ್ಟೆ ಇವುಗಳಲ್ಲಿ ತನ್ನ ಜೀವನ ಪೂರಾ ಜೀವನೇ ಇಡ್ತಾನಲ್ಲ.ಇವನ ಪ್ರಜ್ಞೆ ಇನ್ಬೆಷ್ಟರ ಮಟ್ಟಿಗೆ ಸತ್ತೋಗೈತೆ ಅಂತ !!

ಜೈಗುರುದೇವದತ್ತ

                 

ಅಪ್ಪನವರ ಜ್ಞಾನನಿಧಿ

ನೀವೇನೇ ಭಜನೆ ,ಸೇವೆ ,ಪೂಜೆ ಮಾಡಿ
ಶ್ರದ್ಧೆಯಿಂದ ಮಾಡಿ
ಮಾಡಿದರೆ ಅದಕ್ಕೋಸ್ಕರನೇ ಮಾಡಿ.
ಅದು ಕಡ್ಡಿ ಮುರಿದಂಗಿರಬೇಕು
ಗೆರೆ ಕೊಯ್ದಂಗಿರಬೇಕು
ಬಾಣ ಹೊಡೆದಂಗಿರಬೇಕು.
ಮಾಡದಾದ್ರೆ ಶ್ರದ್ಧೆಯಿಂದ ಮಾಡಿ.
ಇಲ್ಲ ಅಂದ್ರೆ ಮಾಡಿನೂ ಪ್ರಯೋಜನ ಇಲ್ಲ
ಶ್ರದ್ಧೆ ಇಲ್ಲದವ ಶವಕ್ಕೆ ಸಮಾನ

ಜೈಗುರುದೇವದತ್ತ.

              

ಧ್ಯಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಿ.ಒಂದೋ ಎರಡೋ ಸಾರಿ ಕುತ್ಕಣದು, ಮನಸೇ ನಿಲ್ಲಲ್ಲ ಅಂತಂದು ಸುಮ್ಮನಾಗದು , ಇಂಗೆ ಮಾಡಬಾರದು.ಅದು ಕುತ್ಕಂತತೊ ಬಿಡ್ತತೊ ನೀನು ಧ್ಯಾನಕ್ಕೆ ಕುತ್ಕಣದು ಬಿಡಬಾರದು.ನಿನ್ನ ಪ್ರಯತ್ನ ಅಪರಿಮಿತವಾದಾಗ ಗುರುವೇ ಮನೋಲಯಗೊಳಿಸ್ತಾನೆ.
ಬಂದೂ ಹೋಗಿ ಬಂದೂ ಹೋಗಿ ಇಂಗೇ ಭಾಳಾ ಸಾರಿ ಹುಟ್ಟಿ ಬಂದಿದ್ದಾಗಿದೆ.ಈ ಜನ್ಮದಲ್ಲಿ ಈಗ ಗುರು ಸಿಕ್ಕಮೇಲಾದ್ರೂ , ತತ್ವ ತಿಳಕಂಡ ಮೇಲಾದರೂ ಧೃತಿಗೆಡದೆ ಸಾಧನೆ ಮಾಡಿ , ನಿಸ್ಸಾರವಾದ ಭವವನ್ನು ಧೂಳೆಬ್ಬಿಸಿ , ಒಂದೇ ಆದ ಪರಮಾತ್ಮನಲ್ಲಿ ಒಂದಾಗಬೇಕು.ನೀನು ಬಂದಿರದೇ ಅದಕ್ಕಾಗಿ!! ಇನ್ಯಾತುಕ್ಕೂ ಅಲ್ಲ !!!
ಜೈ ಗುರು ದೇವದತ್ತ

                 

ಪರಮಾತ್ಮನು ಭಕ್ತನ ಮನಸ್ಸಿನಲ್ಲಿ ಮೂಡುವ ಸಣ್ಣಪುಟ್ಟ ಆಸೆಗಳನ್ನು ಈಡೇರಿಸುವ ಮೂಲಕ ತನ್ನಂತರಂಗದಲ್ಲೇ ಇರುವ ಪರಮಾತ್ಮನ ಇರುವಿಕೆಯನ್ನು ಪ್ರಕಟಮಾಡುತ್ತಾ, ಅರಿವು ಮೂಡಿಸುತ್ತಾನೆ. ಅವೇನು ಪವಾಡಗಳಲ್ಲ . ಅಂತಹ ಸಂದರ್ಭಗಳಲ್ಲಿ ಆ ಭಕ್ತನು ನನಗೆ ಐಸ್ ಕ್ರೀಮ್ ತಿನ್ನುವ ಆಸೆಯಾಗಿತ್ತು , ಆಗಲೇ ಯಾರೋ ಐಸ್ ಕ್ರೀಮ್ ತಂದುಕೊಟ್ಟರು , ನನಗೊಂದು ಕುರ್ಚಿ ಬೇಕಾಗಿತ್ತು , ಆಗಲೇ ಯಾರೋ ಕುರ್ಚಿಯನ್ನು ತಂದುಕೊಟ್ಟರು ಎಂದೆಲ್ಲಾ ಸಂತೋಷಪಡುತ್ತಾನೆ. ಅದನ್ನೆಲ್ಲಾ ಭಗವಂತನೇ ಪಾರ್ಸಲ್ ಕಳಿಸಿರುತ್ತಾನೆ. ಭಕ್ತನು ಸಂತೋಷಪಟ್ಟು ನಾನು ಮನಸ್ಸಿನಲ್ಲಿ ಅಂದುಕೊಂಡದ್ದನ್ನು ಪರಮಾತ್ಮನು ನೆರವೇರಿಸಿ ಬಿಟ್ಟನಪ್ಪ ಎನ್ನುತ್ತಾನೆ. ಸಣ್ಣಪುಟ್ಟದ್ದನ್ನು ಕೇಳಿದಾಗ ದತ್ತನು ನೆರವೇರಿಸಿ ಬಿಡುತ್ತಾನೆ. ಆದರೆ ದೊಡ್ಡದನ್ನು ಅವನು ಸುಲಭವಾಗಿ ಕೊಡುವುದಿಲ್ಲ. ಭಕ್ತನು ಅದನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾನೆ ಎಂಬುದನ್ನು ಪರಿಗಣಿಸುತ್ತಾನೆ.
ತನ್ನ ಮನಸ್ಸಿನಲ್ಲಿ ನಡೆಯುವ ಎಲ್ಲಾ ಯೋಚನೆಗಳು, ಕ್ರಿಯಾಶೀಲತೆ ಎಲ್ಲಾ ಪರಮಾತ್ಮನಿಗೆ ಗೊತ್ತಿರುತ್ತದೆ ಎಂಬುದನ್ನು ಜೀವಿ ಏಕೆ ಅರಿತು ಕೊಳ್ಳುವುದಿಲ್ಲ?

ಮನಸ್ಸಿನಲ್ಲಿ ಉಂಟಾದ ಬಯಕೆಗಳನ್ನು ಅರಿತಿರುವವಗೆ , ಅದೇ ಮನಸ್ಸಿನಲ್ಲಿ ನಡೆಯುವ ಎಲ್ಲಾ ಸಂಗತಿಗಳು ಕೂಡ ಗೊತ್ತಾಗುತ್ತದೆ ಎಂಬ ಅರಿವಿನಿಂದ ಬದುಕುವುದೇ ಸ್ವಾನುಭವ.

ಭಗವಂತ ನಮ್ಮನ್ನು ಸದಾ ಗಮನಿಸುತ್ತಿರುತ್ತಾನೆ. ಸತ್ಸಂಗದಲ್ಲಿ ಭಾಗಿಯಾದಾಗ , ಸತ್ಕಾರ್ಯಗಳನ್ನು ಮಾಡುವಾಗ ಪರಮಾತ್ಮನು ಜೀವಿಯನ್ನು ಹೆಚ್ಚಾಗಿ ಗಮನಿಸುತ್ತಾನೆ. ಆದರೆ ವಿಷಯಾದಿಗಳೆಲ್ಲಾ ಮುಳುಗಿದ್ದಾಗ ಅಷ್ಟಾಗಿ ಗಮನ ಕೊಡುವುದಿಲ್ಲ. ಆಗಲೂ ಗಮನಿಸುತ್ತಿದ್ದರೂ ಸಹ , ಇದೆಲ್ಲ ಇದ್ದಿದ್ದೆ ಬಿಡು ಎಂದುಕೊಂಡು ಹೆಚ್ಚಿಗೆ ಗಮನಿಸಲು ಹೋಗುವುದಿಲ್ಲ.

ಅವಗುಣಗಳು ಅಲ್ಪಸ್ವಲ್ಪ ಇದ್ದಾಗ ಸುಮ್ಮನಿದ್ದುಬಿಡುತ್ತಾನೆ. ಆದರೆ ಅದು ಅತಿಯೆನಿಸುವ ಮಟ್ಟಕ್ಕೆ ಹೋದಾಗ ಏಟು ಕೊಡುತ್ತಾನೆ.

ಮಕ್ಕಳು ಮನೆಯಲ್ಲಿ ಆಟವಾಡುತ್ತಾ ಸಾಮಾನುಗಳನ್ನು ಹರಡುವುದು , ಹೊರಗೆ ಮಣ್ಣಿನಲ್ಲಿ ಆಡಿ ತಲೆಯ ಮೇಲೆ ಮಣ್ಣು ಸುರಿದು ಕೊಳ್ಳುವುದು ಹೀಗೆಲ್ಲಾ ಮಾಡಿದಾಗ ತಾಯಿಯು ಸ್ವಲ್ಪ ಹೊತ್ತು ಸುಮ್ಮನಿರುತ್ತಾಳೆ. ಸಣ್ಣ ಮಗು ಆಟವಾಡಿ ಕೊಳ್ಳಲಿ ಬಿಡು ಎಂದು ನಕ್ಕು ಸುಮ್ಮನಿರುತ್ತಾಳೆ. ಆದರೆ ಮಗುವು ಅನ್ನಕ್ಕೆ ಮಣ್ಣು ಹಾಕಿದರೆ ತಾಯಿ ಸುಮ್ಮನಿರುವುದಿಲ್ಲ. ಮಗುವಿಗೆ ಏಟು ಕೊಟ್ಟು ಶಿಕ್ಷಿಸಿ ಬುದ್ಧಿ ಹೇಳುತ್ತಾಳೆ. ಗುರು ಇದೇ ರೀತಿ ಭಕ್ತನನ್ನು ಶಿಕ್ಷೆಗೆ ಒಳಪಡಿಸಿಯಾದರೂ ತಿದ್ದುತ್ತಾರೆ‌ , ಬುದ್ಧಿ ಕಲಿಸುತ್ತಾರೆ. ಆದರೆ ಗುರು ಎಂದಿಗೂ ತನ್ನ ಭಕ್ತನನ್ನು ಕೈಬಿಡುವುದಿಲ್ಲ. ಶಾಸ್ತ್ರ ವೇದ-ಪುರಾಣಗಳು ಸುಳ್ಳಾದರೂ ಸಹ ಈ ಅನುಭವದ ನುಡಿ ಸುಳ್ಳಾಗುವುದಿಲ್ಲ.

ಜೈ ಗುರು ದೇವದತ್ತ

                 

ಅಪ್ಪನ ನುಡಿಗಳು –

ಮನುಷ್ಯ ಪ್ರಪಂಚದ್ದುಕ್ಕೋಸ್ಕರ ಎಷ್ಟೋ ಹೋರಾಟ ಮಾಡುತಾನೆ.ನಿದ್ರೆಗೆಡುತಾನೆ,ಹೋಗಬಾರದ ಕಡೆ ಹೋಗುತಾನೆ,ಮಾಡಬಾರದ್ದು ಬೇಕಾದರೆ ಮಾಡುತಾನೆ,ಹಿಡಿಯಬಾರದವರ ಕಾಲು‌ ಹಿಡಿಯುತ್ತಾನೆ. ಅದ್ಯಾವುದೂ ಅವನು ದೇಹ ಬಿಟ್ಟ ಮೇಲೆ ಅವನ ಮುಂದಿನ ಗತಿಗೆ ಉಪಯೋಗ ಆಗಲ್ಲ.ಹೆಂಡತಿ ಮಕ್ಕಳಿಗೆ ಅಂತ ಜನ್ಮವಿಡೀ ಹೆಣಗಾಡುತ್ತಾನೆ.ಆದರೆ ಭಗವತ್ಕಾರ್ಯಕ್ಕೆ ಒಂದು ಕಲ್ಲು ಎತ್ತಾಕಿದ್ದೂ ಕೂಡಾ ಅಪಾರವಾದ ಪುಣ್ಯ ದೊರಕಿಸಿಕೊಡುತ್ತೆ.

ಒಂದು ಊರಿಗೆ ಒಂದು ಗ್ರಾಮದೇವತೆ,ಮನೆಗೆ ಮನೆದೇವರು,ಗಡಿಗೊಂದು ದೇವರು,ನಾಡಿಗೊಂದು ದೇವರು ಅಂತ ಯಾಕೆ ಮಾಡಿರೋದು …
ಭಗವಂತ ಅಂದರೆ ಬರೀ ವಿಗ್ರಹ ಅಲ್ಲ,ಕಲ್ಲಲ್ಲ,ಸತ್ಯವಾಗ್ಲೂ ಪರಮಾತ್ಮ ಅಲ್ಲಿ ಪ್ರಕಟನಾಗುತ್ತಾನೆ.
ಪ್ರತಿ ದಿನ ದೇವರಿಗೆ ನಮಸ್ಕಾರ ಮಾಡ್ರಿ, ಅವನು ರಕ್ಷಣೆ ಮಾಡುತ್ತಾನೆ.ಘೋರವಾದ ವಿಪತ್ತು ಬಂದಾಗಲೂ ಪರಮಾತ್ಮನ ಕೃಪೆಯಿಂದ ನಿಮಿಷಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನೆಲ್ಲಾ ನಾನು ಅನುಭವಿಸಿದ್ದನ್ನೇ ಹೇಳುತಾ ಇರೋದು.ಭಿಕ್ಷೆ ಬೇಡಿ ತಂದು ಪ್ರಸಾದ ಮಾಡಿ‌ ಕನ್ನೇಶನ‌ ಗುಡಿ ಹತ್ತಿರ ಬಂದೋರಿಗೆ ಪ್ರಸಾದ ಕೊಡುತ್ತಿದ್ದೆ.ಭಗವಂತ ಇವತ್ತು ನನ್ನನ್ನು ‌ಈ ಸ್ಥಿತಿಯಲ್ಲಿ ಇಟ್ಟಿದ್ದಾಗಲೂ ,ಬಂದೋರಿಗೆ ನನ್ನ ಕೈಯಲ್ಲಾದ‌ ಸಹಾಯ ಮಾಡಿಕೊಂಡು , ಒಂದು ತುತ್ತು ಪ್ರಸಾದ ಕೊಟ್ಕಂಡು ಇದೀನಿ.

ನೀವುಗಳು ಕೂಡಾ ಭಗವಂತನ ಸ್ಮರಣೆ ಮಾಡಿಕೊಂಡು ‌,ಜೀವನ ಮಾಡ್ಕಂಡೋಗ್ರಿ..ನಂಬಿರಿ..

ಮನುಷ್ಯ ತಾನು ಪ್ರಯತ್ನ ಮಾಡದಲೆ ಒಂದು ಕಾರ್ಯ ನಿಂತಿರುತ್ತದೆಯೇ ಹೊರತು, ಪ್ರಯತ್ನ ಮಾಡಿದರೆ‌ ಸತ್ಕಾರ್ಯಗಳಿಗೆ ಪರಮಾತ್ಮನ ಅಭಯ ಖಂಡಿತಾ ಸಿಗುತ್ತದೆ.

ಜೈ ಗುರುದೇವ ದತ್ತ

              

ಶ್ರೀಸತ್ಉಪಾಸಿ ಜ್ಞಾನನಿಧಿ.


ಕರ್ಮಕ್ಕೆ ತಕ್ಕಂತೆ ಜನ್ಮ ಸಿಗುತ್ತೆ
ಯಾರು ಜೀವಿತ ಕಾಲದಲ್ಲಿ
ಗೊತ್ತಿದ್ದೊ ಗೊತ್ತಿಲ್ಲದೇನೋ
ಗುರುಸೇವೆ ಭಕ್ತಿ ಭಜನೆ ಧ್ಯಾನ ದಾನ ಧರ್ಮಾದಿಗಳನ್ನು ಮಾಡಿರ್ತಾರೋ
ಅವರಿಗೆ ಎಂದೂ ಅಧೋಗತಿ ಆಗದಿಲ್ಲ.
ಅದಕ್ಕೆ ಜೀವಿತ ಕಾಲದಲ್ಲೇ
ಸಿದ್ಧತೆ ಮಾಡಿಕೊಳ್ಳಬೇಕು.

ಜೈಗುರುದೇವದತ್ತ.

                

ಶ್ರೀಸತ್ ಉಪಾಸಿ ಜ್ಞಾನನಿಧಿ


ಭಗವತ್ ಸೇವೆಯಿಂದ ಸತ್ಫಲವೇ ದೊರೆಯುತ್ತದೆ.ದತ್ತನೇ ಆಯ್ಕೆ ಮಾಡ್ಕಂಡು ಅವಕಾಶ ಕೊಟ್ಟು ಕರೆಸಿಕೊಂಡು ಸೇವೆ ಮಾಡಿಸಿಕೊಂಡು ಅತಿಶಯವಾದ ಫಲ ಕೊಡುತ್ತಾನೆ.

ಭಗವತ್ಕಾರ್ಯ ,ಭಗವತ್ ಸೇವೆಯಿಂದ ದೊರೆಯುವ ಪುಣ್ಯದ ಗಂಟು ನಿಮಗೆ ಪರಹಿತ ಶ್ರೇಯಸ್ಸನ್ನು ಮಾಡಿಕೊಡುತ್ತೆ.

ಜೈಗುರುದೇವದತ್ತ

              

ಪ್ರಸಾದವನ್ನು ಆತ್ಮಾರ್ಪಣ ಬುದ್ಧಿಯಿಂದ ಸೇವಿಸಬೇಕು


ಅಪ್ಪನವರ ನುಡಿ :

ಪ್ರಸಾದವನ್ನು ಸೇವಿಸಲು ಕುಳಿತಾಗ , ಇಂದ್ರಿಯಗಳಿಗೆ ಆದೇಶ ಮಾಡುತ್ತೇನೆ.., “ಒಂದೊಂದು ತುತ್ತು ಪ್ರಸಾದ ಸೇವಿಸುವಾಗ ಆಗಲಿ ,ನೀರು ಕುಡಿಯುವಾಗಲೇ ಆಗಲಿ, ನನಗೆ ಅರ್ಪಿಸಿ ನೈವೇದ್ಯ ಮಾಡಿಯೇ ಸ್ವೀಕರಿಸಬೇಕು” ಎಂದು.ಅದೇ ರೀತಿಯಲ್ಲಿ ಪ್ರಸಾದ ಸ್ವೀಕರಿಸಿದಾಗ ಪ್ರತಿಯೊಂದು ತುತ್ತು ಆತ್ಮರ್ಪಣವಾಗಿರುತ್ತದೆ. ಆತ್ಮಾರ್ಪಣವಾಗದೆ ಒಂದು ತುತ್ತು ಪ್ರಸಾದವು ಒಳಗೆ ಹೋಗುವಂತಿಲ್ಲ.ಹಾಗೆಯೇ ಒಳಗೆ ಹೋದರೆ ಅದು ನನಗೆ ಗೊತ್ತಾಗುವುದಿಲ್ಲವೇ ? ಏಕೆಂದರೆ ಒಳಗೆ ನಾನೇ ಇರುವುದು. ಹೀಗಾಗಿ ಇಂದ್ರಿಯಗಳಿಗೆ ಆಗಲೇ ಭಯ ಹುಟ್ಟಿದೆ.ಆದ್ದರಿಂದ ಅವು ಏನೇ ಮಾಡಿದರೂ ನನ್ನ ಸ್ಮರಣೆ ಮಾಡುತ್ತಿರುತ್ತವೆ. ಆಗ ಅವು ನಾನು ಇರುವವರೆಗೂ ಸ್ಮರಣೆಯನ್ನು ಮಾಡುತ್ತಿರುತ್ತವೆ., ಧನ್ಯವಾಗುತ್ತವೆ. ಈ ರೀತಿಯಲ್ಲಿ ಪ್ರಸಾದ ಸೇವನೆ ಆಗುತ್ತದೆ. ಇದಕ್ಕಿಂತ ಇನ್ನು ಯಾವ ಸಾಧನೆ ಬೇಕು? ಈ ಮಟ್ಟಕ್ಕೆ ವ್ಯಕ್ತಿಯು ಬರಬೇಕು.ಅದು ಬಿಟ್ಟು ಪ್ರಾಣಿಗಳಂತೆ ಉಣ್ಣಬಾರದು. ಯಾರೊಂದಿಗೋ ಮಾತನಾಡುತ್ತಾ ,ಎಲ್ಲೋ ನೋಡುತ್ತಾ, ಕೆರೆದುಕೊಳ್ಳುತ್ತಾ ಪ್ರಸಾದ ತೆಗೆದುಕೊಳ್ಳಬಾರದು.

             

ಶ್ರೀಸತ್ಉಪಾಸಿ ಸದ್ಗುರು ದಿವ್ಯ ಸಂದೇಶ

‘ಭಕ್ತವೃಂದಕ್ಕೆ ಶುಭವಾಗಲಿ. ಕಾಲಕಾಲಕ್ಕೆ ಭಗವಂತನೇ ಅನೇಕ ಬಾರಿ ಅವತರಿಸುತ್ತಾನೆ, ಮಾರ್ಗದರ್ಶನವನ್ನೂ ನೀಡುತ್ತಾನೆ, ಎನ್ನುವದಕ್ಕೆ ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತವೇ ಸಾಕ್ಷಿ. ಅನೇಕ ಸಂಶಯಗಳ ಸುಳಿಯಲ್ಲಿ ಸಿಲುಕಿ ಪರಿತಪಿಸುವ ಜೀವಿಗಳ ಉದ್ಧಾರಕ್ಕಾಗಿಯೇ ಈ ಗ್ರಂಥವನ್ನು ಏಳುನೂರು ವರ್ಷಗಳ ನಂತರ ನಮಗೆ ಗೋಚರಿಸುವಂತೆ ಮಾಡಿದ್ದಾನೆ. ಇದು ನಮ್ಮೆಲ್ಲರ ಭಾಗ್ಯ. ಅನೇಕ ಜನ್ಮಗಳಿಂದ ಮಾಡಿದ ಪುಣ್ಯಫಲದಿಂದ, ಮಾಡಿದ ಸೇವೆಯಿಂದ, ಅವನ ಕೃಪೆಯು ಈ ರೀತಿಯಾಗಿ ಹರಿದು ಬಂದಿದೆ. ಇದು ನಮ್ಮ ಜನ್ಮೋದ್ಧಾರಕ್ಕಾಗಿ ಬಂದ ಮಹಾ ಸಂಪತ್ತೆಂದು ಭಾವಿಸಿ ಜನ್ಮ ಸಾರ್ಥಕಗೊಳಿಸಿಕೊಳ್ಳುವದು ನಮ್ಮ ಧ್ಯೇಯವಾಗಬೇಕು. …….. ಆದ್ದರಿಂದ ತಾವುಗಳೆಲ್ಲರೂ ಈ ಮಹಾಗ್ರಂಥವನ್ನು ನಮ್ಮ ಸದ್ಗುರುನಾಥನಾದ ಶ್ರೀದತ್ತಪ್ರಭುವೇ, ಶ್ರೀಪಾದವಲ್ಲಭರಾಗಿ ನಮಗೆ ಕರುಣಿಸಿದ್ದಾನೆ ಎಂದು ದೃಢವಾಗಿ ನಂಬಿ ಇದನ್ನು ಅವರ ಪ್ರಸಾದವೆಂದು ಸ್ವೀಕರಿಸಿ, ಅದರಲ್ಲಿರುವ ಗುರು ಮಹಿಮೆಯನ್ನು ಅರಿತು ಧನ್ಯರಾಗಬೇಕೆಂದು ಆಶೀರ್ವದಿಸುತ್ತೇನೆ.
ಇದರಲ್ಲಿ ಫಲಾಫಲಗಳನ್ನು ಗಮನಿಸದೆ, ಅವನನ್ನು ಪಡೆಯಲಿಕ್ಕಾಗಿ, ಅವನ ಅನುಗ್ರಹಕ್ಕಾಗಿಯೇ, ಅದೊಂದೇ ನಮ್ಮ ಗುರಿ ಎಂದು ಭಾವಿಸಿ ಈ ಗ್ರಂಥವನ್ನು ಪಠಿಸಿರಿ. ಏಕೆಂದರೆ ನೀವು ಈಗಾಗಲೇ ಭಗವದ್ಭಕ್ತರಾಗಿಬಿಟ್ಟಿದ್ದೀರಿ. ಇದರಲ್ಲಿ ಸಂಶಯವೇ ಇಲ್ಲ. ಇದರಲ್ಲಿ ಫಲಾಫಲಗಳ ಕುರಿತಾಗಿ ಅಧ್ಯಾಯ ಅಧ್ಯಾಯಕ್ಕೆ ಇಂತಿಂಥಾ ಫಲಗಳು ದೊರೆಯುತ್ತವೆ ಎಂದು ಹೇಳಿದೆ, ನಿಜ. ಇದು ನಂಬಿಕೆಯನ್ನು ಬರಿಸಿ ಭಕ್ತರನ್ನಾಗಿಸಲು ಫಲಗಳನ್ನು ನೀಡಿ ಈ ಗ್ರಂಥವನ್ನು ಪಠಿಸುವಂತೆ ಮಾಡಿ ನಿಧಾನವಾಗಿ ತನ್ನತ್ತ ಸೆಳೆದು ಅವರನ್ನು ಉದ್ಧರಿಸಬೇಕೆಂಬುದೇ ಶ್ರೀಪಾದವಲ್ಲಭರ ಮಹಾ ಮೋಡಿಯಾಗಿದೆ.
ಆದ್ದರಿಂದ ನಿಮಗೆ ಆ ಮೋಡಿಯ ಅವಶ್ಯಕತೆಯೇ ಇಲ್ಲ. ಈಗಾಗಲೇ ನೀವೇ ಅವನನ್ನು ನಿಮ್ಮತ್ತ ಸೆಳೆದುಕೊಂಡು ಬಿಟ್ಟಿದ್ದೀರಿ. ಇದು ಸತ್ಯ. ಧೃತಿಗೆಡಬೇಡಿ. ಧೈರ್ಯಗೆಡಬೇಡಿ. ಈ ಜನ್ಮಕ್ಕೇ ಎಲ್ಲವೂ ಕೊನೆಯಾಗಲಿ. ಜನನ ಮರಣಗಳಿಗೆ ಅಂತ್ಯವನ್ನೇ ಹಾಡಿ ಬಿಡೋಣ. ಯಾವುದೂ ಇಲ್ಲಿ ಇರುವದಕ್ಕೆ ಬಂದಿಲ್ಲ. ಬರುವದೆಲ್ಲವೂ ಬರಲಿ, ಹೋಗುವದೆಲ್ಲವೂ ಹೋಗಲಿ, ಗುರುವೇ ನಿನ್ನ ಅನುಗ್ರಹಕ್ಕಾಗಿ ಎಂದು, ನಿನ್ನನ್ನು ಪಡೆಯುವದಕ್ಕಿಂತಾ ಮಹತ್ವವಾದದ್ದು ಬೇರೊಂದಿಲ್ಲ, ಎಂದು ಅವನನ್ನು ಧ್ಯಾನಿಸುತ್ತಾ, ಸ್ತುತಿಸುತ್ತಾ, ಸೇವಿಸುತ್ತಾ ಸ್ವಯಂಭೂ ಶ್ರೀಪಾದ ಶ್ರೀವಲ್ಲಭನೆಡೆಗೆ ಧಾವಿಸಿರಿ. ನಿಮಗೆ ಶ್ರೇಯಸ್ಸಾಗಲಿ, ನಿಮಗೆ ಮಂಗಳವಾಗಲಿ, ಆ ‘ಘನ ಸಾಯುಜ್ಯ’ಕ್ಕಾಗಿ ಸಜ್ಜಾಗಿರಿ, ಎಂದು ಆಶೀರ್ವದಿಸುತ್ತಾ ಸೂಕ್ಷ್ಮವಾಗುತ್ತೇನೆ’ – ಶ್ರೀ ಸತ್ ಉಪಾಸಿ

ಅಪ್ಪನ ಅನುಭವ ವಾಣಿ —

ಪ್ರತಿಯೊಂದು ಜೀವಿಯೂ ಆತ್ಮಧ್ಯಾನ ಮಾಡಲೇಬೇಕು.ಉಸಿರನ್ನು ಗಮನಿಸುವ ಸಾಧನೆಯೇ ಪರಮಾತ್ಮನನ್ನು ಅರಿಯಲು ಮಹಾಸಾಧನ.ಇದಕ್ಕಿಂತಲೂ ಮಹತ್ತಾದದ್ದು ಇನ್ನಾವುದೂ ಇಲ್ಲ. ತನ್ನನ್ನು ತಾನೇ ತಿಳಿಯಲು ಘನವಾದ ತಂತ್ರವಿದು.ಘನವಾದ ದಾರಿ ಇದು.ಯಾರೂ ಇದನ್ನು ಅರ್ಥ ಮಾಡಿಕೊಳ್ಳುತ್ತಾ ಇಲ್ಲ. ಸದಾ ಪ್ರಪಂಚದಲ್ಲಿ ಮುಳುಗಿರುವವರಿಗೆ ಇದು ಅರ್ಥ ಆಗುವುದು ಕಷ್ಟ.ವಿವರಿಸಿ ಹೇಳಿದರೂ ಸಹಕರಿಸುವುದಿಲ್ಲ.ಮನಸ್ಸು ಅತ್ತ ಇತ್ತ ಹರಿದಾಡಬಹುದು, ದೃಢವಾಗಿ ಪ್ರಯತ್ನ ಮಾಡುತ್ತಾ ಹೋಗಿರಿ . ಕೈ ಬಿಡದೆ ಪ್ರಯತ್ನ ಮಾಡುತ್ತಾ , ಮತ್ತೆ ಮತ್ತೆ ಅದನ್ನು ಸರಿ ದಾರಿಗೆ ತರಬಹುದು. ಕುಂತರೂ ನಿಂತರೂ ಏನು ಮಾಡಿದರೂ ಅದರಲ್ಲಿಯೇ ಇದ್ದಾಗ ಮಾತ್ರ ತನ್ನೊಳಗೆ ಎಂಥಾ ಮಹತ್ವ ಇದೆ ಎನ್ನುವುದು ಗೊತ್ತಾಗುತ್ತದೆ.ಇನ್ನೆಲ್ಲೂ ಇರದಿರುವಂತಹುದು ಒಳಗೇ ಪ್ರಕಟವಾಗುತ್ತದೆ.

ಜೈ ಗುರುದೇವ ದತ್ತ

ಶ್ರೀಸತ್ಉಪಾಸಿ ಗುರುವಾಣಿ

( ಸ್ವಾನುಭವಸಾರ )

ನಾವು ಎಷ್ಟು ಸೇವೆ, ಸ್ಮರಣೆ, ಧ್ಯಾನ, ಪರೋಪಕಾರ ಮಾಡಿದ್ದೇವೆ , ಸಂಸಾರದಲ್ಲಿ ಎಷ್ಟು ಮುಳುಗಿದ್ದೇವೆ , ಪರಮಾರ್ಥದಲ್ಲಿ ಎಷ್ಟೆಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂಬುದೆಲ್ಲವೂ ಭಗವಂತನಿಗೆ ಉಸಿರಾಟದ ಮೂಲಕವೇ ಗೊತ್ತಾಗುತ್ತಿರುತ್ತದೆ.

ಸದ್ಗುರು ವಾಣಿ

ಗುರು ನಿತ್ಯವೂ ಅರ್ಹ ಭಕ್ತರಿಗೆ ತನ್ನ ಆಧ್ಯಾತ್ಮಿಕ ಸಂಪತ್ತನ್ನು ಧಾರೆ ಎರೆಯುತ್ತಾನೆ.
ಇದು ಅವನು ಪ್ರತಿ ದಿನ ಮಾಡುವ ಯಜ್ಞ.


ಗುರುವಿನ ನೋಟ ಮಾತು ಎಲ್ಲಾ ಮಂತ್ರ ಸ್ವರೂಪವೇ ಆಗಿರುತ್ತದೆ.


ಮಂತ್ರಿಯ ಮೂಲಕ ರಾಜನ ದರ್ಶನ ಸುಲಭವಾಗಿ ಆಗುವಂತೆ ಗುರುವಿನ ಕೃಪೆಯಿಂದ ಹೃದಯದಲ್ಲಿ ದೈವದ ದರ್ಶನ ಸುಲಭ.


ಯಾವನು ಬೇರೆಯವರ ದೋಷಗಳ ಬಗ್ಗೆನೇ ಯೋಚನೆ ಮಾಡುತ್ತಿರುತ್ತಾನೊ ಅವನು ಅದೇ ಆಗಿ ಬಿಡುತ್ತಾನೆ.


ಭಗವಂತನು ಮನುಷ್ಯನಿಗೆ ಕರುಣಿಸುವ ಎಲ್ಲಾ ಭಾಗ್ಯಗಳಲ್ಲಿ ಅತಿಶಯವಾದ ವರವೇ
” ಗುರು”.


ಪರಮಾತ್ಮ ಸಾಗರ ಇದ್ದಂಗೆ ,ಎಲ್ಲಾ ದೈವ ಸ್ವರೂಪಗಳು ಅಲೆಗಳು ಇದ್ದಂಗೆ .


ಸದ್ಗುರು ಏನು ಹೇಳುವರೋ ಅದೇ ಸನ್ಮಾರ್ಗ


ಪ್ರಪಂಚದ ವಿಚಾರದಲ್ಲಿ ಆಮೆ ತರ ಇರಬೇಕು. ಯೋಚಿಸಿ ಮುಂದುವರಿಬೇಕು.ಆಧ್ಯಾತ್ಮಿಕದಲ್ಲಿ ಸರ್ಪದಂತೆ ..
ಸರಸರ ಹೊಂಟೋಗ್ತಾ ಇರಬೇಕು.


ಭಗವದ್ಭಕ್ತಿ , ಶಾಂತಿಯೇ ನಿಜವಾದ ಸುಖ


ಗುರುವು ಎತ್ತರಕ್ಕಿಂಥ ಎತ್ತರ!
ಬೆಳಕಿಗಿಂತಾ ಬೆಳಕು!
ಸೂಕ್ಷ್ಮಕ್ಕಿಂತಾ ಸೂಕ್ಷ್ಮ,
ಯಾವುದಕ್ಕೂ ಸಿಗದಿರೋ ಪರತತ್ವ!
ಅಸದಳವಾಗಿ ಕೃಪೆ ಮಾಡುವನು.
ಸ್ವಾನುಭವದಲ್ಲಿ ಕೊನೆಯಾಗುವನು.

-- ಸದ್ಗುರು ಶ್ರೀಸತ್ಉಪಾಸಿ ನುಡಿ

ಅಪ್ಪನ ಅನುಭವ ವಾಣಿ

ಪ್ರತಿಯೊಂದು ಜೀವಿಯೂ ಆತ್ಮಧ್ಯಾನ ಮಾಡಲೇಬೇಕು.ಉಸಿರನ್ನು ಗಮನಿಸುವ ಸಾಧನೆಯೇ ಪರಮಾತ್ಮನನ್ನು ಅರಿಯಲು ಮಹಾಸಾಧನ.ಇದಕ್ಕಿಂತಲೂ ಮಹತ್ತಾದದ್ದು ಇನ್ಯಾವುದೂ ಇಲ್ಲ. ತನ್ನನ್ನು ತಾನೇ ತಿಳಿಯಲು ಘನವಾದ ತಂತ್ರವಿದು.ಘನವಾದ ದಾರಿ ಇದು.ಯಾರೂ ಇದನ್ನು ಅರ್ಥ ಮಾಡ್ಕಂತಾ ಇಲ್ಲ. ಸದಾ ಪ್ರಪಂಚದಲ್ಲಿ ಮುಳುಗಿರುವವರಿಗೆ ಇದು ಅರ್ಥ ಆಗುವುದು ಕಷ್ಟ..ವಿವರಿಸಿ ಹೇಳಿದರೂ ಸಹಕರಿಸದಿಲ್ಲ.ಮನಸ್ಸು ಅತ್ತ ಇತ್ತ ಹರಿದಾಡಬೋದು, ದೃಢವಾಗಿ ಪ್ರಯತ್ನ ಮಾಡ್ತಾ ಹೋಗ್ರಿ, ಕೈ ಬಿಡದೆ ಪ್ರಯತ್ನ ಮಾಡ್ತಾ , ಮತ್ತೆ ಮತ್ತೆ ಅದನ್ನು ಸರಿ ದಾರಿಗೆ ತರಬಹುದು. ಕುಂತರೂ ನಿಂತರೂ ಏನು ಮಾಡಿದರೂ ಅದರಾಗೇ ಇದ್ದಾಗ ಮಾತ್ರ ತನ್ನೊಳಗೆ ಎಂಥಾ ಮಹತ್ವ ಐತೆ ಅನ್ನದು ಗೊತ್ತಾಗುತ್ತದೆ.ಇನ್ನೆಲ್ಲೂ ಇರದಿರುವಂತಹುದು ಒಳಗೇ ಪ್ರಕಟವಾಗುತ್ತದೆ.

ಜೈ ಗುರುದೇವ ದತ್ತ

ಭಜನೆ

ವಿಭಜನೆ ಎಂದರೆ ಬೇರೆಯಾಗುವುದು.ಭಜನೆ ಎಂದರೆ ಒಂದಾಗುವುದು.. ನಮ್ಮೊಳಗೇ ಇರುವ ಪರಮನೊಂದಿಗೆ ಒಂದಾಗುವುದು.

ಎಲ್ಲಾ ಕಾರ್ಯದಲ್ಲೂ ಎಲ್ಲಾ ವಿಚಾರದಲ್ಲೂ ಎಲ್ಲಾ ಸಂದರ್ಭದಲ್ಲೂ ನಾನು, ನನ್ನಿಂದಲೇ, ನಾನಿರುವುದರಿಂದಲೇ ಎಂಬ ಭಾವನೆಗಳು ಮತ್ತು ನಾನಿಲ್ಲದಿದ್ದರೆ ಸಾಮಾನ್ಯ ಹಾಗೂ ಭಗವದ್ ಕಾರ್ಯಗಳು ಯಾವುವೂ ನಡೆಯುವುದಿಲ್ಲ, ಭಜನೆ, ಸತ್ಸಂಗ ಇತ್ಯಾದಿ ಮಂಗಳ ಕಾರ್ಯಗಳು ನಡೆಯಲು ನಾನೇ ಕಾರಣ ,ಆದ್ದರಿಂದ ನಾನು ದೊಡ್ಡವನು.. ಬುದ್ದಿವಂತನು ಎಂಬ ಅಭಿಮಾನವು ಮನುಷ್ಯನಲ್ಲಿ ಎಲ್ಲಿಯವರೆಗೂ ನಿಲ್ಲುವುದಿಲ್ಲವೋ ಅಲ್ಲಿಯ ತನಕ ಅವನು ದೊಡ್ಡವನಾಗಲಾರನು, ಸದ್ಗುರುವಿಗೆ ಹತ್ತಿರವಾಗಲಾರನು. ಚಿಕ್ಕವನಿಗಿಂತಲೂ ಚಿಕ್ಕವನು ಅವನು.

ನಾನೇನೂ ಅಲ್ಲ ,ಇದಕ್ಕೆಲ್ಲಾ ಕಾರಣ ಭಗವಂತ ಸದ್ಗುರು. ನಾನು ಕೇವಲ ನೆಪಮಾತ್ರ ,ನಾನು ತುಂಬಾ ಚಿಕ್ಕವನು.. ಇದಕ್ಕೆಲ್ಲಾ ಸದ್ಗುರುವೇ ಸಮರ್ಥನು. ನಾನು ಅವನ ಮುಂದೆ ಅಸಮರ್ಥ. ನಡೆಯುವ ನಡೆಯುತ್ತಿರುವ ಎಲ್ಲಾ ಕಾರ್ಯಕ್ಕೂ ಆಗುಹೋಗುಗಳಿಗೂ ಅವನೇ ಕಾರಣ, ಅವನಿಲ್ಲದಿದ್ದರೆ ಯಾವುದೂ ಇಲ್ಲ ,ನಾನಿರುವುದಕ್ಕೂ ಅವನೇ ಕಾರಣ ಎಂದು ಅವನ ಕಡೆ ಮುಖ ಮಾಡಿ ಕೈ ಜೋಡಿಸುವವನೇ ಎಲ್ಲರಿಗಿಂತಲೂ ದೊಡ್ಡವನು. ಅವನು ಚಿಕ್ಕವನಾಗಿದ್ದರೂ ಬುದ್ದಿವಂತನಲ್ಲದಿದ್ದರೂ ಕೊನೆಯ ಸಾಲಲ್ಲಿ ಕುಳಿತಿದ್ದರೂ ಎಲ್ಲರಿಂದಾಚೆ ನಿಂತಿದ್ದರೂ ಅವನೇ ಎಲ್ಲರಿಗಿಂತಲೂ ದೊಡ್ಡವನು, ಹಿರಿಯನು. ದೇವರಿಗೆ ಗುರುವಿಗೆ ಹತ್ತಿರದವನೂ, ಸಮೀಪನು ,ಭಗವಂತನಿಗೆ ಪ್ರಿಯನು.

ಯಾವನು ಭಗವಂತನಿಗೆ ಶರಣಾಗುತ್ತಾನೋ ಭಯದಿಂದ ಬದುಕುತ್ತಾನೋ ಅವನು ಎಲ್ಲರಿಗೂ ಹೆದರುತ್ತಾನೆ, ಅಂಜುತ್ತಾನೆ, ಅಳುಕಿ ಬಾಳುತ್ತಿರುತ್ತಾನೆ. ಅಂತಹ ಭಗವದ್ ಭಯವುಳ್ಳವನೆದುರಿಗೆ ನಿಲ್ಲಲು ಎಲ್ಲರೂ ಹೆದರುತ್ತಾರೆ. ಅವನಿಗೆ ಭಯಪಡುತ್ತಾರೆ. ಅವನ ಮುಂದೆ ಅಂಜಲಿಬದ್ದರಾಗಿ ಅವನಿಗೆ ಕೈ ಜೋಡಿಸುತ್ತಾರೆ.

ಮನಸ್ಸು ತಳಮಳದಿಂದ ಇದ್ದಾಗ ಏನು ಮಾಡಬೇಕೆಂದು ವಿನಂತಿ ಮಾಡಲು ಅಪ್ಪ ಹೀಗೆ ಹೇಳಿದರು.

ಹಳ್ಳಿಯಲ್ಲಿ ಎಮ್ಮೆಗಳು ಬಿಸಿಲಿನ ತಾಪವನ್ನು ತಡೆದುಕೊಳ್ಳಲಾಗದೆ ಹೋಗಿ ಹಳ್ಳದಾಗೆ ಇಳಿಯುತ್ತವೆ.ಹಸಿವೆಯಾದಾಗ ಹೊರಗೆ ಬಂದು ಮೇಯುತ್ತವೆ. ಮತ್ತೆ ಬಿಸಿಲ ಝಳ ಜಾಸ್ತಿ ಅನ್ನಿಸಿದಾಗ ಮತ್ತೆ ಹಳ್ಳದಾಗೆ ಇಳಿದು ಅಲ್ಲೇ ಇರ್ತಾವೆ.ಇಂಗೇನೇ ಮನುಷ್ಯ ತನಗೆ ತಳಮಳ ಆದಾಗ , ಚಂಚಲತೆ ಆದಾಗ ಏನಾದರೂ ಆಧಾರ ಒಂದನ್ನ ಇಟ್ಕಂಡಿರಬೇಕು.
ಅದು ಭಜನೆನೋ , ಧ್ಯಾನನೋ , ಭಕ್ತರ ಒಡನಾಟನೋ , ದೇವಸ್ಥಾನಕ್ಕೆ ಹೋಗದೋ , ಗುರುವಿನ ದರ್ಶನ ಮಾಡದೋ , ಏನೋ ಒಂದು.
ತನಗೆ ಯಾವುದು ಅನುಕೂಲ ಆಗುತ್ತೋ , ತನಗೆ ಯಾವುದು ಸಮಾಧಾನ ಕೊಡುತ್ತೋ ಅದನ್ನು ಕಂಡ್ಕಬೇಕು.ಯಾವಾಗೆಲ್ಲಾ ಉದ್ವೇಗ ಆಗುತ್ತೋ ಅವಾಗ ತಕ್ಷಣ ಆ ಆಧಾರನ ಹಿಡಿದು ಬಿಡಬೇಕು.
ಸಮಾಧಾನ ಆದ ಮೇಲೆ ಮತ್ತೆ ತನ್ನ ನಿತ್ಯ ಜೀವನದಲ್ಲಿ ತೊಡಗಬಹುದು.ಮತ್ತೆ ತಳಮಳ ಶುರುವಾಯಿತು ಅಂದರೆ ಮತ್ತೆ ಅದನ್ನು ಶಮನ ಮಾಡ್ಕಣ ದಾರಿ ಹಿಡಿದು ಬಿಡಬೇಕು .ಮನಸ್ಸು ಸರಿ ಇಲ್ಲ ಅನ್ನಿಸಿದಾಗ , ಸ್ನಾನ ಮಾಡದು , ಮಕ್ಕಳ ಜೊತೆಗೆ ಆಟ ಆಡದೋ , ಏನಾದರೂ ಒಂದು ಮನಸ್ಸನ್ನು ಹದಗೊಳಿಸುವಂತಹ ಚಟುವಟಿಕೆಗಳನ್ನು ಮಾಡಬೇಕು.ಏಕಾಗ್ರತೆ ಬಂದ ಮೇಲೆ ಯಾವುದೇ ರೀತಿಯ ಸಾಧನೆ ಮಾಡಿದರೂ ಅದು ಸಾರ್ಥಕ ಆಗುತ್ತದೆ. ಯಾಂತ್ರಿಕವಾಗಿ ವರ್ಷಗಳ ಕಾಲ ಜಪ ಮಾಡಿದ್ದುಕ್ಕಿಂತ ಏಕಾಗ್ರತೆಯಿಂದ ಜಪ ಧ್ಯಾನ ಭಜನೆ ಮಾಡಿದ್ದು ಭಗವದ್ ಪ್ರಾಪ್ತಿ ಮಾಡಿಕೊಡುತ್ತೆ.

ಸೇವೆಯಿಂದ ಶರೀರ ಮನಸ್ಸು ಸ್ಥಿರಗೊಳಿಸಲು ಸಹಾಯ ಆಗುತ್ತದೆ.ಯಾರು ಶ್ರದ್ಧೆಯಿಂದ ಸೇವೆ ಮಾಡ್ತಾರೋ , ಅದು ಕಸ ಗುಡಿಸುವುದಾಗಿರಲಿ , ಬಚ್ಚಲು ಸ್ವಚ್ಛ ಮಾಡದಾಗಿರಬೋದು , ಆಗ ಗುಡಿನಾಗಿರೋ ದತ್ತಾತ್ರೇಯ ಅವರ ಹತ್ತಿರ ಓಡೋಗಿ ನಿಂತಿರ್ತಾನೆ.ಯೋಗಿಗಳು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದರೆ ಸಿಗುವ ಫಲವನ್ನು ಗುರುದೇವ ತನ್ನ ಭಕ್ತರಿಗೆ ಅವರ ಭಕ್ತಿ ಸೇವೆಗೆ ಒಲಿದು ಅನುಗ್ರಹ ಮಾಡಿಬಿಡ್ತಾನೆ.ಗುರು ಕೃಪೆ ಆಯ್ತು ಅಂದರೆ ತಡನೇ ಇಲ್ಲ , ಅದು ಒಂದು ವಾಕ್ಯನೋ , ಒಂದು ಪದನೋ ಆಗಿರಬಹುದು , ಕೃಪೆ ಮಾಡೇಬಿಡ್ತಾನೆ.

ಜೈ ಗುರುದೇವ ದತ್ತ

ಭಗವಂತನ ಇಚ್ಛೆಯಂತೆಯೇ ಎಲ್ಲವೂ ನಡೆಯುತ್ತಿದೆ.

ದತ್ತ ಭಕ್ತರದು ಭಕ್ತಿ ಸಂಬಂಧ.. ದತ್ತನ ಆಜ್ಞೆಯಿಂದ ಅವರೆಲ್ಲಾ
ದೊಡ್ಡೇರಿಗೆ ಬಂದಿದ್ದಾರೆ ನಡೆಯುತ್ತಾತ ಇರುವುದೆಲ್ಲಾ ದತ್ತನ ಸಂಕಲ್ಪದಂತೆಯೇ ನಡೀತಾ ಇದೆ.ಎಲ್ಲರಿಗೂ “ಒಳ್ಳೆಯದಾಗಲಿ” ಅಂತ ಆಶೀರ್ವದಿಸು ಅಂತ ನನಗೆ ಶಿವ ಹೇಳಿದಂಗೆ ನಡ್ಕಂತಾ ಇದೀನಿ.ಆ ಜ್ಞಾನಜ್ಯೋತಿಯ ಹಿಡಿತದಲ್ಲಿ ಎಲ್ಲಾ ನಡೀತಿದೆ.

ಗುರುತತ್ವ ಒಂದೇ

ಶಿವ ಬೇರೆ ,ಶಕ್ತಿ ಬೇರೆ, ಶ್ರೀಚಕ್ರ ಬೇರೆ ,ದತ್ತ ಬೇರೆ ಅಂತ ಅಂದುಕೊಂಡರೆ , ಆ ಭಕ್ತರು ಒಂದಲ್ಲಾ ಒಂದು ಹಂತದಲ್ಲಿ ಒದ್ದಾಟ ಅನುಭವಿಸುತ್ತಾರೆ. ಗುರುವಿಗೆ ಶರಣಾದರೆ ಅವನು “ಎಲ್ಲಾ ಒಂದೇ, ನೀನೂ ಅದೇ, ಯಾಕೆ ಸುಮ್ಮನೆ ಎಲ್ಲೆಲ್ಲೋ ಹೋಗ್ತಿಯ” ಅಂತೇಳಿ ಸಾಕ್ಷಾತ್ಕಾರದ ಕಡೆಗೆ ಕರೆದುಕೊಂಡು ಹೋಗುತ್ತಾನೆ.

II ಶ್ರೀ ಗುರು ದತ್ತಾತ್ರೇಯಾಯ ನಮಃ II
ಜ್ಞಾನ ನಿಧಿ
ಶಿವನ ಪರೀಕ್ಷೆ

ಪ್ರಪಂಚದಲ್ಲಿ ಯಾವುದಾದರೂ ಒಂದು ಉದ್ಯೋಗನೋ, ಕೆಲಸನೋ ಕೊಡಬೇಕೂಂದರೆ ಅನೇಕ ವಿಧವಾಗಿ ಪರೀಕ್ಷೆ ಮಾಡುತ್ತಾರೆ, ಚೆಕ್ ಮಾಡುತ್ತಾರೆ. ಅದರ ಕಷ್ಟ ಏನೂಂತ ಎಲ್ಲರಿಗೂ ಗೊತ್ತು. ಹಾಗೆ ಭಗವಂತನೂ ನಮ್ಮನ್ನು ಪರೀಕ್ಷೆ ಮಾಡುತ್ತಾನೆ. ಅವನೇ ಬೇಕೂಂತ ಹೋದಾಗ ನಾವು ಎಲ್ಲದರಲ್ಲೂ ತೇರ್ಗಡೆ ಆದರೆ ಮಾತ್ರ ಆ ಸ್ಥಾನಕ್ಕೆ ಕರೆದುಕೊಳ್ಳುತ್ತಾನೆ.

ಒಮ್ಮೆ ನಮ್ಮ ಮನೆಗೆ ಶಿವ ಸಾಯಂಕಾಲ ಬಂದರು. ಅವತ್ತು ಬಹಳ ವಿಚಾರಗಳನ್ನು ಹೇಳಿದರು. ಆಮೇಲೆ ಅವರಿಗೆ ಪ್ರಸಾದಕ್ಕೆ ಅಂತ ಹೇಳಿ ಬಿಸಿ ಅನ್ನ ಮಾಡಿಸಿ,
“ಸ್ವಾಮಿ, ನಮ್ಮ ಮಗಳು ಅನ್ನ ಮಾಡಿದೆಯಂತೆ. ನೀವು ಹೂ ಅಂದ್ರೆಬಡಿಸ್ತೀನಿ” ಎಂದೆ.

“ಸರಿ, ನನಗೆ ಅನ್ನ ನೀಡಂಗಿದ್ರೆ ತಂಗಳನ್ನ ನೀಡ್ರಿ. ಇದು ಬಿಸಿದೋ ತಂಗಳದೋ ?” ಅಂದ್ರು.

“ಬಿಸಿ ಅನ್ನ ಸ್ವಾಮಿ. ಇಷ್ಟೊತಿನಾಗ ತಂಗಳ ಅನ್ನ ಎಲ್ಲಿಂದ ತರಲಿ ?” ಎಂದೆ.

“ಇದ್ರೆ ಎಲ್ಲಿದ್ರೂ ಸರೀನೇ. ತಂಗಳನ್ನ ನೀಡಪ್ಪ” ಅಂದರು.

“ಇಲ್ಲವೇ ಇಲ್ಲ ಸ್ವಾಮಿ. ಈಗಿರೋದೆ ಬಿಸೀದು” ಎಂದೆ.

” ಏ ತಂಗಳಿದ್ರೆ ನೀಡಪ್ಪ” ಅಂದರು.

“ಇಲ್ಲಾಂದ್ರೆ ಕೇಳಬೇಕು. ಆಗ ತರಬೇಕು. ಆಗ್ಲೇ ಮಾಡಬೇಕು. ನಾವೇನು ಒಟ್ಟಿಕೊಂಡಿದ್ದೀವಾ ?” ಎಂದೆ

“ಯಾವಾಗ ತರಬೇಕು ? ಯಾವಾಗ ಮಾಡೋದು ನೀನು ?” ಎಂದರು.

“ಶಿವ ಕೊಟ್ಟಾಗ ತರಬೇಕು. ಅವನೇಳಿದಾಗ ಮಾಡಬೇಕು” ಎಂದೆ.

” ಓಹೋ, ಅಂಗೇನು, ಬಾಳ ಶ್ಯಾಣ್ಯ ಇದ್ದೀಯೇಳಪ್ಪ”.

“ಅಲ್ಲ ಸ್ವಾಮಿ, ತಂಗಳನ್ನ ಯಾಕೆ ಕೇಳ್ತೀರ. ಬಿಸೀದು ಉಣ್ಣಾಲ್ವೇನ್ರೀ ?”

“ಅಲ್ಲೋ, ನಿಂದು ಅನ್ನೋದೇನಾದ್ರೂ ಇಡ್ತಾನೇನೋ” ಅಂತ ಕೇಳಿದೆ.

“ನಂದು ಅನ್ನದಂದ್ರೆ ಏನು ಸ್ವಾಮಿ ?”

“ಅದೇ ತಂಗುಳದೇ ನಂದು ! ನಾ ಮಾಡಿದ್ದು, ನಾ ದುಡದದ್ದು, ನಾ ತಂದದ್ದು, ಅನ್ನೋದೆಲ್ಲಾ ತಂಗಳಲ್ಲದೆ ಮತ್ತೇನು ? ಶಿವನ್ದು ಅನ್ನೋದೆಲ್ಲಾ ಬಿಸೀದು. ತಿಳಿತೇನು ? ತಕಂಬಾ ಮತ್ತೆ ಬಿಸೀದಾ !”

ಆಮೇಲೆ ತೃಪ್ತಿಯಾಗಿ ಊಟ ಮಾಡಿದರು.

ನೋಡಿ, ದೇವರಿಗೆ ಎಷ್ಟೇ ಬಾಗಿದೀವಿ ಎಂದರೂ ಅಧ್ಯಾತ್ಮದಲ್ಲಿ ಶಿವ ಈ ತರಹ ನಮ್ಮಲ್ಲಿನ ‘ನಾನು, ನನ್ನದು’ ಎಂಬುದನ್ನು ಪರೀಕ್ಷೆ ಮಾಡುತ್ತಾರೆ. ನಮ್ಮದು ಅಂತ ಕೊಟ್ಟಿದ್ದೆಲ್ಲಾ ತಂಗಳೇ. ನಾನು ಮಾಡಿದ್ದು, ನಾನು ಸಂಪಾದಿಸಿದ್ದು, ನಾನು ಕೊಡ್ತಾ ಇರೋದು, ಇವೆಲ್ಲ ತಂಗಳು, ಹಳಿಸಿದ್ದು. ಭಗವಂತನದು ಅಂತ ತಿಳಿದು ನೀಡಿದ್ದೆಲ್ಲಾ ಶಿವನ ಪ್ರಕಾರ ಬಿಸಿ ಆಹಾರ ಅದು. ಅಂತಹ ಪ್ರಸಾದವು ಭಗವಂತನಿಗೆ ಅರ್ಪಣೆ ಆಗುತ್ತೆ. ಹೀಗೆ ಶರಣರ, ಪರಮಾತ್ಮನ ಮಾತಿನ ಅರ್ಥ ಗೂಢವಾಗಿರುತ್ತದೆ !🌸🙏

ಶ್ರೀ ಸತ್ಉಪಾಸಿ

ಕಾರಣದಾತ ಪರಮಯ್ಯ ಸೃಷ್ಟಿಕರ್ತ ಬ್ರಹ್ಮಯ್ಯ
ಸಂರಕ್ಷಣಕರ್ತ ಕಮಲದಯ್ಯ
ಲಯಕರ್ತ ಶಿವಯ್ಯ
ನೀನೇನು ಮಾಡಿದೋ ದಾಸಯ್ಯ

ಅಪ್ಪನವರು ಈ ವಾಕ್ಯಗಳನ್ನು ಉದ್ಗರಿಸಿದ್ದರು.

ಎಲ್ಲವನ್ನೂ ಮಾಡ್ತಾ ಇರೋದು ಪರಮೇಶ್ವರನೇ ಅಂತ ಹೇಳಿದ್ದರು.

ಜೈಗುರುದೇವದತ್ತ

ಆಧ್ಯಾತ್ಮಿಕ ಸಾಧನೆ ಮಾಡುವವರು ಮೊದಲು ಅಹಂಕಾರ ಕಳೆದುಕೊಳ್ಳುವುದು ಮುಖ್ಯ. ಅದೊಂದನ್ನು ಉಳಿಸಿಕೊಂಡು ಏನು ಸಾಧನೆ ಮಾಡಿದರೂ ಪ್ರಯೋಜನವಿಲ್ಲ. ಯಾಕೆಂದರೆ ನಾನತ್ವ ಉಳಿಸಿಕೊಂಡರೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ. ಅದೊಂದನ್ನು ಕಳೆದುಕೊಂಡ ಎಂದರೆ ಅವನು ಧನ್ಯನಾದ ಹಾಗೆ ,ಅವನ ಸಾಧನೆಗೆ ಪ್ರತಿಫಲ ಸಿಗಲು ಶುರುವಾಯಿತು ಅಂತಾನೇ ಲೆಕ್ಕ. ಆದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. ಹಿಂದೆ ಋಷಿ ಮುನಿಗಳೂ ಸಹ ಅದನ್ನು ಕಳೆದುಕೊಳ್ಳಲು ತುಂಬಾ ಕಷ್ಟ ಪಟ್ಟಿರುತ್ತಾರೆ. ಈಗಿನವರೂ ಸಹ ಅಷ್ಟೆ, ಎಲ್ಲಾ ತ್ಯಾಗಮಾಡಿ ಅದೊಂದು ಉಳಿಸಿಕೊಂಡು ಎಷ್ಟೋ ಕಷ್ಟಪಡುತ್ತಿರುತ್ತಾರೆ.

ಯಾವಾಗ ಇವರಿಗೆ ತಾವಾಗೆ ಅಹಂಕಾರ ಕಳೆದುಕೊಳ್ಳಲಾಗುವುದಿಲ್ಲವೋ ಅವಾಗ ಭಗವಂತ, ಸದ್ಗುರು ಇವರಿಗೆ ಏನಾದರೂ ಕಷ್ಟ, ತಾಪತ್ರಯ ತಂದುಹಾಕಿಬಿಡುತ್ತಾನೆ. ಅವಗಿನ್ನೇನು ಅವರಿಗೆ ಅಳುವುದೊಂದು ಬಾಕಿ ಇರುತ್ತದೆ, ‘ಪರಮಾತ್ಮಾ’ ಅಂತ ಕಿರುಚಿ ಮೊರೆ ಇಡಲು ಶುರುಮಾಡುತ್ತಾರೆ, ‘ನೀನೇ ಗತಿನಪ್ಪ’ ಅಂತ ಕೂಗಲು ಶುರು ಮಾಡುತ್ತಾರೆ. ಹೀಗೆ ಮಾಡಿ ಭಗವಂತ ಅವರ ಅಹಂಕಾರ ಕಳೆಯುತ್ತಾನೆ.

ಕೆಲವರು ವೇದ, ಉಪನಿಷತ್, ಗೀತೆ ಓದಿಕೊಂಡು, ಉಪನ್ಯಾಸ ಮಾಡುವುದು ಕಲಿತುಕೊಂಡು ತಮಗೆಲ್ಲ ಜ್ಞಾನ ಆಗಿದೆ, ಅಂತ ಅಂದುಕೊಂಡುಬಿಟ್ಟಿರುತ್ತಾರೆ… ‘ಶಿವ, ಶಿವ’ !! ಎಲ್ಲಿಯಾದರೂ ಉಂಟೇ ? ಅಷ್ಟು ಸುಲಭವಾಗಿ ಸಿಗುವ ಹಾಗಿದ್ದರೆ ಯಾಕೆ ಯೋಚನೆ ? ಮಹಾತ್ಮರ ಜೀವನ ಚರಿತ್ರೆಗಳನ್ನೆಲ್ಲಾ ಓದಿರುತ್ತೀರಿ. ಅವರು ಎಷ್ಟೆಲ್ಲಾ ಕಷ್ಟ ಪಟ್ಟಿರುತ್ತಾರೆ, ಎಷ್ಟರ ಮಟ್ಟಿಗೆ ಪರೀಕ್ಷೆಗಳನ್ನು ಎದುರಿಸಿರುತ್ತಾರೆ ಎಂಬುದನ್ನು
ಆದರೆ ಎಲ್ಲರೂ ಅವರ ಹಾಗೆಯೇ ಕಷ್ಟ ಪಡಬೇಕು, ಪರೀಕ್ಷೆಗೆ ಒಳಪಡಬೇಕು ಎಂಬುವುದಿರುವುದಿಲ್ಲ. ಯಾರೋ ಒಬ್ಬ ಮಹಾತ್ಮ ತುಂಬಾ ಕಷ್ಟ ಬಿದ್ದು ಸಾಧನೆ ಮಾಡಿದವನು ಬೇರೆಯವರಿಗೆ ಮಾರ್ಗದರ್ಶನ ಮಾಡಿ ಅವರು ಸುಲಭವಾಗಿ ಮುಕ್ತರಾಗುವಂತೆ ಮಾಡಬಲ್ಲವನಾಗಿರುತ್ತಾನೆ. ಭಗವಂತ ಯಾರನ್ನು ಉದ್ಧಾರ ಮಾಡಬೇಕಿತ್ತೋ ಅಂತವನ ಹತ್ತಿರಕ್ಕೆ ಬರುತ್ತಾನೆ, ಅವನಿಗೆ ಪರೀಕ್ಷೆ ಮಾಡುತ್ತಾನೆ, ಮೋಹಗಳು ಹೋಗಿದ್ದಾವೋ ಇಲ್ಲವೋ, ಎಲ್ಲ ಬಂಧನಗಳಿಂದ ಮುಕ್ತನಾಗಿದ್ದಾನೋ ಇಲ್ಲವೋ ಅಂತ. ಆನಂತರ ಅವನನ್ನು ಉದ್ಧರಿಸಿ, ಆಶೀರ್ವದಿಸಿ ಹೋಗುತ್ತಾನೆ.
ಯಾರೋ ಪುಣ್ಯಶಾಲಿಗಳು ಅಂತಹ ಮಹಾತ್ಮನ ಸಂಪರ್ಕಕ್ಕೆ ಬಂದು ತಮ್ಮ ಜೀವನ ಉದ್ಧಾರ ಮಾಡಿಕೊಳ್ಳುತ್ತಾರೆ. ಅಂತಹವನ ಸಂಗ ಪ್ರಾಪ್ತಿಯಾಗುವುದು ಮುಖ್ಯವಷ್ಟೆ !!

ಭಕ್ತರೊಬ್ಬರಿಗೆ ಕನಸಿನಲ್ಲಿ ಅಪ್ಪನವರು ಜ್ಞಾನದ ನುಡಿಗಳನ್ನು ಹೇಳಿದರಂತೆ.ಅದನ್ನು ಗುರುವಿನ ಬಳಿ ಹೇಳಬೇಕು ಎಂದು ಆತ ಬಹಳ ಹಂಬಲದಿಂದ ಆಶ್ರಮಕ್ಕೆ ಬಂದಿದ್ದಾರೆ.ಹೊಲದಲ್ಲಿ ಅಪ್ಪನವರ ದರ್ಶನ ಮಾಡಿ ನಮಸ್ಕರಿಸಿದಾಗ , ಈತ ಹೇಳುವ ಮೊದಲೇ ಅಪ್ಪನವರು ಅವೇ ನುಡಿಗಳನ್ನು ಹೀಗೆ ಹೇಳಿದರಂತೆ…

ಅತಿ ದೀನನಾಗಿ ಬಾಳಬೇಕು
ಅತಿಮಾನವನಂತೆ ಶ್ರಮಿಸಬೇಕು |
ಸೇವೆಯೇ ಕರ್ಮ | ಕರ್ಮವೇ ಸೇವೆ ಎಂಬುದನರಿತು ಗುರು ಕನ್ನೇಶ್ವರಗೆ ಶಿರ ಬಾಗಿರಬೇಕು |

“ಸೇವೆಯೇ ನಿಜವಾದ ಕರ್ಮ.ದೈವಕಾರ್ಯ, ಗುರುಕಾರ್ಯಗಳಿಂದ ಮಾತ್ರ ಬಂಧಮುಕ್ತರಾಗಬಹುದು, ಆನಂದವನ್ನು ಹೊಂದಬಹುದು.ಉಳಿದಂತೆ ಸಂಸಾರಕ್ಕಾಗಿ ಮಾಡುವ ಕರ್ಮದಿಂದ ಕ್ಷಣ ಕ್ಷಣಕ್ಕೂ ಆತಂಕ, ಭಯ, ದುಃಖವೇ, ಅದು ಬಂಧನವನ್ನುಂಟು ಮಾಡುವಂಥಾದ್ದು. ಆದರೆ ಗುರುಸೇವೆಯಿಂದ ಬಂಧನವಿಲ್ಲ, ದುಃಖವಿಲ್ಲ, ಅಲ್ಲಿ ಆನಂದ ಮಾತ್ರ .ಆದ್ದರಿಂದ ಗುರುವಿಗೆ ದಾಸನಾಗಿ, ದೀನನಾಗಿ ಬಾಳು, ಗುರು ಸೇವೆಗಾಗಿ ಅತಿಮಾನವನಂತೆ ಶ್ರಮಿಸು. ನಿನ್ನ ಬಾಳು ಸಾರ್ಥಕವಾಗುವುದು”.

ಜಗತ್ತಿನ ಹೊಣೆಯನ್ನು ಹೊತ್ತ , ಬ್ರಹ್ಮಾಂಡದ ಒಡೆಯನಾದ ಪರಮಾತ್ಮನಿಗೆ ನಮ್ಮ ಸಂಸಾರದ ಜವಾಬ್ದಾರಿಯು ಮರಳಿನ ಕಣ ಇದ್ದ ಹಾಗೆ…ಒಂದು ಸಾರಿ ನಿರ್ಧಾರ ಮಾಡಿಕೊಂಡು ಹೇಳಿ ಬಿಡು , ನನ್ನ ಸಂಸಾರದ ಹೊಣೆ ನಿನ್ನದೇ ಆಗಿದೆ ಅಂತ..ಬಾಂಡ್ ಪೇಪರ್ ಮೇಲೆ ಬರೆದು ಕೊಟ್ಟಂಗೆ ಹೇಳಿ ಬಿಡಬೇಕು..ನಿಶ್ಚಿಂತೆಯಾಗಿ ಭಗವಜ್ಜೀವನ ಮಾಡಿಕೊಂಡು ಹೋಗಬೇಕು.

ಜೈಗುರುದೇವದತ್ತ

ಅಪ್ಪನವರ ಮಾರ್ಗದರ್ಶನ

ಭಕ್ತ : ಅಪ್ಪಾಜಿ , ನನಗೆ ಸಾಧನೆ ಮಾಡುವ ಮನಸ್ಸಿದೆ.ಆದರೆ ಮನೆಯವರು ಸದಾ ಕಾಲ ಟಿವಿ ನೋಡುವುದು , ಸೀರಿಯಲ್ ಗಳ ಬಗ್ಗೆ ಆಸಕ್ತಿ ವಹಿಸಿ ಮಾತಾಡುವುದು , ತರಾವರಿ ವಸ್ತುಗಳನ್ನು ಖರೀದಿಸಲು ‌ಮಾತುಕತೆ ಆಡುತ್ತಿರುತ್ತಾರೆ.ನನಗೆ ಅದರಲ್ಲಿ ಹೆಚ್ಚು ಆಸಕ್ತಿ ಇಲ್ಲ.ಆಗೆಲ್ಲಾ ತುಂಬಾ ಬೇಜಾರಾಗುತ್ತದೆ .ನನ್ನ ಮನಸ್ಥಿತಿಗೆ ಅನುಸಾರವಾಗಿ ಅವರೂ ನಡೆದು ಕೊಂಡರೆ ಚೆನ್ನಾಗಿ ಇರುತ್ತದೆ..ಆದರೆ ಹಾಗಾಗುತ್ತಿಲ್ಲ , ಏನು ಮಾಡಲಿ ?

ನಿನ್ನ ಜೀವನವನ್ನು ನೀನೇ ಸರಿದೂಗಿಸಿಕೊಳ್ಳಬೇಕು.
ಉದರಪೋಷಣೆಗೆ ನೋಡಿಕೊಂಡು, ಮಿಕ್ಕಂತೆ ನಮ್ಮ ಸಮಯ , ಗಮನ ,ಶಕ್ತಿಯನ್ನು ಭಗವತ್ ಸಾಧನೆಗೆ ವಿನಿಯೋಗ ಮಾಡಿದಾಗ ಬೇಗ ಮುಂದುವರಿಯಬಹುದು.
ಇದಕ್ಕೆ ಸಮಯ ಹೊಂದಾಣಿಕೆಯನ್ನು ನೀನೇ ಮಾಡಿಕೊಳ್ಳಬೇಕು.ಬೇರೆ ಯಾರೋ ಮಾಡುವುದಿಲ್ಲ.
ಮನೆಯ ಇತರ ಸದಸ್ಯರಿಗೂ ತೊಂದರೆ ಆಗದ ಸಮಯದಲ್ಲಿ ಏಕಾಂತವಾಗಿ ಗೋಪ್ಯವಾಗಿ ಸಾಧನೆ ಮಾಡಿಕೊಂಡೋಗಬೇಕು.
ಯಾರಿಗೂ ತೋರಿಸಿಕೊಳ್ಳುವುದೂ ಬೇಡ.

ಜೈಗುರುದೇವದತ್ತ

ಯೋಗಿಗಳು ಸಾವಿರ ವರ್ಷಗಳ

ಪರ್ಯಂತ ಕುಳಿತು ತಪಸ್ಸನ್ನು

ಮಾಡಿದರೂ ಯಾವ ಪರಮಾತ್ಮನನ್ನು

ಹೊಂದಲು ಸಾಧ್ಯ ಇಲ್ಲವೋ

ಅಂತಹ ಪರಮಾತ್ಮನನ್ನು

ಸದ್ಗುರುವಿನ ಆಶೀರ್ವಾದದಿಂದ

ಭಕ್ತರು ಒಂದೇ ಜನ್ಮದಲ್ಲಿ

ಪ್ರಾಪ್ತಿ ಮಾಡಿಕೊಳ್ಳಬಹುದು.

 - ಶ್ರೀಸತ್ಉಪಾಸಿ ಗುರುವಾಣಿ

ಸಂಸಾರದ ತಾಪತ್ರಯಗಳು ನಾಯಿಬಾಲ ಇದ್ದಂಗೆ…

ನಾಯಿಬಾಲವನ್ನು ನೆಟ್ಟಗೆ ಮಾಡಲು ಹೇಗೆ ಬರುವುದಿಲ್ಲವೊ , ಹಾಗೆ ಈ ಸಂಸಾರದ ತಾಪತ್ರಯಗಳನ್ನು ಪೂರಾ ನೆಟ್ಟಗೆ ಮಾಡಲು ಯಾರ ಕೈಲೂ ಆಗುವುದಿಲ್ಲ.
ಸುಖ ಬಂದಿರುವುದೇ ಅದರ ಹಿಂದೆ ದುಃಖ ಅನುಭವಿಸುವುದಕ್ಕೆ..ಒಂದು ತಾಪತ್ರಯ ತೀರಿತು ಅಂದರೆ ಅದರ ಅಪ್ಪನಂತಾದ್ದು ಕಾದುಕೊಂಡು ಕುಂತಿರುತ್ತೆ.
ಹೊರಗಡೆ ಏನೇನು ಕಟ್ಟಿಕೊಂಡಿರುತ್ತೀಯೋ ಆ ಕರ್ತವ್ಯ ಮಾಡಿಕೊಂಡು, ಅಂತರಂಗದಲ್ಲಿ ಭಗವಂತನ ಸ್ಮರಣೆ ಮಾಡಿಕೊಂಡು, ಈ ಪ್ರಪಂಚದಲ್ಲಿ ಇದ್ದೂ ಇಲ್ಲದಂತೆ ಜೀವನ ಮಾಡಿಕೊಂಡು ಅರುಗಾಗಿ ಹೋಗ್ತಿರಬೇಕು.

ಶರೀರ ಕಳಚಿದ ಮರುಕ್ಷಣದಿಂದ ಯಾರಿಗೆ ಯಾರೂ ಇಲ್ಲ.ಅವಾಗ ದೇಹ ಇರಲ್ಲ ಅಷ್ಟೇ ..ಎಲ್ಲಾ ಮುಗಿದಂಗೆ ಅಲ್ಲ..!! ಜೀವಾತ್ಮವನ್ನು , ತಾನು ಮಾಡಿದ ಪುಣ್ಯಾರ್ಜನೆ , ಗುರುಸೇವೆ,ಸ್ಮರಣೆ,ಭಜನೆ, ಧ್ಯಾನ,ಪರೋಪಕಾರ , ದೈವಕಾರ್ಯ,ಸಚ್ಚಿಂತನೆ,
ಇಂತವೇ ಪುಣ್ಯದ ಗಂಟು ಅದನ್ನು ಊರ್ಧ್ವಕ್ಕೆ ಕರೆದುಕೊಂಡು ಹೋಗುತ್ತೆ. ಕರ್ಮ ಮಾಡಿದ್ದಕ್ಕೆ ಅನುಸಾರವಾಗಿ ಜನ್ಮ ಸಿಗುತ್ತದೆ. ಆದರೆ ಯಾರು ದೈವವನ್ನು ನಂಬಿರ್ತಾರೊ, ಗುರುವನ್ನೇ ಆಶ್ರಯಿಸಿರುತ್ತಾರೊ ಅವರಿಗೆ ಎಂದಿಗೂ ಅಧೋಗತಿ ಆಗುವುದಿಲ್ಲ.

ಒಮ್ಮೆ ಒಬ್ಬರು ಭಕ್ತರು ಅಪ್ಪನವರ ಬಳಿ ಬಂದು ನಮಸ್ಕಾರ ಮಾಡಿ ಅಳಲು ಪ್ರಾರಂಭಿಸಿದರು. ಏನು ವಿಚಾರ ಎಂದು ಹೇಳಲೂ ಆಗದಷ್ಟು ದುಃಖ ಪಡುತ್ತಿದ್ದರು. ಸ್ವಲ್ಪ ಮಟ್ಟಿಗೆ ಸಮಾಧಾನ ಆದ ಮೇಲೆ ಹೀಗೆ ಹೇಳಿದರು.. ” ಅಪ್ಪ, ನನ್ನ ಮನಸ್ಸು ಬಹಳ ಕೊಳಕಾಗಿದೆ.ಹೊರಗಡೆ ಭಕ್ತಿ ಭಜನೆ ಸತ್ಸಂಗ ಎಲ್ಲದರಲ್ಲೂ ಭಾಗವಹಿಸುತ್ತಿದ್ದೇನೆ , ನಿಮ್ಮನ್ನು ನಂಬಿ ಈ ದಾರಿಯಲ್ಲಿ ಇದ್ದೇನೆ.ಆದರೆ ನನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಮೂಡುವುದು ನಿಂತಿಲ್ಲ .ಇದರಿಂದ ಬಹಳ ಬೇಜಾರಾಗಿದೆ.ನಾನು ಅಯೋಗ್ಯಳು ಎಂಬ ಭಾವ ಬಂದು ದುಃಖ ಆಗುತ್ತದೆ. ಏನು ಮಾಡಲಿ.ನಿಮ್ಮ ಆಶ್ರಯದಿಂದ ದೂರ ಇರಲೂ ಇಷ್ಟವಿಲ್ಲ ಎಂದು ಮತ್ತೆ ಮತ್ತೆ ದುಃಖ ಖಿನ್ನತೆ ಪಟ್ಟಳು.ಆಗ
ಅಪ್ಪ ಅನೇಕ ಶಮನಕಾರಿ ವಾಕ್ಯಗಳನ್ನು ಹೇಳಿದರು –

ಅನಿಷ್ಟ ಕಲ್ಪನೆಗಳು , ಸಂಶಯಗಳು, ಗುರುವಿನ ಬಗ್ಗೆನೇ ಅನುಮಾನ ಬರದು ಇಂತವೆಲ್ಲ ಆಗ್ತಾ ಐದವೆ ಅಂದರೆ ಗುರು ಕ್ಲೀನ್ ಮಾಡಕೆ ಶುರು ಮಾಡಿದಾನೆ ಅಂತ ಅರ್ಥ.ಒಳಗೆ ಏನೇನು ಐತೋ ಈಚೆಗೆ ಬರ್ತಾ ಐತೆ ಅಂತ.

ಸಣ್ಣವರದು ಸಣ್ಣ ಮೋರಿ , ದೊಡ್ಡವರದು ದೊಡ್ಡ ಮೋರಿ.ಮೇಲೆ ನೋಡುವುದಕ್ಕೆ ತಿಳಿಯಾಗಿಯೇ ಇರುತ್ತದೆ. ಆದರೆ ಕ್ಲೀನ್ ಮಾಡಲು ಶುರು ಮಾಡಿದರೇನೇ ಗೊತ್ತಾಗುವುದು , ಒಳಗೆ ಎಷ್ಟು ಕೊಚ್ಚೆ , ಕಸಕಡ್ಡಿ , ಕೆಸರು ತುಂಬಿ ಬಿಟ್ಟಿದೆ ಅಂತ.

ಮನಸ್ಸಿನಲ್ಲಿ ಅವು ಎದ್ದೇಳುತ್ತಾ ಇರೋದು ನಿನಗೆ ತಡಕಣಕಾಗದೇ ಇದ್ದಾಗ ಗುರುವಿಗೇ ಪ್ರಾರ್ಥನೆ ಮಾಡಬೇಕು. ಅವನ ಪಾದ ಸ್ಮರಿಸಿ , ಸಹಾಯ ಮಾಡು , ಪಾರು ಮಾಡು ಅಂತ ಪರಮಾತ್ಮನಿಗೆ ,ಆ ಸದ್ಗುರುವಿಗೇ ಮೊರೆ ಹೋಗಬೇಕು.

ಆಶ್ರಮಕ್ಕೆ ದಿನಾಲೂ ಇಂತಹ ಕಸ ಬಂದು ಬೀಳ್ತಾನೇ ಇರುತ್ತೆ.!!!ನಾನು ದಿನಾ ಸ್ವಚ್ಛ ಮಾಡಬೇಕು.!!

ಹೀಗೆ ಹೇಳುವ ಮೂಲಕ ಸದ್ಗುರು ಅಪ್ಪನವರು ತಮ್ಮ ಭಕ್ತೋದ್ಧಾರ ಕೈಂಕರ್ಯದ ಒಂದು ಮುಖವನ್ನು ತಿಳಿಸಿದರು. ಗುರುದೇವ ಎಂಥಾ ಕರುಣಾಸಾಗರ ! ಮಾತೃಮೂರ್ತಿ!!

ಬಳಿಕ‌ ಆ ಭಕ್ತರು ಸಮಾಧಾನಗೊಂಡು , ನಿಮ್ಮ ಭಕ್ತಿ ಪ್ರಧಾನವಾದ ಸಂಗದಿಂದ ನಾನೆಲ್ಲಿ ದೂರ ಆಗುತ್ತೀನೋ , ಇದಕ್ಕೆ ನಾನು ಅರ್ಹಳಲ್ಲ ಎಂದು ತುಂಬಾ ನೋವಾಗಿತ್ತು ಅಪ್ಪ, ನನ್ನನ್ನು ಈ ಗುರುಮಾರ್ಗದಿಂದ ದೂರ ಮಾಡಬೇಡಿ ಎಂದು ಕೈ ಜೋಡಿಸಿ ನಮಸ್ಕಾರ ಮಾಡಿದರು.

ಆಗ ಅಪ್ಪನವರು ದಿವ್ಯ ತೇಜಸ್ಸಿನ ಹೊಳಪಿನ ಕಂಗಳಿಂದ ಕರುಣಾ ದೃಷ್ಟಿ ಬೀರುತ್ತಾ ಮಹಾ ವಾಕ್ಯ ನುಡಿದರು. ಅದು ಹೀಗಿದೆ –
” ಬಂದಿರುವುದೇ ಪರಮ ನೆಲೆಗೆ ಕರಕೊಂಡು ಹೋಗುವುದಕ್ಕೆ…!! ನನ್ನ ಜೊತೆಗೆ ಬರಲು ನೀವು ತಯಾರಾಗಬೇಕಷ್ಟೆ.ಸಂಸಾರ ಸಮುದ್ರದಲ್ಲಿ ಮುಳುಗಿ ತೇಲುವ ಜೀವರನ್ನು ಪಾರು ಮಾಡಲು ಗುರು ದೋಣಿ ತಂದಿದಾನೆ.ಬರ್ರೊ ಹತ್ಕಳ್ರೊ ದಾಟಿ ಬಿಡನ ಅಂತಾನೆ.ಯಾರ್ಯಾರು ಹತ್ರ ಬರ್ತಾರೊ ಅವರನ್ನು ಎಳ್ಕಂಡು ದೋಣಿಗೆ ಹತ್ತಿಸ್ಕಂತಾನೆ.ಇತ್ಲಾಗೆ ನಾಲ್ಕು ಜನರನ್ನು ಕರೆದು ಕೊಳ್ಳುವುದರಲ್ಲಿ , ದೋಣಿನಲ್ಲಿ ಇದ್ದೋರು ನಾಲ್ಕು ಜನ ಮತ್ತೆ ಪ್ರಪಂಚದ ಆಸಕ್ತಿಗೆ ಒಳಗಾಗಿ ಮತ್ತೆ ಸಮುದ್ರಕ್ಕೆ ಜಿಗಿತಾರೆ.ಮತ್ತೆ ಅವರಿಗೆ ಪರಮಾತ್ಮನ ಮಹಿಮೆ , ಮಾನವ ಜನ್ಮದ ಸಾರ್ಥಕತೆ ಬಗ್ಗೆ ಅರಿವು ಮೂಡಿಸಿ ಮತ್ತೆ ಕರೆದುಕೊಳ್ಳುವುದರಲ್ಲಿ ಇನ್ಯಾರೊ ಪ್ರಪಂಚದ ಹೊಂಡಕ್ಕೆ ಜಿಗಿತಾರೆ.ಒಂದು ಸಾರಿ, ಎರಡು ಸಾರಿ,ಹತ್ತು ಸಾರಿ,ನೂರು, ಸಾವಿರ ಸಾರಿ ಕರಕಂತೀನಿ.ಮತ್ತೆ ಹೋದರೆ , ನಾನಿನ್ನೇನು ಮಾಡಲಿ , ಕೈ ಬಿಟ್ಟು ಸುಮ್ಮನಾಗ್ತೀನಿ.
ಕಡೆಯವರೆಗೂ , ಗುರು ಮಾರ್ಗವೆಂಬ ದೋಣಿಯಲ್ಲಿ ಇದ್ದವರು ಅಂದರೆ ಗುರುಪಥದಲ್ಲಿ ನಡೆದೋರು ಪಾರಾಗಿಬಿಡ್ತಾರೆ.
ಜೈ ಗುರುದೇವ ದತ್ತ

ಪರಮಧ್ಯೇಯ

ಜೀವನದಲ್ಲಿ ಪ್ರಾಮುಖ್ಯವಾದದ್ದೇನೆಂದರೆ ಭಗವಂತನನ್ನು ಸೇರುವುದೊಂದೆ. ಅದನ್ನು ಪಡೆಯಲು ಸದಾ ಅವನ ಸ್ಮರಣೆ ಮತ್ತು ಶರಣಾಗತಿ ಇದು ಪರಮಧ್ಯೇಯವಾಗಬೇಕು. ಇದಕ್ಕಾಗಿ ಎಂತಹುದನ್ನಾದರೂ ಎದುರಿಸಲು ಸಿದ್ಧನಾಗಿರು. ಪ್ರಾಪಂಚಿಕ ಐಹಿಕ ಭೋಗಗಳನ್ನು ತ್ಯಜಿಸಲು ಹಿಂಜರಿಯಬಾರದು. ದೇಹಾಭಿಮಾನವನ್ನು ಬಿಡಲು ಹಂತ ಹಂತವಾಗಿ ಪ್ರಯತ್ನಿಸು. ಯಾವುದೇ ಕಾರ್ಯಕ್ಕೂ ಆಗು ಹೋಗುಗಳಿಗೆ ನಾನೆಂದು ಕೊಳ್ಳಬೇಡ, ಹೊಣೆಗಾರನೊಬ್ಬನಿದ್ದಾನೆ ಎಂದು ತಿಳಿದು ಎಲ್ಲವನ್ನೂ ಅವನ ಮೇಲೆಯೇ ಹೊರಿಸಿ ನೀನು ಸಮಾಧಾನವಾಗಿರು. ಸತ್ಸಂಗದಲ್ಲಿರು, ಸತ್ಪುರುಷರ ದರ್ಶನವನ್ನ ಮಾಡುತ್ತಿರು, ಯಾವಾಗಲೂ ನಿನಗೆ ಪ್ರಿಯವೆನಿಸಿದ ದೇವರ ನಾಮವನ್ನು ಜಪಿಸುತ್ತಿರು. ನಿನ್ನ ಜೀವನ ಪಾವನವಾಗುವುದು.

ಒಂದು ದಿನ ಆಶ್ರಮಕ್ಕೆ ಆಗಮಿಸಿದ ಭಕ್ತವೃಂದವು ಅಪ್ಪನವರ ಸನ್ನಿಧಿಯಲ್ಲಿ ಬಹಳ ಭಕ್ತಿಯಿಂದ ಭಜನೆ ಮಾಡಿದರು..ಬಳಿಕ ಸತ್ಸಂಗ ನಡೆಯಿತು.ಆ ಸಮಯದಲ್ಲಿ ಭಕ್ತರು ತಮ್ಮ ಮನದ ಕೆಲವು ಬೇಡಿಕೆಗಳನ್ನು ಕೇಳಿಕೊಂಡರು. ಅವರ ಮನದ ವಿಚಾರಗಳನ್ನು ಆಲಿಸಿದ ಸದ್ಗುರು ಅಪ್ಪನವರು ಭಕ್ತರಿಗೆ ಈ ಘನ ವಿಚಾರವನ್ನು ಅರುಹಿದರು.

” ಕೊಡುವುದು ತೆಗೆದುಕೊಳ್ಳುವುದು ಹೀಗೆ, ದೇವರುಗಳ ಹತ್ತಿರ ವ್ಯಾಪಾರ ಮಾಡಿದಂಗೆ ದತ್ತನ ಹತ್ತಿರ ಮಾಡಬಾರದು.ಏಕೆಂದರೆ ದತ್ತನು ಗುರುರೂಪದಲ್ಲಿ ಬರುವುದೇ ಸಾಯುಜ್ಯವನ್ನು ಕರುಣಿಸುವುದಕ್ಕೆ.ಹುಟ್ಟು ಸಾವು ಇಲ್ಲದಂತೆ ಮಾಡುವುದಕ್ಕೆ.ಅವನು ಕಾಪಾಡುತ್ತಾನೆ , ರಕ್ಷಣೆ ಮಾಡ್ತಾನೆ , ಜೀವನದ್ದು, ಅಗತ್ಯದ್ದು ಏನಿದೆಯೋ ಅದೆಲ್ಲಾ ನೋಡಿಕೊಳ್ಳುತ್ತಾನೆ.ಅವನ ಹತ್ತಿರ ಏನೂ ಬೇಡಬಾರದು.ನೀನೇ ಬೇಕು ಅನ್ನಬೇಕು.
ಈ ಸಂಸಾರದ ತಾಪತ್ರಯಗಳು ಎಂದಿಗಾದರೂ ಮುಗಿಯುತ್ತವೆಯೇ ? ಇವತ್ತಿನ ಬಾಧೆ ಬಗೆಹರಿದರೆ ಸಾಕು , ಇನ್ನೂ ಎರಡು ನಮಸ್ಕಾರ ಹಾಕ್ತೀನಪ್ಪ ದೇವರೇ ಅಂತಾರೆ.ಮಾಡಿದ ಭಕ್ತಿ ಎಲ್ಲಾ ಇಂಗೆ ಒಂದೊಂದು ಆಸೆ ತೀರಿಸ್ಕಣಕೇ ಆದರೆ , ಜನ್ಮ ಪಾವನವಾಗುವುದ್ಯಾವಾಗ ? ದತ್ತನು ,ಈ ಪ್ರಪಂಚದ್ದು ಏನೇನಿದೆಯೋ , ಇದ್ದು ಇಲ್ಲದಂಗಾಗುವಂತಹುದು , ಅವನ್ನು ಈಡೇರಿಸುವುದಕ್ಕಲ್ಲ ಇರುವುದು!.ಅವನು ಜನ್ಮೋದ್ಧಾರ ಮಾಡುವುದಕ್ಕೆ , ಆತ್ಮೋದ್ಧಾರ ಕೊಡುವುದಕ್ಕೆ, ಸಾಯುಜ್ಯವನ್ನು ಕರುಣಿಸುವುದಕ್ಕೆ ಸಿದ್ಧನಾಗಿರುತ್ತಾನೆ.ಅವನು ಏನು ಕೊಡುವುದಕ್ಕೆ ಸಿದ್ಧನಾಗಿರುತ್ತಾನೊ ಅದನ್ನು ಪಡೆದು ಕೊಳ್ಳುವುದಕ್ಕೆ ಸಿದ್ಧವಾಗಬೇಕು.

ಇವತ್ತು ಒಂದು ಬಾಧೆ , ನಾಳೆಗೊಂದು, ವಾರ ಬಿಟ್ರೆ ಒಂದು ಬೇಡಿಕೆ , ಅದು ಬಗೆಹರಿದರೆ ಇನ್ನೊಂದ್ಯಾವುದೋ ಸುಡುಗಾಡು ..ಇಂಗೇ ಬದುಕಿ ಒಂದಿನ ಸತ್ತೋಗದು ..ಇಷ್ಟಕ್ಕೇನೇ ನಾವು ಹುಟ್ಟಿ ಬಂದಿರದು ? ಆತ್ಮೋದ್ಧಾರ ಮಾಡಿಕೊಬೇಕು.

ಜೈ ಗುರುದೇವ ದತ್ತ

ಗುರುನಿಂದಕರು ನಮಗೆದುರಾದಾಗ ಹೇಗೆ ನಡೆದುಕೊಳ್ಳಬೇಕು ? ಎಂತಹ ಭಕ್ತರು ಗುರುವಿನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ?

ನಿಜವಾಗಿಯೂ ಗುರುವನ್ನು ಸ್ವೀಕರಿಸಿದವನು, ಗುರುವನ್ನು ನಂಬಿರುವವನು, ಮೊದಲು ನನ್ನ ಗುರುವೇ ಸರ್ವಶ್ರೇಷ್ಟನೆಂತರಿರಬೇಕು. ಗುರುವನ್ನು ಹೊರತು ಪಡಿಸಿ ಉಳಿದುದ್ದೆಲ್ಲವೂ ತೃಣ ಸಮಾನವೆಂದರಿತಿರಬೇಕು. ಶಿಷ್ಯನಾದವನು, ದೈವಭಕ್ತನಾದವನು, ಪ್ರಾಪಂಚಿಕ ಜನಸಂದಣಿಯಿಂದ ಬೆರೆಯದಿರಬೇಕು. ಆಗತ್ಯವಿದ್ದಾಗ ಮಾತ್ರ ಹೋಗಿ ಬರುತ್ತಿರಬೇಕು. ತನ್ನ ಗುರು, ದೈವವನ್ನು ಬೈದಾಡುವವರ, ನಿಂದಿಸುವವರ, ವಿರೋಧಿಸುವವರ, ಜರಿದಾಡುವವರ ಕಂಡೋಡನೆ ನಿಜವಾದ ಭಕ್ತನಿಗೆ, ಶಿಷ್ಯನಿಗೆ ಹೃದಯದ ಬಡಿತವು ಅಧಿಕವಾಗಿ ಮನವು ತಳಮಳಿಸಿ ಬುದ್ಧಿಯು ತನ್ನ ತಾಳ್ಮೆಯನ್ನು ಕಳೆದ ಕೊಳ್ಳುತ್ತದೆ. ಒಡಲು ಉರಿಯತೊಡಗುತ್ತದೆ. ನಿಜವಾದ ಗುರು ಭಕ್ತನಿಗೆ ,ದೈವ ಭಕ್ತನಿಗೆ ಆಗುವ ನಿದರ್ಶನಗಳವು. ಈ ಪರಿಯ ತಾಪಗಳು ಯಾವಾನಿಗೆ ಆಗುವುದಿಲ್ಲವೋ, ಅವನು ಶಿಷ್ಯನೂ ಅಲ್ಲ, ಭಕ್ತನೂ ಅಲ್ಲ, ಸುಮ್ಮನೆ ನೋಟಕ್ಕೆ ಗುರುವಿನ ಶಿಷ್ಯನಂತೆಯೂ ನಿಂದಕನಿಗೆ ಮಿತ್ರನಾಗಿಯೂ ಇರುತ್ತಾನೆ. ಇಂಥವರ ಗುರುಭಕ್ತಿಯು ಗುರುವಿಗೆ ಗೊತ್ತಿರುತ್ತದೆ. ಅವರಿಗೆ ತಕ್ಕಂತೆಯೇ ಇಂಥವರ ಗುರುಭಕ್ತಿಯು ಗುರುವಿಗೆ ಗೊತ್ತಿರುತ್ತದೆ. ಅವರವರಿಗೆ ತಕ್ಕಂತೆಯೇ ಫಲಗಳು ದೊರಕುತ್ತವೆ. ಅಂತವರಿಗೆ ಗುರು, ದೈವಾನುಗ್ರಹವಿರುವುದಿಲ್ಲ. ನಿಜವಾದ ಶಿಷ್ಯನು ಗುರು ನಿಂದನೆಯನ್ನು ಮಾಡುವವನು ಎಷ್ಟೇ ದೊಡ್ಡವನಾಗಿದ್ದರೂ ಅವನಿರುವ ಕಡೆ ಮುಖ ಮಾಡುವುದಿಲ್ಲ. ಅವನಿರುವ ಕಡೆ ತಲೆ ಇಟ್ಟು ಮಲಗುವುದಿಲ್ಲ, ಅವನ ನೆರಳು ಕೂಡಾ ಬೀಳಿಸಿ ಕೊಳ್ಳುವುದಿಲ್ಲ. ಅವನಿರುವ ಕಡೆಯಿಂದ ಗಾಳಿಯೂ ಕೂಡಾ ಸೋಕದಂತಿರುತ್ತಾನೆ. ಗುರು ನಿಂದನೆಯ ಮಾತುಗಳು ಅಕಸ್ಮಾತ್ ತನ್ನ ಕಿವಿಯ ಮೇಲೆ ಬಿದ್ದರೆ ತಕ್ಷಣವೇ ಸ್ನಾನಾದಿಗಳನ್ನು ಮಾಡಿ, ಪಶ್ಚಾತ್ತಾಪ ಪಟ್ಟು, “ಗುರು ನಿಂದನೆಯನ್ನು ಕೇಳಿ, ಮಹಾ ಪಾಪಿಯಾದೆನು, ಗುರುವೇ ನನ್ನನ್ನು ಕ್ಷಮಿಸು” ಎಂದು ತನ್ನ ಗುರುವಿಗೆ ಶಿರಬಾಗಿ ಕ್ಷಮೆ ಕೇಳಿ ಕೊಳ್ಳುತ್ತಾನೆ. ಇಂಥವರು ಮಾತ್ರ ಗುರುವಿಗೆ ಶಿಷ್ಯರು ಇಂಥವರು ಗುರು ಅನುಗ್ರಹಕ್ಕೆ ಪಾತ್ರರು. ಇವರ ಜನ್ಮ ಸಾರ್ಥಕ! ಮುಕ್ತಿಗೆ ಸಾಯುಜ್ಯಕ್ಕೆ ಅರ್ಹರು!! . ಇಂತಹ ಭಕ್ತ, ಶಿಷ್ಯನನ್ನು ಕಂಡರೆ ದತ್ತನಿಗೆ ಬಹು ಹರುಷ, ಅವರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ.
ಜೈ ಗುರುದೇವ ದತ್ತ…

ಶ್ರೀ ಸತ್ ಉಪಾಸಿ ಮಹರಾಜ್…..

ನುಡಿಮುತ್ತು

ಮೊದಲು ಅಹಂಕಾರವನ್ನು ಕಳೆದುಕೊಂಡರೆ ಆಮೇಲೆ ಇನ್ನುಳಿದ ಅವಗುಣಗಳನ್ನು ಕಳೆದುಕೊಳ್ಳಬಹುದು. ನಡೆದಿರುವುದು , ನಡೆಯುತ್ತಿರುವುದು , ಮುಂದೆ ನಡೆಯುವುದು ಎಲ್ಲವೂ ಶಿವನ ಇಚ್ಛೆ ಎಂಬುದನ್ನು ನಂಬಿ ಅವನ ಯಜಮಾನಿಕೆಯಲ್ಲಿ ಬದುಕಿದರೆ ಅಹಂಕಾರ ನಿರಸನವಾಗುತ್ತದೆ.

ಸತ್ಸಂಗ ನನ್ನ ಜೀವ

  • ಮೊದಲು ನಾನು ಬೇರೆ ಬೇರೆ ಹಳ್ಳಿಯ ಸತ್ಸಂಗದಲ್ಲಿ ಭಾಗವಹಿಸಲು ಮೂವತ್ತು ಮೈಲಿಗಟ್ಟಲೆ ನಡೆದುಕೊಂಡೋಗಿ ಅಲ್ಲಿ ಸೇವೆ ಮಾಡಿ ನಡೆದುಕೊoಡೇ ಬರುತಿದ್ದೆ.ನನಗೆ ಏನೂ ಅನಿಸುತ್ತಿರಲಿಲ್ಲ. ಬರುವಾಗ ಭಗವಂತನ ಸ್ಮರಣೆ ಮಾಡಿಕೊಂಡು ಆನಂದವಾಗಿ ನಡೆದುಕೊಂಡು ಬರುತಿದ್ದೆ.ಇವಾಗ ನೀವುಗಳು ಸತ್ಸಂಗಕ್ಕೆ ಎಲ್ಲಿಂದ ಎಲ್ಲಿಗೋದರೂ ಮೂವತ್ತು ಮೈಲಿ ಆಗದಿಲ್ಲ.
  • ಎಷ್ಟು ಜನ ಸೇರಿದರು ಎನ್ನುವುದಕ್ಕಿಂತ ,ಸೇರಿದ ಭಕ್ತರು ಎಷ್ಟು ಭಕ್ತಿ ತನ್ಮಯತೆಯಿಂದ ಭಾಗವಹಿಸಿದರು ಅನ್ನೋದು ಮುಖ್ಯ.

*ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ವಿಶ್ವಾಸದಿಂದ ಇರುತ್ತಾ , ಭಕ್ತಿ ಭಜನೆ , ಸೇವೆ ಮಾಡಿಕೊಂಡು ಹೋದರೆ ನನಗೆ ಇಷ್ಟ ಆಗುತ್ತದೆ.

*ಯಾರು ಸತ್ಸಂಗದ ಕೆಲಸ ತನ್ನ ಸ್ವಂತದ ಕೆಲಸ ಅಂತ ಮಾಡುತ್ತಾರೋ , ಯಾರು ಮನೆ , ಸಂಸಾರ , ವ್ಯವಹಾರ,ಸಮಯ ಎಲ್ಲಾ ಮರೆತು ಪರಮಾತ್ಮನಲ್ಲಿ ತನ್ಮಯವಾಗಿ ಭಜನೆ ಮಾಡುತ್ತಾರೋ ಅವರು ಅಧ್ಯಾತ್ಮದಲ್ಲಿ ಬೇಗನೆ ಮುಂದುವರಿಯುತ್ತಾರೆ.ಯಾರು ಭಜನೆ ಮಾಡಲು , ಸತ್ಸಂಗ ಮಾಡಲು ಇನ್ನೂ ಸಮಯ ಕುಳಿತರೆ ಸಮಯ ತಡವಾಗುತ್ತೆ ಅಂದುಕೊಳ್ಳುತ್ತಾರೋ ಅಂತವರು ಮುಂದುವರಿಯದಾದರೂ ಹೇಗೆ ?

ಜೈಗುರುದೇವದತ್ತ

ಕೈಲಾದಷ್ಟು ಸೇವೆ ಮಾಡಬೇಕು

ಸೇವೆ ಮಾಡುವಾಗ ಅದು
ಸಣ್ಣ ಕೆಲಸ ಅಂತನೋ
ತಾನು ಈ ಕೆಲಸ ಮಾಡುವುದನ್ನು
ನೋಡಿದೋರು ಏನೆಂದು ಕೊಂಡಾರು
ಅಂತನೋ ಅಂದು ಕೊಳ್ಳಬಾರದು.
ವೃಥಾ ಹರಟೆ ಹೊಡೆದು ಕಾಲಹರಣ
ಮಾಡಬಾರದು. ಆ ಸಮಯದಲ್ಲಿ
ವಿಶ್ರಾಂತಿ ತಗೋಬಹುದು.ಮಿಕ್ಕಂತೆ
ಕೈಲಾದ ಸೇವೆ ಮಾಡಲು
ಪ್ರಯತ್ನ ಪಡ್ರಿ

ನಾವೇನೇ ಕೆಲಸ ಮಾಡಲಿ ಅದನ್ನು ಇಷ್ಟ ಪಟ್ಟು ಮಾಡಬೇಕು.ಇದನ್ನು ಬಿಟ್ಟರೆ ಮಾಡಲು ಬೇರೆ ಇನ್ನೊಂದು ಕೆಲಸ ಇಲ್ಲ , ಇದೇ ನಾನು ಮಾಡಬೇಕಾದ ಕೊನೆಯ ಕೆಲಸ ಅನ್ನುವ ಹಾಗೆ ಮಾಡಬೇಕು. ಅದರ ಸುಖ ಏನೈತೋ ತನಿಗೇ ಸಿಗುತ್ತವಾಗ.

ಶ್ರೀಸತ್ಉಪಾಸಿ ಜ್ಞಾನನಿಧಿ

ನಾನು ಮಾಡಿದ್ದು , ಹಾಡಿದ್ದು , ಬರೆದಿದ್ದು ,ಸೇವೆ ಮಾಡಿದ್ದು ಅನ್ನೋ ಭಾವನೆ ಬರದಿರಲಿ.ವಿನಮ್ರ ಭಾವದಗೇ ಇರಬೇಕು. ಎಲ್ಲಾ ಭಗವಂತನೇ ಮಾಡದು.ಸುಮ್ಮನೆ ನಾವು,… ನಾನು ಮಾಡಿದೆ ಅಂದುಕೊಂಡಿರ್ತೀವಿ ಅಷ್ಟೇ…ನಾವೇನೂ ಮಾಡಕಾಗಲ್ಲ !
ಯಾರು ನಾನು ನಾನು ಅಂತ ಹೋಗ್ತಾರೋ ಅವರು ಮುಂದೆ ಎಲ್ಲಾ ಕಳಕೊಂಡು ಏನೂ ಇಲ್ಲ ಅನ್ನಂಗಾಗಿ ಬಹಳಾ ಅನುಭವಿಸಬೇಕಾಗುತ್ತೆ..
ಎಲ್ಲಾ ಭಕ್ತರು ಸರಿಯಾಗೇ ಇರುತಾರೆ..ಆದರೆ ಈ ಮನಸು ಸುಮ್ಮನೆ ಇರಲ್ಲಲ್ಲ..ಅದಿಕ್ಕೆ ಹೇಳುತಾ ಇದೀನಿ

ಜೈ ಗುರುದೇವದತ್ತ

ಅಪ್ಪ ಹೇಳಿದರು-
ಯಾರು ಪ್ರಪಂಚದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೊ ಅವರು ಭಗವಂತನಿಗೆ ಹತ್ತಿರ ಆಗೈದರೆ ಅಂತ ಅರ್ಥ.ಯಾಕೆಂದರೆ ಅಂತವರು ಪ್ರಾಪಂಚಿಕ ಜನಗಳನ್ನು ಮೆಚ್ಚಿಸಕೋಗದಿಲ್ಲ.ಇತರರು ಪ್ರಪಂಚದ ಮೆಚ್ಚುಗೆ ಗಳಿಸಕೆ ಏನು ಬೇಕಾದರೂ ಮಾಡುತಾರೆ…ಆದರೆ ಭಗವದ್ಭಕ್ತರು ಅಂತವುನ್ನೆಲ್ಲ ಮಾಡಕೋಗದಿಲ್ಲ , ಅದಕ್ಕೆ ಭಕ್ತರು ಪ್ರಪಂಚದ ನಂಬಿಕೆಗೆ ಅನರ್ಹರಾಗಿರ್ತಾರೆ.ಆದರೆ ದತ್ತ. ಅವರನ್ನು ಆಯ್ಕೆ ಮಾಡ್ಕಂತಾನೆ.
ಅವನು ಏನು ಬೇಕಾದರೂ ಮಾಡ್ತಾನೆ.ಯಾತಕ್ಕೂ ಬರದವರ ಕೂಟೆ ಏನು ಬೇಕಾದರೂ ಮಾಡಿಸ್ತಾನೆ.ಚತುರಾತಿಚತುರ ಅವನು , ನಿಪುಣಾತಿನಿಪುಣ ಅವನು.

ಜೈ ಗುರುದೇವ ದತ್ತ

ಪರತತ್ವಾಮೃತ ಗ್ರಂಥದಿಂದ ಆಯ್ದ ಸದ್ಗುರುವಾಣಿ

ಮನುಷ್ಯನಿಗೆ ಅಹಂಕಾರ ಮಾತ್ರ ಬರಬಾರದು. ಅದು ಬಂದರೆ ಬಹಳ ಕಷ್ಟ, ಏಕೆಂದರೆ ಅಹಂಕಾರದಿಂದ, ಅಜ್ಞಾನದಿಂದ ಸರ್ವನಾಶವಾಗುತ್ತದೆ. ಅಹಂಕಾರವು ನಮಗೆ ಅರಿವಾಗದೆ ಒಳಗೆ ಸೇರಿಕೊಂಡು ಹಾಳುಮಾಡುತ್ತದೆ. ನಾವು ಬಂದ ದಾರಿಯನ್ನು ಯಾವಾಗಲೂ ಮರೆಯಬಾರದು. ಆಗಾಗ ನೆನಪು ಮಾಡಿಕೊಳ್ಳುತ್ತಿರಬೇಕು. ಜೀವನದಲ್ಲಿ ಯಾವಾಗಲೂ ಒಂದೇ ತರಹ ಇರಬೇಕು. ಏನೂ ಇಲ್ಲದವರ ಹಾಗೆ, ಏನನ್ನೂ ಬಯಸದೆ, ಬೇಡದೆ ಇರಬೇಕು.

ನಾನು ಮಾಡಿದೆ, ನನ್ನಿಂದ ಆಯಿತು ಎನ್ನುವವರಿಗೆ ಏನೂ ಸಿಗುವುದಿಲ್ಲ .ಯಾರು ಭಗವಂತನಿಗಾಗಿ ಬದುಕುತ್ತಾರೋ ಅವರು ಸಾಕು ಎಂದರೂ ಭಗವಂತ ಅವರಿಗೆ ಬಿಡದೆ ಕೊಡುತ್ತಾನೆ .ಗುರುವು ಅಸಾಧ್ಯವನ್ನು ಸಾಧ್ಯ ಮಾಡುತ್ತಾನೆ, ಆಶ್ಚರ್ಯವನ್ನು ಭಕ್ತನಿಗೆ ತೋರಿಸುತ್ತಾನೆ.ಗುರುಕೃಪೆಯನ್ನು ಹೊಂದುವುದು , ಅದನ್ನು ಉಳಿಸಿಕೊಳ್ಳುವುದು,ಅದರಂತೆ ನಡೆಯುವುದು ಸುಲಭವಲ್ಲ. ಏಕೆಂದರೆ ಯಾರಾದರೂ ನಾನತ್ವದಿಂದ ಮೂರು ಮನೆ ಭಿಕ್ಷೆಬೇಡಿಯಾದರೂ ಊಟ ಮಾಡುತ್ತೇನೆ ಎಂದು ಹೇಳಿ ಭಿಕ್ಷೆಗೆ ಹೋದರೆ ಮೂರಲ್ಲ ನೂರು ಮನೆಗೆ ಭಿಕ್ಷೆಗೆ ಹೋದರೂ ಯಾರೂ ಭಿಕ್ಷೆ ಹಾಕುವುದಿಲ್ಲ , ಇದ್ದರೂ ಕೊಡುವುದಿಲ್ಲ. ಭಿಕ್ಷೆ ಸಿಗಬೇಕೆಂದರೂ ಪರಮಾತ್ಮನ ಕೃಪೆ ಇರಬೇಕು .ಅವನ ಕರುಣೆ ಇಲ್ಲದೆ ಏನೂ ಸಾಧ್ಯವಿಲ್ಲ. ಆದ್ದರಿಂದ ಅವನ ಕರುಣೆಯನ್ನು ಕಳೆದುಕೊಳ್ಳದೆ ಅವನ ಧ್ಯಾನದಲ್ಲಿ ,ಸೇವೆಯಲ್ಲಿ ಭಯಭಕ್ತಿಯಿಂದ ಇರಬೇಕು. ಪ್ರಪಂಚದಲ್ಲಿ ಇದ್ದೂ ಇಲ್ಲದ ಹಾಗೆ ಇರಬೇಕು. ಒಂದೊಂದನ್ನೇ ಬಿಡುತ್ತಾ ಬಂದಂತೆ , ವೈರಾಗ್ಯ ಬಂದುಬಿಟ್ಟರೆ ಇನ್ನೇನೂ ಬೇಡ .ಎಲ್ಲಾ ಭಾರವನ್ನು ಗುರುವಿನ ಮೇಲೆ ಹಾಕಿ ಅವನ ನಾಮಸ್ಮರಣೆಯನ್ನು ಮಾಡಿಕೊಂಡು ಆರಾಮವಾಗಿ ಇದ್ದರಾಯಿತು.ಆಗ ಸಂಸಾರದ ತಾಪತ್ರಯಗಳು ತಾಪತ್ರಯಗಳೇ ಅಲ್ಲ. ಗುರು ಎಂಬುದು ಅಗಾಧವಾದ ಒಂದು ಶಕ್ತಿ .ಅದು ಇದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ ಭಗವಂತನನ್ನು ಪಡೆದು ಪಡೆದುಕೊಳ್ಳುವವರಿಗೆ ಸಮಯಕ್ಕೆ ಸರಿಯಾಗಿ ಕಾಪಾಡುತ್ತಾನೆ. ಜೀವನವನ್ನು ಕಷ್ಟದ ಸಮಯದಲ್ಲಿ ಹೇಗೋ ನಡೆಸುತ್ತಾನೆ.

ಜೈ ಶ್ರೀ ಗುರುದೇವದತ್ತ

ಗ್ರಂಥ – ಪರಮಹಂಸ ಸದ್ಗುರು ರಾಜಯೋಗಿ ಶ್ರೀಸತ್ಉಪಾಸಿಯವರು ಅನುಗ್ರಹಿಸಿದ ಭಗವದ್ ವಿಚಾರಗಳನ್ನು ಒಳಗೊಂಡಿರುವ ಪರತತ್ವಾಮೃತ

ಪ್ರೆಶ್ನೆ – ಅಪ್ಪಾಜಿ ನಾವು ಪ್ರತಿನಿತ್ಯವೂ ದೇವರು ಮತ್ತು ಗುರುವನ್ನು ಪೂಜಿಸುತ್ತೇವೆ .ನಮ್ಮ ಪೂಜೆಯು ಅವರಿಗೆ ಮುಟ್ಟಿದೆ ಎಂದು ಹೇಗೆ ತಿಳಿಯಬೇಕು ?

ಅಪ್ಪ – ನೀವು ಮಾಡುವ ಪೂಜೆಯು ದೇವರಿಗೆ ಮುಟ್ಟಿದೆಯೆಂದರೆ ಮೊದಲು ನಿಮ್ಮ ಮನಸ್ಸಿಗೆ ಸಮಾಧಾನ ವಾಗಬೇಕು .ನಿಮಗೆ ಆತ್ಮತೃಪ್ತಿ ಆದರೆ ಮಾಡಿದ ಪೂಜೆ ಪರಮಾತ್ಮನಿಗೆ ಮುಟ್ಟಿದೆ ಎಂದು ಅರ್ಥ.

ಜೈ ಶ್ರೀ ಗುರುದೇವದತ್ತ

ಗ್ರಂಥ -ಪರತತ್ವಾಮೃತ

ಎಲ್ಲವೂ ಭಗವಂತನಿಚ್ಛೆ

ಎಲ್ಲಿಯವರೆಗೆ ಭಗವಂತ ಈ ಶರೀರದಲ್ಲಿ ಅಂತರ್ಯಾಮಿಯಾಗಿ ಇದ್ದುಕೊಂಡು ಉಸಿರಾಡಿಸುತ್ತಾನೋ, ಅಲ್ಲಿಯವರೆಗೆ ನಾವು ಉಸಿರಾಡುತ್ತವೆ. ಅವನ ಬೆಳಕಿನಲ್ಲಿ, ಅವನ ಚೈತನ್ಯದಿಂದ ನಾವು ಎಲ್ಲವನ್ನು ಮಾಡ್ತಾ ಇದ್ದೀವಿ. ನಾವು ಮಲಗಿದ್ದಾಗಲೂ ಉಸಿರಾಡಿಸುತ್ತಾನೆ, ಊಟ ಮಾಡುವಾಗಲೂ, ಪೂಜೆ ಮಾಡುವಾಗಲೂ, ಕೋಪಗೊಂಡಿದ್ದಾಗಲೂ, ಸಂಸಾರ ಮಾಡುವಾಗಲೂ ಎಲ್ಲಾ ಸಮಯದಲ್ಲೂ ಅವನು ಉಸಿರಾಡಿಸುತ್ತಲೇ ಇರುತ್ತಾನೆ. ಒಂದೊಂದು ಉಸಿರೂ ಕೂಡಾ ಒಳಗೆ ಹೋಗಿ ಅವನನ್ನು ಮುಟ್ಟಿಯೇ ಹೊರಗೆ ಬರದು. ಅದಕ್ಕೆ ಎಲ್ಲದಕ್ಕೂ ಕಾರಣ ಕರ್ತ ಪರಮಾತ್ಮನೇ ಅನ್ನದುನ್ನ ಅರಿತುಕೋ. ಪ್ರತಿಯೊಂದೂ ಅವನಿಚ್ಚೆಯಂತೆ, ಅವನಿಂದಲೇ ನಡೀತಿರದು. ಅದಕ್ಕೇ ಅವನು ಆಡಿಸ್ತಿರತಕ್ಕಂಥಾ ಉಸಿರಿನ ಕಡೆಗೆ ಗಮನ ಕೊಟ್ಟಿದ್ದೇ ಆದರೆ, ಅವನು ನಮ್ಮನ್ನ ತನ್ನ ಕಡೆಗೆ ಸೆಳೆದುಕೊಂಡು ತನ್ನಲ್ಲಿ ಐಕ್ಯ ಮಾಡಿಕೊಳ್ಳುತ್ತಾನೆ. ನಾವೇ ಅವನಾಗಿ, ಅವನೇ ನಾವಾಗಿಬಿಡ್ತೀವಿ.

ನಾನೆಂಬ ಅಭಿಮಾನವು ದೂರವಾದರೆ ಭಗವಂತನಿಗೆ ಹತ್ತಿರವಾಗುವೆ.

ಎಲ್ಲಾ ಕಾರ್ಯದಲ್ಲೂ ಎಲ್ಲಾ ವಿಚಾರದಲ್ಲೂ ಎಲ್ಲಾ ಸಂದರ್ಭದಲ್ಲೂ ನಾನು ನನ್ನಿಂದಲೇ ನಾನಿರುವುದರಿಂದಲೇ ಎಂಬ ಭಾವನೆಗಳು ಮತ್ತು ನಾನಿಲ್ಲದಿದ್ದರೆ ಸಾಮಾನ್ಯ ಹಾಗೂ ಭಗವದ್ ಕಾರ್ಯಗಳು ಯಾವೂ ನಡೆಯುವುದಿಲ್ಲ, ಭಜನೆ, ಸತ್ಸಂಗ ಇತ್ಯಾದಿ ಮಂಗಳ ಕಾರ್ಯಗಳು ನಡೆಯಲು ನಾನೇ ಕಾರಣ ಆದ್ದರಿಂದ ನಾನು ದೊಡ್ಡವನು, ಬುದ್ದಿವಂತನು ಎಂಬ ಅಭಿಮಾನವು ಮನುಷ್ಯನಲ್ಲಿ ಎಲ್ಲಿಯವರೆಗೂ ನಿಲ್ಲುವುದಿಲ್ಲವೋ ಅಲ್ಲಿಯತನಕ ಅವನು ದೊಡ್ಡವನಾಗಲಾರನು. ಸದ್ಗುರುವಿಗೆ ಹತ್ತಿರವಾಗಲಾರನು. ಅವನು ಚಿಕ್ಕವನಿಗಿಂತಲೂ ಚಿಕ್ಕವನು ಅವನು.

ನಾನೇನೂ ಅಲ್ಲ, ಇದಕ್ಕೆಲ್ಲಾ ಕಾರಣ ಭಗವಂತ ಸದ್ಗುರು. ನಾನು ಕೇವಲ ನೆಪಮಾತ್ರ, ನಾನು ತುಂಬಾ ಚಿಕ್ಕವನು, ಇದಕ್ಕೆಲ್ಲಾ ಸದ್ಗುರುವೇ ಸಮರ್ಥನು, ನಾನು ಅವನ ಮುಂದೆ ಅಸಮರ್ಥ, ನಡೆಯುವ ನಡೆಯುತ್ತಿರುವ ಎಲ್ಲಾ ಕಾರ್ಯಕ್ಕೂ ಆಗು ಹೋಗುಗಳಿಗೂ ಅವನೇ ಕಾರಣ, ಅವನಿಲ್ಲದಿದ್ದರೆ ಯಾವುದೂ ಇಲ್ಲ.. ನಾನಿರುವುದಕ್ಕೂ ಅವನೇ ಕಾರಣ ಎಂದು ಅವನ ಕಡೆ ಮುಖ ಮಾಡಿ ಕೈ ಜೋಡಿಸುವವನೇ ಎಲ್ಲರಿಗಿಂತಲೂ ದೊಡ್ಡವನು. ಅವನು ಚಿಕ್ಕವನಾಗಿದ್ದರೂ ಬುದ್ದಿವಂತನಲ್ಲದಿದ್ದರೂ ಕೊನೆಯ ಸಾಲಲ್ಲಿ ಕುಳಿತಿದ್ದರೂ ಎಲ್ಲರಿಂದಾಚೆ ನಿಂತಿದ್ದರೂ ಅವನೇ ಎಲ್ಲರಿಗಿಂತಲೂ ದೊಡ್ಡವನು, ಹಿರಿಯನು. ದೇವರಿಗೆ ಗುರುವಿನ ಹತ್ತಿರದವನೂ, ಸಮೀಪನು ಭಗವಂತನಿಗೆ ಪ್ರಿಯನು.

ಯಾವನು ಭಗವಂತನಿಗೆ ಶರಣಾಗುತ್ತಾನೋ ಭಯದಿಂದ ಬದುಕುತ್ತಾನೋ ಅವನು ಎಲ್ಲರಿಗೂ ಹೆದರುತ್ತಾನೆ. ಅಂಜುತ್ತಾನೆ, ಅಳುಕಿ ಬಾಳುತ್ತಿರುತ್ತಾನೆ. ಅಂತಹ ಭಗವತ್ ಭಯವುಳ್ಳವನೆದುರಿಗೆ ನಿಲ್ಲಲು ಎಲ್ಲರೂ ಹೆದರುತ್ತಾರೆ. ಅವನಿಗೆ ಭಯಪಡುತ್ತಾರೆ. ಅವನ ಮುಂದೆ ಅಂಜಲೀ ಬದ್ಧರಾಗಿ ಅವನಿಗೆ ಕೈ ಜೋಡಿಸುತ್ತಾರೆ.

ಅಪ್ಪ ಹೇಳಿದರು-
ಯಾರು ಪ್ರಪಂಚದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೊ ಅವರು ಭಗವಂತನಿಗೆ ಹತ್ತಿರ ಆಗೈದರೆ ಅಂತ ಅರ್ಥ.ಯಾಕೆಂದರೆ ಅಂತವರು ಪ್ರಾಪಂಚಿಕ ಜನಗಳನ್ನು ಮೆಚ್ಚಿಸಕೋಗದಿಲ್ಲ.ಇತರರು ಪ್ರಪಂಚದ ಮೆಚ್ಚುಗೆ ಗಳಿಸಕೆ ಏನು ಬೇಕಾದರೂ ಮಾಡುತಾರೆ…ಆದರೆ ಭಗವದ್ಭಕ್ತರು ಅಂತವುನ್ನೆಲ್ಲ ಮಾಡಕೋಗದಿಲ್ಲ , ಅದಕ್ಕೆ ಭಕ್ತರು ಪ್ರಪಂಚದ ನಂಬಿಕೆಗೆ ಅನರ್ಹರಾಗಿರ್ತಾರೆ.ಆದರೆ ದತ್ತ. ಅವರನ್ನು ಆಯ್ಕೆ ಮಾಡ್ಕಂತಾನೆ.
ಅವನು ಏನು ಬೇಕಾದರೂ ಮಾಡ್ತಾನೆ.ಯಾತಕ್ಕೂ ಬರದವರ ಕೂಟೆ ಏನು ಬೇಕಾದರೂ ಮಾಡಿಸ್ತಾನೆ.ಚತುರಾತಿಚತುರ ಅವನು , ನಿಪುಣಾತಿನಿಪುಣ ಅವನು.

ಜೈ ಗುರುದೇವ ದತ್ತ

ಅಪ್ಪ ಹೇಳಿದ ಮಹಾವಾಕ್ಯ

ಅಂತರಾತ್ಮನ ಇರುವಿಕೆಯಿಂದ ಮಾತ್ರ ಶರೀರ ಮಿಸುಗಾಡುತ್ತಾ ಇದೆ. ಅದು ಇರದ್ರಿಂದ ಮನಸ್ಸು ಬುದ್ಧಿ ಶರೀರ ಎಲ್ಲಾ ಇದಾವೆ. ಅದಿಲ್ಲದೆ ಶರೀರ ಶವ ಅಷ್ಟೇ … ಹೀಗಿರುವಾಗ ನೀನು ದೇಹನೇ ನಾನು ಅಂದುಕಂಡರೆ ಎಂಗೆ? ಅದಕ್ಕೆ , ಉಸಿರಾಟದ ಕಡೆ ಗಮನ ಕೊಡು .ಆಗ ಅವನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ.

ಎಲ್ಲಿಯವರೆಗೆ ಸಾಧನೆ ಮಾಡಬೇಕು ?

ಎಲ್ಲಿಯವರೆಗೆ ನಾಮ ಜಪಿಸುತ್ತಿರೋದು? , ಎಲ್ಲಿಯವರೆಗೆ ಧ್ಯಾನ ಮಾಡೋದು ? ಎಲ್ಲಿಯವರೆಗೆ ಸೇವೆ ಮಾಡುತಿರೋದು ? ಎಲ್ಲಿಯವರೆಗೆ ಪೂಜೆ ಮಾಡುತಿರೋದು ? ಎಂದು ಭಕ್ತರ ಮನದಲ್ಲಿ ಪ್ರಶ್ನೆ ಬರುತ್ತದೆ..
ಎಲ್ಲಿಯವರೆಗೆ ಉಸಿರಾಡೋದು ಅಂತ ಪ್ರಶ್ನೆ ಬರೋದಿಲ್ಲ ಅಲ್ವಾ , ಎಲ್ಲಿಯವರೆಗೆ ದಿನಾಲೂ ಅಡಿಗೆ ಮಾಡಿಕೊಂಡು ಉಣ್ಣೋದು ಅಂತ ಅಂದುಕೊಳ್ಳಲ್ಲ ಅಲ್ವಾ ?
ಇದೂ ಹಾಗೇನೇ ..ಇರೋವರೆಗೂ ಮಾಡ್ತಿರದಪ್ಪಾ…ಉಸಿರಾಡೋವರೆಗೂ ಮಾಡ್ತಿರದು‌.ಶರೀರ ಇರೋವರೆಗೂ ಸಾಧನೆ ,ನೇಮ ,ನಾಮ ,ಸತ್ಸಂಗದಲ್ಲಿ ಇರೋದು.
ಎಲ್ಲದಕ್ಕಿಂತ ಗುರುಸೇವೆ ಬಹಳಾ ಅವಶ್ಯಕ.
ಸೇವೆಯೆ ಸಾಧನೆಯಾಗಿಹುದು
ಗುರು ಕರುಣೆಯೆ ಧನ್ಯನ ಮಾಡುವುದು

ಘನಾನುಭವಸಾರ ತತ್ವ ಪದಗಳಲ್ಲಿ ಎಲ್ಲಾ ಅಡಗಿದೆ.ನಿತ್ಯ ಭಜನೆ ,ಸತ್ಸಂಗದಲ್ಲಿ ಇರೋದರಿಂದ ಜ್ಞಾನ ತನಗೆ ತಾನೇ ಗೋಚರಿಸುತ್ತದೆ.
ಗುರು ಭಕ್ತಿಗೆ ಬಹಳ ಶಕ್ತಿ ಇದೆ. ಗುರುವು ಕೃಪೆ ಅನುಗ್ರಹ ಮಾಡಿದರು ಅಂದರೆ ಭಕ್ತರು ಕೃತಕೃತ್ಯರಾದರು ಅಂತ ಅರ್ಥ. ಅದರ ಅರ್ಥ ಇನ್ನೇನೂ ಮಾಡಬೇಕಾದದ್ದಿಲ್ಲ ಅಂತ .ಊರು ಸಿಗೋವರೆಗೂ ಪ್ರಯಾಣ ಬೆಳೆಸಬೇಕು.ಊರು ಸಿಕ್ಕ ಮೇಲೆ ಪ್ರಯಾಣ ಮಾಡಬೇಕಿಲ್ಲ.ಹಾಗೇ ಕೃತಕೃತ್ಯರಾದ ಮೇಲೆ ಮುಗೀತು.ಅದಾದ ಮೇಲೂ ಬದುಕಿರೋವರೆಗೂ ಸಾಧನೆ ಮಾಡುತಿರಲೇ ಬೇಕಾಗುತ್ತದೆ.

ಜೈ ಗುರುದೇವ ದತ್ತ

ಪಾರಾಯಣದ ಮಹತ್ವ

ಯಾರು ದುಃಖದಿಂದ ನೊಂದಿರುತ್ತಾರೆಯೋ, ಪ್ರಾಪಂಚಿಕ ಜೀವನದಲ್ಲಿ ಜಿಗುಪ್ಸೆ ಹೊಂದಿರುತ್ತಾರೆಯೊ ,ಅಂತವರಿಗೆ ಗುರುವಿನ ಚರಿತ್ರೆಯ ಪಾರಾಯಣವು ಪ್ರಾಪಂಚಿಕ & ಪಾರಮಾರ್ಥಿಕ ಜ್ಞಾನ ,ಅರಿವನ್ನು ನೀಡಿ ಶಾಂತಿ ಸಮಾಧಾನ ‌ಸಂತೋಷವನ್ನು ನೀಡುತ್ತವೆ.

ಅಪ್ಪನವರ ಮಾರ್ಗದರ್ಶನ

  • ಯಾವುದೇ ವಸ್ತುಗಳನ್ನು ನಿರ್ಲಕ್ಷ್ಯದಿಂದ ವ್ಯರ್ಥ ಮಾಡಬಾರದು.ಎಲ್ಲಾ ಪರಮಾತ್ಮನದು ಎಂಬ ಭಾವದಿಂದ , ಭಯಭಕ್ತಿಯಿಂದ ಇರಬೇಕು. ಸ್ನಾನಕ್ಕೆ ನೀರನ್ನು ಕೂಡಾ ನಾನು ಎಷ್ಟು ಅವಶ್ಯಕತೆ ಇರುತ್ತದೆಯೋ ಅಷ್ಟೇ ಬಳಸುತ್ತೇನೆ.ಇರುವುದೆಲ್ಲಾ ದತ್ತನದು ಎಂಬ ಜವಾಬ್ದಾರಿಯಿಂದ ಕಾರ್ಯಗಳನ್ನು ನಿರ್ವಹಿಸುತ್ತೇನೆ.
  • ಯಾರಾದರೂ ಬಂದು ಏನಾದರೂ ಚಾಡಿ ಮಾತು ಹೇಳಿದರೂ , ಯಾರ ಬಗ್ಗೆ ಚಾಡಿ ಮಾತು ಹೇಳುತ್ತಾರೋ ಅವರ ಬಗ್ಗೆ ನಿಮಗೆ ವಿರುದ್ಧದ ಭಾವನೆ ಬರಬಾರದು.ನೀವು ಸಮಚಿತ್ತದಿಂದಲೇ ಇರಬೇಕು. ಅದನ್ನು ಸ್ಥಿತಪ್ರಜ್ಞ ಸ್ಥಿತಿ ಎನ್ನುವುದು.
  • ಸುಳ್ಳು, ಕಳ್ಳತನ, ಮೋಸ, ನಿಂದನೆ ಮಾಡದಿರುವುದು, ಚಾಡಿ ಹೇಳದಿರುವುದು, ಚಾಡಿಮಾತಿಗೆ ಕಿವಿಗೊಡದಿರುವುದು ಇಷ್ಟು ಪಾಲಿಸಿದವರಿಗೆ ಮುಕ್ತಿಯನ್ನು ಕೊಡಬೇಕೆಂದು ನನಗೆ ಅನಿಸುತ್ತದೆ.ಅಂಥಹ ಭಕ್ತರು ನನ್ನ ಆತ್ಮಬಂಧುಗಳು.

ಆತ್ಮೋದ್ಧಾರಕ್ಕಾಗಿ ಜೀವನ ಮಾಡಬೇಕು

ಗುರು ಎಂಬ ಯಜಮಾನನ ದಾಸನಾಗಿಬಿಟ್ಟರೆ , ಅವನು ನಮ್ಮದು , ನಮ್ಮ ಮಕ್ಕಳು – ಕುಟುಂಬದ ,ಎಲ್ಲಾ ಆಗುಹೋಗುಗಳ ಹೊಣೆಯನ್ನು ತಾನೇ ಹೊತ್ತು ಕೊಳ್ಳುತ್ತಾನೆ.
ಆಧ್ಯಾತ್ಮಿಕವಾಗಿ ಜೀವನ ಮಾಡಿರಿ .ಭಗವಂತನ ಭಜನೆ ಸತ್ಸಂಗ ಮಾಡಿರಿ , ಸಂಸಾರವನ್ನೂ ಮಾಡಿರಿ. ಕುಟುಂಬದಲ್ಲಿ ಶಾಂತಿಯಿಂದ ನೆಮ್ಮದಿಯಿಂದ ಇರಿ ,ನಿಮ್ಮ ಕರ್ತವ್ಯವನ್ನು ನೀವು ಮಾಡಿಕೊಂಡು ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುತ್ತಾ ಸಾಧನೆ ಮಾಡಿಕೊಂಡು ಹೋಗಬೇಕು. ಧ್ಯಾನ ಭಜನೆ ಸತ್ಸಂಗ ಎಲ್ಲವನ್ನು ನಮ್ಮ ಜನ್ಮೋದ್ಧಾರಕ್ಕೋಸ್ಕರ ಮಾಡಬೇಕು. ನಾವು ಆತ್ಮೋ ದ್ಧಾರಕ್ಕೋಸ್ಕರ ಪ್ರಯತ್ನಪಟ್ಟಾಗ ಭಗವಂತ ಬೇಗ ಪ್ರಸನ್ನನಾಗುತ್ತಾನೆ ಒಲಿಯುತ್ತಾನೆ. ಪ್ರಕಟನಾಗುತ್ತಾನೆ. ಏನಾದರೂ ಕಷ್ಟ ಬಂದಾಗ ನೀನೇ ನೋಡಿಕೊಳ್ಳಪ್ಪ ,ಕಾಪಾಡಪ್ಪ ಎಲ್ಲವೂ ನಿನಗೆ ಸೇರಿದ್ದಪ್ಪ ಅಂತ ಬೇಡಬೇಕು .ಆಗ ಅವನು ನಮ್ಮನ್ನು ನಮ್ಮ ಸುತ್ತಮುತ್ತ ಇರುವವರನ್ನೂ ಕಾಪಾಡುತ್ತಾನೆ.
ಆಧ್ಯಾತ್ಮಿಕ ಜೀವನ ಅಂದರೆ ನಮ್ಮ ಜೀವನದಲ್ಲಿ ಆತ್ಮತತ್ವಕ್ಕೆ ಮೊದಲ ಆದ್ಯತೆ ಕೊಡುವುದು ಎಂದು ಅರ್ಥ..ಜೀವನದಲ್ಲಿ ಭಗವಂತನಿಗೆ ಆದ್ಯತೆ ಕೊಡುವ ಭಕ್ತರ ಬಾಳು ಆಧ್ಯಾತ್ಮಿಕವಾಗುತ್ತದೆ.
ಭಗವನ್ಮಯವಾಗುತ್ತದೆ. ಇಷ್ಟು ಮಾಡಿದರೆ ಸಾಕು ಭಗವಂತ ಸುಪ್ರೀತನಾಗುತ್ತಾನೆ.

ಅಪ್ಪನವರ ವಾಕ್ಯಗಳು –

ಆತ್ಮಸಾಗರದಲ್ಲಿ ಮುಳುಗಿ
ಭವಸಾಗರದಲ್ಲಿ ಮುಳುಗಬೇಡಿ.


ಸಕ್ಕರೆ ಯಾರ ಮನೆಯಲ್ಲಿ ಇದ್ದರೂ ಸಿಹಿಯಾಗಿಯೇ ಇರುವ ಹಾಗೆ ,ಆತ್ಮ ಸ್ವರೂಪವು ಎಲ್ಲಾ ಅವಸ್ಥೆಯಲ್ಲಿ ಒಂದೇ ಆಗಿರುತ್ತದೆ ಎಂಬುದು ಜ್ಞಾನಿಯ ಸ್ವಾನುಭವದ ಲಕ್ಷಣ.


ತನ್ನ ನಿಜಸ್ವರೂಪದ ಅರಿವೇ ಮಡಿ.
ಆ ಅರಿವಿಲ್ಲದಿರುವ ಅಜ್ಞಾನವೇ ಮೈಲಿಗೆ

ಜೈ ಗುರುದೇವದತ್ತ

ಭಗವಂತ ನಮ್ಮನ್ನ ಸಂಸಾರಿಗಳನ್ನಾಗಿ ಮಾಡಿ ಈ ಪ್ರಪಂಚದಲ್ಲಿ ಇಟ್ಟಿದ್ದಾನೆ. ಇಲ್ಲಿ ನಾವು ನಮ್ಮ ಲೌಕಿಕ ಕರ್ತವ್ಯವನ್ನು ಮಾಡಬೇಕು. ಇದನ್ನ ಮಾಡಿಕೊಂಡು ಎಷ್ಟು ಸಾಧ್ಯವೋ ಅಷ್ಟು ಸಾಧನೆ ಮಾಡುತ್ತಿರಬೇಕು.
ಮತ್ತೆ ಮನಸಿನೊಳಗಿಂದ ಎದುರಿಗೆ ಕಾಣಿಸುತ್ತಿರುವ ಪ್ರಪಂಚವೆಲ್ಲಾ ಅಶಾಶ್ವತ, ಸ್ಥಿರವಾದದ್ದಲ್ಲ ಎನ್ನುವುದನ್ನೂ ನಿಶ್ಚಯ ಮಾಡಿಕೊಂಡು, ನಿಧಾನವಾಗಿ ಕೈ ಬಿಡುತ್ತಾ ಬರುವ ಅಭ್ಯಾಸ ಮಾಡಬೇಕು. ಹೀಗೆ ಮಾಡಿಕೊಂಡು, ಕರ್ತವ್ಯವನ್ನು ಮಾಡಿಕೊಂಡು ಅವನ ಸ್ಮರಣೆ ಮಾಡ್ತಾ ಹೋದ್ರೆ ಸಾಕು, ಅವಾಗ ನಾವು ಹಿಮಾಲಯದಲ್ಲಿರೋ ಋಷಿಗಳನ್ನೂ ಮೀರಿದವರಾಗಿ ಬಿಡ್ತೀವಿ.

ನಿತ್ಯದ ಜೀವನದಲ್ಲಿ ಸಾಕಷ್ಟು ಸಮಯ ಸಿಗುತ್ತೆ. ಆ ಸಮಯದಲ್ಲಿ ಅಂಗಡಿಗೆ, ಆಫೀಸಿಗೆ ಹೋಗುತ್ತಾ ಬರುತ್ತಾ, ದೇವರ ಸ್ಮರಣೆ ಮಾಡ್ತಿರಬೇಕು. ನಾವು ಮಾಡುವ ಎಲ್ಲಾ ಕೆಲಸವೂ ಭಗವಂತನ ಕೆಲಸ ಅಂದುಕೊಂಡು ಮಾಡಬೇಕು. ವ್ಯವಹಾರದಲ್ಲಿ, ಬದುಕಿನಲ್ಲಿ ಏನು ಲಾಭ ಆದರೂ, ನಷ್ಟವಾದರೂ ಅದರಲ್ಲಿ ನಾವು ಭಗವಂತನನ್ನೇ ಕಾಣಬೇಕು. ಅವಾಗ ನಮ್ಮ ಉಸಿರು, ನಮ್ಮ ನಡವಳಿಕೆ, ನಮ್ಮ ಜೀವನ ಎಲ್ಲವೂ ಭಗನ್ಮಯವಾಗಿಬಿಡುತ್ತದೆ. ಅವಾಗಿನ್ನೇನು ಎಲ್ಲವೂ ‌ಅದೇ ಆ ಸಚ್ಚಿದಾನಂದ ವಸ್ತುವೇ ಆಗಿ ಬಿಟ್ಟಿರುತ್ತೆ !

“ಕೆಲವರು ಹೆಂಡತಿಯ ಮೇಲೋ, ಮಕ್ಕಳ ಮೇಲೋ, ಹಣದ ಮೇಲೋ ಎಲ್ಲಿಲ್ಲದ ಮೋಹ ಇಟ್ಟು ಕೊಂಡಿರುತ್ತಾರೆ. ಆಗ, ಗುರು ಅವರಿಗೆ ಅದರಿಂದಲೇ ದುಃಖ, ವಿರೋಧ ಬರೋ ಹಾಗೆ ಮಾಡಬಿಡ್ತಾನೆ. ಆ ಮೋಹದಿಂದ ಆ ಭಕ್ತ ದೂರ ಆಗೋ ಹಾಗೆ ಮಾಡಿ ಬಿಡುತ್ತಾನೆ. ಭಕ್ತ ತಿಳಿವಳಿಕೆ ಉಳ್ಳವನಾದರೆ, ಗುರು ನನಗೆ ಸರಿಯಾಗಿ ಬುದ್ಧಿ ಕಲಿಸಿದ ಅಂತ ಅಂದುಕೊಳ್ಳುತ್ತಾನೆ. ಆಗ ಅವನಿಗೆ ಜ್ಞಾನೋದಯ ಆಗಿಬಿಡುತ್ತೆ. ಆದರೆ ತಿಳಿವಳಿಕೆ ಇಲ್ಲದವನಾದರೆ, ಪರಿತಾಪ ಪಡ್ತಾನೆ. ಯಾಕಿಂಗಾಯ್ತು, ನಾನು ಗುರುವನ್ನು ಎಷ್ಟು ನಂಬಿದ್ದೆ, ಆ ಗುರು ಹೀಗೆಲ್ಲಾ ಮಾಡಬಹುದಾ ? ನಂಬಿದ ಭಕ್ತನಿಗೆ ಈ ರೀತಿ ಆಗಬಹುದಾ? ಆ ಗುರುವಿಗೆ ಕಣ್ಣಿಲ್ವಾ, ಅಂತೆಲ್ಲಾ ಗುರುವಿನ ಬಗ್ಗೆ ವಿರೋಧ ಭಾವನೆಯನ್ನ ಬೆಳಸಿಕೊಳ್ಳಲು ಶುರು ಮಾಡಿ ಬಿಡುತ್ತಾನೆ. ಅವನಿಗೆ ತನ್ನ ನಂಬಿಕೆಯೆ ಸುಳ್ಳೋ ,ಇಲ್ಲ ಗುರುವೇ ಸುಳ್ಳೋ ಅಂತ ಅನಿಸುವುದಕ್ಕೆ ಶುರುವಾಗಿಬಿಡುತ್ತೆ.

ಗುರುವಿಗೆ ಇವನು ತೆಗಳುವುದು, ಬೈಯುವುದು ಎಲ್ಲಾ ಗೊತ್ತಾಗಿರುತ್ತೆ. ಬೈಸಿಕೊಳ್ಳುವುದಕ್ಕೂ ಅವನು ಸಿದ್ಧ. ಆ ನಂತರದಲ್ಲಿ ಕೂಡಾ ಅವನು ಭಕ್ತನಿಗೆ ಒಳ್ಳೆಯದನ್ನೇ ಮಾಡುತಾನೆ. ಭಕ್ತನ ಕೈಯಂತೂ ಬಿಡುವುದಿಲ್ಲ. ಗುರು ತನ್ನ ಹಿತಕ್ಕಾಗಿ ಏನು ಮಾಡಿದ, ಎಷ್ಟು ಶ್ರಮಪಟ್ಟ ಅನ್ನುವುದು ಸತ್ಯವಾಗಲೂ ಪ್ರತಿಯೊಬ್ಬ ಭಕ್ತನಿಗೂ ಕೊನೆಗಾದರೂ ಗೊತ್ತಾಗುತ್ತದೆ. ಪ್ರಪಂಚದಲ್ಲಿರೊ ಮಾನವ ಮಾತ್ರದವರಾರಿಗೂ ಇನ್ನೊಬ್ಬನ ಅವಗುಣಗಳನ್ನ ಅಳಿಸಕಾಗದಿಲ್ಲ. ಆ ಕೆಲಸ ಗುರುವಿಗೆ ಮಾತ್ರ ಸಾಧ್ಯವಾಗುತ್ತೆ.ಅದನ್ನು ಅವನು ಮರೆಯಲ್ಲಿ ಇದ್ದುಕೊಂಡೇ ಮಾಡುತಾನೆ. ಭಕ್ತನನ್ನ ಪರಿಪೂರ್ಣನನ್ನಾಗಿಸುವುದೇ ಅವನ ಇಚ್ಛೆ. ಭಕ್ತನನ್ನ ತನ್ನಂತೆಯೇ ಮಾಡಿಕೊಂಡು ಬಿಡೋಣ ಅಂತ ಗುರು ಎಷ್ಟೆಲ್ಲಾ ಪ್ರಯತ್ನಗಳನ್ನ ಮಾಡ್ತಾನೆ. ಹಾಗೆಯೇ ಅವನಿಗೆ ಸತ್ಯದ ಅರಿವು ಮೂಡಿಸುತ್ತಾನೆ” !

ಪಾಲಿಕೆ ನೋಡಿದು ದೇವರ ಮಾಡಿದರದಕೆ ಶೃಂಗಾರ
ಏನಿದು ಚಂದ ಅಂದಾರ ಮಾಡುತಲಿರುವರು ವಯ್ಯಾರ

ಎಂಬುದಾಗಿ ಮನುಷ್ಯನ ಶರೀರವೇ ಪಾಲಿಕೆ ,ಇದರೊಳಗೆ ಇರೋ ಅಂತರಾತ್ಮನೇ ಪಾಲಿಕೆಯೊಳಗಿನ ಶಿವ.ಪಾಲಿಕೆಯನ್ನು ಹೊತ್ತವರು ಎಷ್ಟು ಭಯಭಕ್ತಿಯಿಂದ ಇರುತ್ತಾರೋ ಹಾಗೆಯೇ ಪರಮಾತ್ಮನು ವಾಸವಾಗಿರುವ ಶಿವಾಲಯವೇ ಆದ, ಪಾಲಿಕೆಯೇ ಆದ ಶರೀರ ಇರುವಾಗಲೇ ಮನುಷ್ಯ ಸದಾಕಾಲವೂ ಸದಾಶಿವನ ಧ್ಯಾನದಲ್ಲಿ ಮಗ್ನನಾಗಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ಅಪ್ಪನವರು ತಿಳಿಸಿದರು.

ನಮಗೆಷ್ಟು ಲಭ್ಯವೋ ಅದರಲ್ಲಿಯೇ ತೃಪ್ತಿಯಿಂದ ಇರುವುದನ್ನು ಕಲಿತುಕೊಳ್ಳಬೇಕು. ಏನು ಅವಕಾಶ ಸಿಗುತ್ತದೆಯೋ ಅದೇ ಪರಮಾತ್ಮನ ಕರುಣೆ ಎಂದು ತಿಳಿದುಕೊಂಡು , ಆನಂದದಿಂದ ಇರುವುದನ್ನು ಕಲಿತುಕೊಳ್ಳಬೇಕು.ನಿರಾಸೆ ಇರಬಾರದು.ಆನಂದದಿಂದ ಇರುವುದು, ನಿಶ್ಚಿಂತೆ, ತೃಪ್ತಿಯಿಂದ ಇರುವುದು ಆಧ್ಯಾತ್ಮಿಕತೆಗೆ ಸಹಾಯಕ.

“ಭಗವಂತನಿಗೆ ತೃಪ್ತಿ ಆಗುವಂತೆ ನೀವು ಪೂಜೆ ಸೇವೆ ಧ್ಯಾನ ಮಾಡಿಬಿಟ್ಟರೆ, ಅವನು ಸಂತೃಪ್ತನಾಗಿಬಿಟ್ಟರೆ ನಿಮ್ಮ ಜನ್ಮ ಪಾವನವಾದಂಗೆ” !.

ಎಲ್ಲರೂ ಎಲ್ಲಾ ರೀತಿಯ ಸೇವೆಗಳನ್ನು ಮಾಡಬೇಕು ಅಂತೇನಿಲ್ಲ.ಯಾರಿಗೆ ಧ್ಯಾನ ಇಷ್ಟನೋ ಅವರು ಯಥೇಚ್ಛವಾಗಿ ಧ್ಯಾನ ಮಾಡಬೇಕು. ಯಾರಿಗೆ ಪೂಜೆ, ಭಜನೆ ಇಷ್ಟನೋ ಅವರು ಅದನ್ನು ಶ್ರದ್ಧೆಯಿಂದ ಮಾಡಬೇಕು. ಯಾರಿಗೆ ಪರಮಾತ್ಮ ಸಮೃದ್ಧವಾಗಿ ಕೊಟ್ಟಿರುತ್ತಾನೋ ಅವರು ಮುಕ್ತವಾಗಿ ದಾನ ಧರ್ಮ ಮಾಡ್ರಿ , ಅವರವರ ಅನುಕೂಲಕ್ಕೆ ಅನುಗುಣವಾಗಿ ಸಂತೋಷವಾಗಿ ಮಾಡಬಹುದು. ಅದರಲ್ಲಿಯೂ ಭಕ್ತರು ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಕೊಟ್ಟು ಅನ್ಯೋನ್ಯತೆಯಿಂದ , ಅಸೂಯೆ – ದ್ವೇಷಕ್ಕೆ ಆಸ್ಪದ ಕೊಡದಂತೆ ಭಕ್ತಿ ಮಾಡ್ಕಂಡೋಗ್ರಿ. ಅವನ್ನೆಲ್ಲ ಇಟ್ಟುಕೊಂಡರೆ ಅದರ ಪರಿಣಾಮ ಅವರಿಗೇ ಗೊತ್ತಾಗುತ್ತದೆ.ದಿನಾಲೂ ನಾನು ದೇವರಲ್ಲಿ ಬೇಡುತ್ತೇನೆ ,
“ಈ ಭಕ್ತರೆಲ್ಲಾ ಚೆನ್ನಾಗಿ ಇರಲಿ,ಇವರನ್ನು ಚೆನ್ನಾಗಿ ನೋಡಿ ಕೊಳ್ಳಪ್ಪಾ “ಅಂತ!!!

ಜೈಗುರುದೇವದತ್ತ

ಗುರುಭಕ್ತರ ಪರಿವಾರವು ಜೇನುಗೂಡಿನಂತೆ

ಭಕ್ತರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಸಮಯದಲ್ಲಿ ,ಅವರ ಮನಸ್ಸಿನಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಅವರನ್ನು ಏಕಚಿತ್ತದಿಂದ ಸನ್ಮಾರ್ಗದಲ್ಲಿ ಮುಂದುವರಿಯುವಂತೆ ಸದ್ಗುರುನಾಥರು ಹೀಗೆ ಮಾರ್ಗದರ್ಶನವನ್ನು ಮಾಡಿದರು.

” ಆ ನಿರಾಕಾರ ಪರಮಾತ್ಮನೇ ಎಲ್ಲರಲ್ಲೂ ಹೊಕ್ಕು ,ಅವರ ಮೂಲಕ ದೈವ ಕಾರ್ಯಗಳನ್ನು ಸೇವೆಯನ್ನು ಮಾಡಿಸಿಕೊಳ್ಳುತ್ತಾನೆ. ಗುರುವಿನ ಭಕ್ತ ಪರಿವಾರವೆಲ್ಲವೂ ಒಂದೇ ಜೇನುಗೂಡಿನಂತೆ. ಯಾರೇ ಅದಕ್ಕೆ ಒಂದು ಸಣ್ಣ ಕಲ್ಲು ಹಾಕಿದರೂ , ಅದು ಅವರಿಗೇ ಪರಿಣಾಮವನ್ನು ಬೀರುತ್ತದೆ. ಗುರುಕಾರ್ಯದ ಶ್ರೇಯಸ್ಸು ಯಶಸ್ಸು ಕೀರ್ತಿಯನ್ನು ಹೆಚ್ಚಿಸಲು ,ಭಕ್ತಿಯನ್ನು ಮಾಡಿಕೊಂಡು ಹೋಗಲು ಪ್ರಯತ್ನವನ್ನು ಪಡಬೇಕೇ ಹೊರತು ಅವನು ಹಾಗೆ ,ಇವನು ಹೀಗೆ ಎಂದು ಯೋಚಿಸುವ ಮೂಲಕ ದೈವಕಾರ್ಯವನ್ನು ಭಂಗಪಡಿಸಬಾರದು. ಪರಮಾತ್ಮನು ಎಲ್ಲರೊಳಗೂ ಇದ್ದಾನೆ, ನಾನೂ ಎಲ್ಲರೊಳಗೂ ಇದ್ದೀನಿ. ನನಗೆ ಎಲ್ಲರೂ ಇಷ್ಟ ,ಎಲ್ಲರಲ್ಲಿಯೂ ನನಗೆ ಪ್ರೇಮ, ಪ್ರೀತಿ. ಅದು ಇರುವುದರಿಂದಲೇ ನೀವೆಲ್ಲರೂ ಒಂದೇ ತಂದೆಯ ಮಕ್ಕಳಾಗಿ ಭಗವದ್ ಭಕ್ತರಾಗಿ ಸೇವೆಯನ್ನು ಮಾಡಿಕೊಂಡು ಹೋಗುತ್ತಿದ್ದೀರ. ನಿಮಗೆಲ್ಲರಿಗೂ ಶ್ರೇಯಸ್ಸಾಗಲಿ, ಒಳ್ಳೆಯದಾಗಲಿ .ಆ ನಿರಾಕಾರ ಸ್ವರೂಪ ಜ್ಯೋತಿರ್ಮಾರ್ಗದಿಂದ ಬಂದು ದರ್ಶನ ಕೊಟ್ಟ ಪಾರ್ವತಿ ಪರಮೇಶ್ವರ ನಿಮ್ಮೆಲ್ಲರಿಗೂ ಕ್ಷಣ ಬಿಡದೆ ಎಡೆಬಿಡದೆ ನೋಡಿಕೊಳ್ಳಲಿ .ಕೈಲಾದಷ್ಟು ಸೇವೆ ಮಾಡುವುದೊಂದೇ ನಿಮ್ಮ ಗುರಿಯಾಗಿರಲಿ. ಎಲ್ಲರಿಗೂ ಒಳ್ಳೆಯದನ್ನೇ ಬಯಸಿರಿ ..ಒಳ್ಳೆಯದನ್ನೇ ಮಾತಾಡಿರಿ. ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡಲು ಹೋಗಬೇಡಿ .ಎಲ್ಲರಿಗೂ ಜಯವಾಗಲಿ ಒಳ್ಳೆಯದಾಗಲಿ.

ಸಾತ್ವಿಕ ಅಹಂಕಾರವನ್ನು ಬಗ್ಗಿಸುವುದು ಬಹು ಕಷ್ಟ

ತಮೋಗುಣದಲ್ಲಿ ಇರುವವನಿಗೆ ಆಧ್ಯಾತ್ಮಿಕವಾಗಿ ಏನೂ ಗೊತ್ತಿರುವುದಿಲ್ಲ. ರಜೋಗುಣವು ತನಗೇನೋ ಗೊತ್ತಿದೆ ಎಂಬಂತೆ ಬೊಗಳೆ ಬಿಟ್ಟುಕೊಂಡು ಓಡಾಡುತ್ತಿರುತ್ತದೆ. ಆದರೆ ಅವನಿಗೆ ಸತ್ಯ ಯಾವುದು ಮಿಥ್ಯ ಯಾವುದು ಎಂಬುದು ಗೊತ್ತಿರುವುದಿಲ್ಲ .ಹಾಗೆಲ್ಲ ಮಾಡಿದರೆ ಒದೆ ಬೀಳುತ್ತದೆ , ಆ ದಾರಿ ಬೇಡ ಎಂದು ಹೆದರಿಸಿದಾಗ ರಜೋಗುಣವು ಸುಮ್ಮನಾಗುತ್ತದೆ. ಆದರೆ ಸಾತ್ವಿಕದಲ್ಲಿ ಇರುವವನು ತಾನು ದೇಶಕೋಶ ಎಲ್ಲವನ್ನೂ ಬಲ್ಲೆ , ಧ್ಯಾನ ಹೋಮ ಜಪಾದಿಯಾಗಿ ನನಗೆಲ್ಲವೂ ಗೊತ್ತು ಎಂದುಕೊಂಡಿರುವವನನ್ನು ಬಗ್ಗಿಸುವುದು ಬಹಳ ಕಷ್ಟ .ತಮೋಗುಣದಲ್ಲಿ ಇರುವವನನ್ನು ಸುಮ್ಮನಿರಿಸಬಹುದು, ಆದರೆ ಇಂಥವರನ್ನು ಸುಮ್ಮನಿರಿಸುವುದು ಬಹಳ ಕಷ್ಟ, ಏಕೆಂದರೆ ಅದು ಅಜ್ಞಾನಕ್ಕಿಂತಲೂ ಅಜ್ಞಾನ ! ಅಷ್ಟೋ ಇಷ್ಟೋ ತಿಳಿದುಕೊಂಡಿರುವುದರಿಂದ ತನ್ನ ಶಕ್ತಿ ಮೀರಿ ಅವನು ಎಲ್ಲದಕ್ಕೂ ಉತ್ತರ ಕೊಡುತ್ತಾನೆ , ಎಲ್ಲರಿಗೂ ಬುದ್ಧಿ ಹೇಳುತ್ತಾನೆ.

ಪ್ರಾಪಂಚಿಕವಾದ ವಿದ್ಯೆಯನ್ನು ಕಲಿತವರು ,ಏನೆಲ್ಲ ವಸ್ತು ವೈವಿಧ್ಯಗಳನ್ನು ಕಂಡುಹಿಡಿಯುತ್ತಾರೆ, ಸಂಶೋಧನೆ ಮಾಡುತ್ತಾರೆ .ಅಂಥವರಿಗೆ ತಾವು ಮಾಡಿದ ಸಾಧನೆಯ ಬಗ್ಗೆ ಅಹಂಕಾರವಿರುತ್ತದೆ. ಅವರ ಯೋಗ್ಯತಾನುಸಾರವಾಗಿ ಅವರಿಗೆ ಪ್ರಶಸ್ತಿಗಳೂ ಬಿರುದುಗಳು ಲಭ್ಯವಾಗುತ್ತಿರುತ್ತವೆ. ತನ್ನ ಬುದ್ಧಿಶಕ್ತಿ , ಸಾಧನೆಯಿಂದಲೇ ತನಗೆ ಇಷ್ಟೆಲ್ಲಾ ಸಿಕ್ಕಿದೆ ಎಂಬ ನಂಬಿಕೆ ಇಟ್ಟುಕೊಂಡಿರುವವನು ಯಾರ ಮಾತನ್ನೂ ಕೇಳುವುದಿಲ್ಲ. ಸಾಮಾನ್ಯವಾಗಿ ಇಂತಹ ಪ್ರಶಸ್ತಿಗಳು, ಬಿರುದು ಬಾವಲಿಗಳು ಅದನ್ನು ಪಡೆದವರು  ಮದೋನ್ಮತ್ತರಾಗಲು ಕಾರಣವಾಗುತ್ತವೆ. ತಮಗೆ ಯಾರೇ ಸಿಕ್ಕರೂ ಅಂತವರು ತಮ್ಮ ಸಾಧನೆ, ತಮಗೆ ದೊರೆತಿರುವ ಪ್ರಶಸ್ತಿಯ ಕುರಿತಾಗಿಯೇ ಹೇಳಿಕೊಳ್ಳುತ್ತಿರುತ್ತಾರೆ. ಅಂಥವನನ್ನು ವಿನಮ್ರನಾಗಿಸಲು ಯಾರಿಂದಲೂ ಆಗುವುದಿಲ್ಲ. ಇವರ ಮಾತನ್ನು ಕೇಳುವವರಿಗೆ ಅದರಲ್ಲಿ ಅಷ್ಟಾಗಿ ಆಸಕ್ತಿ ಇಲ್ಲದಿದ್ದರೂ, ಆ ಪ್ರಶಸ್ತಿಗಳನ್ನು ನೋಡುವ ವ್ಯವಧಾನ ಇಲ್ಲದಿದ್ದರೂ ,ಇವರು ಮಾತ್ರ ತಮ್ಮ ಪಾಡಿಗೆ ತಾವು ಆತ್ಮಪ್ರಶಂಸೆಯ ಮಾತುಗಳನ್ನು ಹೇಳಿಕೊಳ್ಳುತ್ತಿರುತ್ತಾರೆ.

ಬೆಳೆದ ಬೆಳೆಗಳನ್ನು ಉಪಯೋಗಿಸಿ ಅಡಿಗೆ ಮಾಡಿ ಉಣ್ಣುತ್ತೀರೇ ಹೊರತು ನೀವು ಬೀಜ ಕಾಳುಗಳನ್ನು ಸೃಷ್ಟಿ ಮಾಡಕಾಗುತ್ತದೆಯೇ ? ಸಮಸ್ತ ಪ್ರಾಣಿ, ಪಕ್ಷಿ,ಜಲಚರ ಕ್ರಿಮಿ ಕೀಟಾದಿಗಳನ್ನು ಯಾರು ಸೃಷ್ಟಿ ಮಾಡಿರುವುದು ? ಆಕಾಶ ಸೂರ್ಯ ನಕ್ಷತ್ರಗಳನ್ನು ಮನುಷ್ಯ ಮಾಡಿ ಇಟ್ಟಿದಾನಾ ? ಇದನ್ನ ಚಿಂತನೆ ಮಾಡಿ..ತನ್ಮೂಲಕ ಅಂತರ್ಯಾಮಿಯಾಗಿರೋ ಆ ಸರ್ವರಕ್ಷಕನಿಗೆ ತಲೆ ಬಾಗಿರಿ.
ಗಾಳಿಯನ್ನು ನಾವು ಕೊಂಡುಕೊಂಡಿಲ್ಲ,
ಭೂಮಿಯೇನು ನಮ್ಮ ತಾತನ ಆಸ್ತಿಯಲ್ಲ,ನಾವು
ನೀರನ್ನು ತಯಾರಿಸಿಲ್ಲ ಅಂದ ಮೇಲೆ ಸೃಷ್ಟಿ ಮಾಡಿರೋನು ಒಬ್ಬನು ಇರಲೇ ಬೇಕಲ್ಲವೇ? ಆ ಶಕ್ತಿಗೆ ತಲೆ ಬಾಗಿರಿ.
ಎಲ್ಲೆಲ್ಲೂ ಭಗವಂತನ ಇರುವಿಕೆಯನ್ನು ನೋಡುತ್ತಾ ಜೀವನ ಮಾಡಿದಾಗ ಭಗವಂತ ತನ್ನ ಇರುವಿಕೆಯನ್ನು ಪ್ರಕಟ ಮಾಡುತ್ತಾನೆ.ಸಂತೃಪ್ತಿಯಿಂದ ,ಆನಂದವಾಗಿ ಇರುವುದು ಕಲಿಯಬೇಕು.

ಆಶ್ರಮದಲ್ಲಿ ಭಕ್ತರು ನಿತ್ಯವೂ ನೇಮದಿಂದ ಭಜನೆಯನ್ನು ಮಾಡುತ್ತಾರೆ.ಆ ಸಮಯದಲ್ಲಿ ಕೆಲವೊಮ್ಮೆ ಅಪ್ಪನವರು ಭಜನೆಯನ್ನು ಹೇಳಿ ಕೊಡುತ್ತಾರೆ. ತದ ನಂತರ ಭಕ್ತರಿಗೆ ಕೆಲವು ಹಿತನುಡಿಗಳನ್ನು ಹೇಳುವ ಮೂಲಕ ಮಾರ್ಗದರ್ಶನ ಮಾಡಿದರು.

1 ) ಯಾವುದೇ ವಸ್ತುಗಳನ್ನು ನಿರ್ಲಕ್ಷ್ಯದಿಂದ ವ್ಯರ್ಥ ಮಾಡಬಾರದು.ಎಲ್ಲಾ ದತ್ತನದು ಎಂಬ ಭಾವದಿಂದ , ಭಯಭಕ್ತಿಯಿಂದ ಇರಬೇಕು. ಸ್ನಾನಕ್ಕೆ ನೀರು ಕೂಡಾ ನಾನು ಎಷ್ಟು ಅವಶ್ಯಕತೆ ಇರುತ್ತದೆಯೋ ಅಷ್ಟೇ ಬಳಸುತ್ತೇನೆ.ಇರುವುದೆಲ್ಲಾ ದತ್ತನದು ಎಂಬ ಜವಾಬ್ದಾರಿಯಿಂದ ಕಾರ್ಯಗಳನ್ನು ನಿರ್ವಹಿಸುತ್ತೇನೆ.

2 ) ಯಾರಾದರೂ ಬಂದು ಏನಾದರೂ ಚಾಡಿ ಮಾತು ಹೇಳಿದರೂ , ಯಾರ ಬಗ್ಗೆ ಚಾಡಿ ಮಾತು ಹೇಳುತ್ತಾರೋ ಅವರ ಬಗ್ಗೆ ನಿಮಗೆ ವಿರುದ್ಧದ ಭಾವನೆ ಬರಬಾರದು.ನೀವು ಸಮಚಿತ್ತದಿಂದಲೇ ಇರಬೇಕು. ಅದನ್ನು ಸ್ಥಿತಪ್ರಜ್ಞ ಸ್ಥಿತಿ ಎನ್ನುವುದು.

3 ) ಸುಳ್ಳು, ಕಳ್ಳತನ, ಮೋಸ, ನಿಂದನೆ ಮಾಡದಿರುವುದು, ಚಾಡಿ ಹೇಳದಿರುವುದು, ಚಾಡಿಮಾತಿಗೆ ಕಿವಿಗೊಡದಿರುವುದು , ಇಷ್ಟು ಪಾಲಿಸಿದವರಿಗೆ ಮುಕ್ತಿಯನ್ನು ಕೊಡಬೇಕೆಂದು ನನಗೆ ಅನಿಸುತ್ತದೆ.

4 ) ಎಲ್ಲಾ ಭಕ್ತರೂ ನನ್ನ ಆತ್ಮಬಂಧುಗಳು. ನನಗೆ ಯಾರಲ್ಲಿಯೂ ಇವರು ಹೆಚ್ಚು ಇವರು ಕಡಿಮೆ ಎಂಬ ಭೇದ ಭಾವವಿಲ್ಲ.ನೀವೆಲ್ಲರೂ ನನ್ನ ಜೀವಕಣಗಳು.

5] ಯಾರೋ ನೋಡುತ್ತಾರೆಂದು ಮಾಡುವ ಭಜನೆ , ಸೇವೆಯು ಪರಮಾತ್ಮನಿಗೆ ಮುಟ್ಟುವುದೇ ಇಲ್ಲ. ಕೂಗಿದರೆ ಕೈಲಾಸಕ್ಕೆ ಮುಟ್ಟಬೇಕು, ಭಜಿಸಿದರೆ ಅವನು ಒಲಿದು ಸಾಯುಜ್ಯವನ್ನೇ ಕೊಡಬೇಕು.. ಹಾಗೆ ಪೂಜೆ ಜಪ ಭಜನೆಯನ್ನು ಮಾಡಬೇಕು. ಒಂದೇ ಸಾರಿ ಬರದಿದ್ರೂ ಅಭ್ಯಾಸ ಮಾಡಬೇಕು.

6] ಯಾರು ದೇಹವನ್ನು ಸಂಪೂರ್ಣವಾಗಿ ಉಪಯೋಗಿಸಿ , ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪೂಜೆ ಸೇವೆಯನ್ನು ಮಾಡುತ್ತಾರೋ, ಅವರು ಧ್ಯಾನ ಯೋಗಾದಿ ಸಾಧನೆ ಮಾಡಿದರೆ ದೊರೆಯುವ ಫಲವನ್ನೇ ಪಡೆಯುತ್ತಾರೆ.

ಸದ್ಗುರು ವಾಣಿ
ಪ್ರೆಶ್ನೆ : ಅಪ್ಪಾ , ಯಾವ‌ ಸ್ಥಾನವನ್ನು ಭಕ್ತ ಜನರು ಇದು ತನ್ನ ಸ್ವಂತದ ಆಧ್ಯಾತ್ಮಿಕ ಹಾಗೂ ಐಹಿಕ ಜೀವನ ಸಾರ್ಥಕತೆಗೆ ಸೂಕ್ತ ಆಶ್ರಯ ಎಂದು ನಂಬಬಹುದಾಗಿದೆ.?

ಅಪ್ಪ :
ನಿಮ್ಮ ಮನಸ್ಸಿಗೆ ಎಲ್ಲಿ ಸಂತೋಷವೆನಿಸುತ್ತದೆಯೋ,ಎಲ್ಲಿ ನೆಮ್ಮದಿಯಾಗಿರುತ್ತದೆಯೋ ಅದೇ ನಿಮಗೆ ಸೂಕ್ತವಾದ ಪ್ರಶಸ್ತವಾದ ಸ್ಥಳವೆಂದು ತಿಳಿಯಬೇಕು.ನಿನ್ನ ಮನಸ್ಸಿಗೆ ಸಮಾಧಾನವಾಗಿ ,ಆಹ್ಲಾದಕರವಾಗಿದ್ದು ಅದು ನಿನಗೆ ಹಿಡಿಸಬೇಕು.

ಪ್ರೆಶ್ನೆ : ಅಪ್ಪ ನಾವು ಜಪ ಧ್ಯಾನ ಇತ್ಯಾದಿಯಾಗಿ ಏನೇ ಪ್ರಯತ್ನವನ್ನು ಮಾಡುವಾಗಲು ದಿನನಿತ್ಯದ ನೇಮಕ್ಕೆ ಚಂಚಲತೆ ಉಂಟಾಗುತ್ತದೆ. ಏನಾದರೂ ತಿನ್ನುವುದು ,ಟಿವಿ ,ಮೊಬೈಲ್ ನೋಡುವುದು, ಎಲ್ಲಿಗಾದರೂ ಹೋಗುವುದು ಇತ್ಯಾದಿಯಾಗಿ ನಮ್ಮ ಇಂದ್ರಿಯಗಳು ಹೊರಮುಖವಾಗಿಯೇ ಓಡುತ್ತವೆ .ನಾನೇನು ಮಾಡಲಿ?

ಅಪ್ಪ :
ಪಂಚೇಂದ್ರಿಯಗಳು ತೆಗೆದಿದ್ದರೆ ತಾನೇ ಕಷ್ಟ.. ಕಣ್ಣು ತೆರೆದಿರುತ್ತದೆಯಾದ್ದರಿಂದ ನೋಡುತ್ತಿರಬೇಕು,ಕಿವಿ ತೆರೆದಿರುತ್ತವೆಯಾದ್ದರಿಂದ ಕೇಳಿಸಿಕೊಳ್ಳುತ್ತಿರಬೇಕು,ಮೂಗು ಉಸಿರಾಡುತ್ತಲೇ ಇರಬೇಕು.ನಾಲಿಗೆ ,ಚರ್ಮ ಅವುಗಳ ತಮ್ಮ ಕೆಲಸ ತಾವು ಮಾಡುತ್ತಿರಬೇಕು..ಹಾಗಾಗಿ ನೋಡುವುದರಿಂದ,ಮಾತಾಡುವುದರಿಂದ,ಕೇಳಿಸಿಕೊಳ್ಳುವುದರಿಂದ ಚಂಚಲತೆ ಆಗುತ್ತದೆ ಅಲ್ಲವೇ?… ಹಾಗಿದ್ದಲ್ಲಿ ಕಣ್ಣು ಮುಚ್ಚಿಕೊ.. ಆಗ ನೋಡಪ್ಪ ,ಒಳಗಿನ ಮನಸ್ಸು ವಿಲಿವಿಲಿ ಒದ್ದಾಡಲು ಶುರುವಾಗುತ್ತದೆ. ಇವನು ಪರಮಾತ್ಮನ ಕಡೆಗೆ ಹೋಗುತ್ತಿದ್ದಾನೆ ಎಂದು ತಲ್ಲಣಿಸಿ ಹೋಗುತ್ತದೆ.ಪರಮಾತ್ಮನ ಕಡೆಗೆ ಹೋಗಲು ಅದು ಬಿಡುವುದಿಲ್ಲ.

ಎಲ್ಲಾ ಕಡೆಯೂ ಇರುವ ಗಾಳಿಯು ಪ್ರಾಣವಾಗಿ , ಉಸಿರಾಟದ ಮೂಲಕ ಬದುಕಿಸಿದೆ.ಅದರ ಕಡೆಗೇ ನಾವು ಗಮನ ಕೊಡಬೇಕಾಗಿರುವುದು.ಸುಮ್ಮನೆ ಇದ್ದಾಗ ಅದನ್ನು ಗಮನಿಸಿ , ಸ್ನಾನ ಮಾಡುವಾಗಲೂ ಉಸಿರಾಟದ ಮೇಲೆ ಗಮನ ಇಡಬಹುದು. ಮಲಗುವಾಗ ನಿದ್ರೆ ಬರುವ ಮುನ್ನ ಶ್ವಾಸವನ್ನು ಗಮನಿಸಬಹುದು , ದಿನದಲ್ಲಿ ಯಾವಾಗೆಲ್ಲಾ ಬಿಡುವು ಇರುತ್ತೋ ಅವಾಗೆಲ್ಲಾ ಇದನ್ನು ಅಭ್ಯಾಸ ಮಾಡಬಹುದು.ಆದರೆ ನೀವೇನು ಮಾಡುತ್ತೀರ ಎಂದರೆ ದಿನದಲ್ಲಿ ದೊರೆಯುವ ಎಷ್ಟೋ ಬಿಡುವಿನ ಸಮಯದಲ್ಲಿ ಯಾರ್ಯಾರ ಬಗ್ಗೆನೋ ಯೋಚನೆ ಮಾಡಿಕೊಂಡು ಕಾಲ ಕಳೀತೀರ .ಅವರು ಸಂಬಂಧವೇ ಇರುವುದಿಲ್ಲ , ಅಂತವರ ಬಗ್ಗೆನೂ ಯೋಚನೆ ಮಾಡುತಾ ಇರುತೀರ.ಇಂಗೆ ವ್ಯರ್ಥ ಕಾಲಹರಣ ಮಾಡುವುದರಿಂದ ಸತ್ಯದ ಕಡೆಗೆ ಅರಿವುಂಟು ಮಾಡುವ ಪ್ರಯತ್ನದಿಂದ ವಿಮುಖರಾಗಿಬಿಡುತ್ತೀರ.ಆದ್ದರಿಂದ ಧೃಢವಾಗಿ ನಿರ್ಧಾರ ಮಾಡಿಕೊಂಡು ಉಸಿರಾಟದ ಕಡೆ ಗಮನ ಇರಿಸಲು ಪ್ರಯತ್ನ ಮಾಡಿ .ಜೊತೆಗೆ ಇರುವವರನ್ನು ಕೀಳಾಗಿ ಕಾಣಬೇಡಿ.ನಿಮ್ಮ ಕರ್ತವ್ಯ ಏನಿದೆಯೋ ಅದರಂತೆ ನಡೆದುಕೊಂಡು ,ತನ್ನ ಧ್ಯೇಯವನ್ನು ಮಾತ್ರ ಭಗವಂತನ ಪ್ರಾಪ್ತಿ ಕಡೆಗೆ ಗಮನ ಇಟ್ಟುಕೊಂಡು ತನ್ನ ಉದ್ಧಾರ ಮಾಡಿಕೊಳ್ಳಬೇಕು

ಅಂತರಾತ್ಮನ ಇರುವಿಕೆಯಿಂದ ಮಾತ್ರ ಶರೀರ ಮಿಸುಗಾಡುತ್ತಾ ಇದೆ ಅದು ಇರುವುದರಿಂದ ಮನಸ್ಸು ಬುದ್ಧಿ ಶರೀರ ಎಲ್ಲಾ ಇವೆ .ಅದಿಲ್ಲದೆ ಶರೀರ ಶವ ಅಷ್ಟೇ ..

ಹೀಗಿರುವಾಗ ನೀನು ದೇಹನೇ ನಾನು ಅಂದುಕಂಡರೆ ಹೇಗೆ ? ಅದಕ್ಕಾಗಿ , ಉಸಿರಾಟದ ಕಡೆ ಗಮನ ಕೊಡು ಆಗ ಅವನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ

ಗ್ರಹಣ ಕಾಲ ಇದ್ದ ಸಮಯದಲ್ಲಿ ಅಪ್ಪ ಅವರು ಹೇಳಿದ ವಿಚಾರ

ಇವತ್ತು ಪೂರ್ಣ ಚಂದ್ರ ತನ್ನ ಪರಿಪೂರ್ಣ ಪ್ರಕಾಶವನ್ನು ಹೊಂದಿದ್ದರೂ ಅವನ ರಸದೀಪ್ತಿಯು ಸೃಷ್ಟಿಯ ಗಿಡಗಳು ಮರಗಳು ಜೀವರಾಶಿಗಳಿಗೆ ಚೈತನ್ಯ ನೀಡುವುದಕ್ಕೆ ಒಂದು ಅಡೆತಡೆ ಉಂಟಾಗಿದೆ.. ಒಂದು ಪರದೆ ಉಂಟಾಗಿದೆ.ಅದು ಹೇಗೆ ಇದೆ ಅಂದರೆ ತನ್ನ ನಿಜಸ್ವರೂಪಕ್ಕೆ ಮಾಯೆ ಅಡ್ಡಲಾಗಿರುವ ಹಾಗೆ.

ನಿಜವಾಗಿಯೂ ನಾವು ಪೂರ್ಣ ಚಂದ್ರನ ಹಾಗೆ ಪರಿಪೂರ್ಣವೇ ಹೌದು. ಆದರೆ ಮಾಯೆಗೆ ಒಳಗಾಗಿ ಅದಕ್ಕೆ ಒಂದು ಅಜ್ಞಾನದ ಮುಸುಕು ಆವರಿಸಿದೆ.

ಈ ಚಂದ್ರ ಕೆಲವು ಗಂಟೆಗಳಲ್ಲಿ ತನ್ನ ನಿಜಸ್ವರೂಪವನ್ನು ಮರಳಿ ಪಡೆಯುತ್ತಾನೆ.ಆದರೆ ಮನುಷ್ಯ ಜೀವಿಗೆ ಜನ್ಮ ಜನ್ಮಾಂತರದಿಂದ ತನ್ನ ನಿಜ ಸ್ವರೂಪದ ಬಗ್ಗೆ ಆಗಿರುವ ಗ್ರಹಣದಿಂದ ಇನ್ನೂ ಹೊರಗೆ ಬರಲು ಆಗುತ್ತಿಲ್ಲ.

ನೇಮವನ್ನು ಇಟ್ಟುಕೊಂಡು ಅದಕ್ಕೆ ಬದ್ಧವಾಗಿ ಜೀವಿಸಿರಿ

ಭಗವತ್ ಪ್ರಾಪ್ತಿಗಾಗಿ, ಭಗವಂತನಿಗೆ ಸಮೀಪ ಆಗುವುದಕ್ಕೆ, ಅವನ ಸಾನಿಧ್ಯಕ್ಕೆ ಅಣಿಯಾಗುವುದಕ್ಕೆ, ಪವಿತ್ರರಾಗುವುದಕ್ಕೆ, ಯಾವುದಾದರೂ ಒಂದು ಸೇವೆಯನ್ನೊ ,ಭಜನೆಯನ್ನೊ ಧ್ಯಾನ ,ಸತ್ಸಂಗವನ್ನೋ , ನೀತಿ ಧರ್ಮನಿಷ್ಠೆ ,ಏಕಾಗ್ರತೆ ಇಟ್ಟುಕೊಂಡು ಪಾಲಿಸಬೇಕು.ನಿತ್ಯ ನೇಮದಿಂದ ಅದಕ್ಕೊಂದು ತೂಕ ಬರಬೇಕು. ಭಗವಂತಾ, ನಿನಗಾಗಿ ಈ ಭಜನೆ ಧ್ಯಾನ ಪೂಜೆ ದಿನನಿತ್ಯ ಮಾಡುತ್ತಿವಪ್ಪ ಎಂದು ಹೇಳಿ ,ನಂತರ ಬೇಕಾಬಿಟ್ಟಿಯಾಗಿ ಕಾಲ ಕಳೆಯುವುದಕ್ಕಾಗಿ , ಇದೊಂದು ಸಮಯ ಬಗೆಹರಿಸಿ ಬಿಡೋಣ ಎಂದು ಮಾಡಬಾರದು. ಇದು ನಮ್ಮ ಜೀವನದ ಮುಖ್ಯ ಗುರಿ ಎಂದು ಅದಕ್ಕಾಗಿಯೇ ಕಾದುಕೊಂಡಿದ್ದು ನಮ್ಮ ಉಸಿರುಸಿರು ಅವನಿಗೆ ಅರ್ಪಣೆಯಾಗಬೇಕು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು.

“ಜೀವಿ ನಿರಂತರವಾಗಿ ಧ್ಯಾನಸಾಧನೆ ಮಾಡಬೇಕು. ಪ್ರಯತ್ನ ಮಾಡ್ತಾ ಭಗವಂತನ ಇರುವಿಕೆಯನ್ನು , ತಾನ್ಯಾರು ಅನ್ನದುನ್ನ ಕಂಡುಕೊಳ್ಳಬೇಕು.ಭಕ್ತಿ ಮಾಡಿ ಕೊಂಡಿರುವುದೇ ಸಾಕು ಅಂತ ಅಲ್ಲೇ ಇರುವುದಲ್ಲ. ‘ಹತ್ತನೆಯ ಬಾಗಿಲು ತೆಗೆಯೋವರೆಗೂ ಪ್ರಯತ್ನ ಮಾಡಬೇಕು. ಎರಡು ಹುಬ್ಬಿನ ಮಧ್ಯ ಇರ್ತಕ್ಕಂತಹ ಆರನೆಯ ಚಕ್ರ ತೆಗೆಯೋವರೆಗೂ ಅಧ್ಯಾತ್ಮ ಜ್ಞಾನ ಉದಯವಾಗಲ್ಲ.ಆದ್ದರಿಂದ ಇವತ್ತು, ನಾಳೆ ಅಂದುಕೊಂಡು ಕೂರದಂಗೆ, ಇಂದ್ರಿಯಗಳಿಗೆ ದಾಸರಾಗದಂತೆ, ನಿರಂತರ ಧ್ಯಾನಿಸಿರಿ”.

ಸತ್ಸಂಗಿಗಳಿಗೆ ಸದ್ಗುರು ಹಿತವಚನ

  • ಭಕ್ತರು ತಮ್ಮ ಮನೆಯಲ್ಲಿ ಗುರುಪೂಜೆ ಮತ್ತು ಸತ್ಸಂಗವನ್ನು ಹಮ್ಮಿಕೊಂಡಾಗ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಪಾಲಿಸಬೇಕಾದ ಕೆಲವು ವಿಚಾರಗಳನ್ನು ಅಪ್ಪ ಹೇಳಿದರು.
  • ಭಕ್ತರು ಆಗಮಿಸಿದಾಗ ಬರಮಾಡಿಕೊಳ್ಳಬೇಕು.ಬರೋರು ಬರ್ತಾ ಇರ್ತಾರೆ , ಮನೆಗಳೋರು ತಮ್ಮ ಪಾಡಿಗೆ ತಾವು ಒಳಗೇ ಇರ್ತಾರೆ ಅನ್ನಂಗಾಗಬಾರದು.ಭಕ್ತರಲ್ಲಿನ ಭಕ್ತಿ ,ಭಾವನೆ ಮುಖ್ಯ, ಅದಕ್ಕೆ ಅನುಸಾರವಾಗಿ ಪರಮಾತ್ಮ ಕೃಪೆ ಮಾಡುತ್ತಾನೆ
  • ಸಮಯಕ್ಕೆ ಸರಿಯಾಗಿ ಎಲ್ಲರೂ ಬಂದು ಭಾಗವಹಿಸಬೇಕು.ಆ ಸಮಯ ಯಾವಾಗ ಬರುತ್ತೋ ಅಂತ ಕಾಯ್ತಿರಬೇಕು, ಕಾಟಾಚಾರಕ್ಕೆ ಹೋಗಿ ಬರೋದಲ್ಲ. ಸತ್ಸಂಗದಲ್ಲಿ ನೀನು ಎಷ್ಟು ಹೊತ್ತು ಭಜಿಸುತ್ತೀಯೋ ಅಷ್ಟೂ ಹೊತ್ತು ಅದರಲ್ಲೇ ತನ್ಮಯವಾಗಿರಬೇಕು.
  • ಬೇಡಿಕೆ ಬತ್ತಿದವನೇ ಭಕ್ತ.ದೇವರ ಮುಂದೆ ಕುತ್ಕಂತದ್ದಂಗೇ ಪಟ್ಟಿ ಶುರು ಮಾಡೋರು ಭಕ್ತರೇ ಅಲ್ಲ.ಅದೊಂಥರಾ ಭಕ್ತಿ.
  • ನಾನು ಭಜನೆ ಮಾಡಿದೆ , ನಾನು ಸೇವೆ ಮಾಡಿದೆ , ನಾನು ಕರೆದೆ , ಅನ್ನೋ ಭಾವನೆಗಳು ಇರಲೇಬಾರದು.
    ಭಾಗವಹಿಸುವವರಿಗೆ ಉತ್ತೇಜನ ಕೊಡಬೇಕು. ಈ ಸಾರಿಗಿಂತ ಮುಂದಿನದು ಇನ್ನೂ ಚೆನ್ನಾಗಿ ಆಗಬೇಕು ಅನ್ನುವ ಪ್ರಯತ್ನ ಮಾಡ್ತಿರಬೇಕು.
  • ಮಧ್ಯ ಮಾತಾಡುವುದು ಎದ್ದು ಹೋಗುವುದು ಮಾಡಬಾರದು.ಸಿಕ್ಕಿದ ಸುಸಮಯದಲ್ಲೇ ವ್ಯರ್ಥ ಕಾಲಹರಣ ಮಾಡಿದರೆ ಗುರುವಿನ ಕೃಪೆಯನ್ನು ಪ್ರಾಪ್ತಿ ಮಾಡ್ಕಣದ್ಯಾವಾಗ ?.ಬಂದ ಭಕ್ತರನ್ನು ಎಷ್ಟು ವಿಶ್ವಾಸದಿಂದ ಬರಮಾಡಿಕೊಳ್ಳಬೇಕೆಂದರೆ, ಅವರಿಗೆ ಮತ್ತೆ ಬರಬೇಕು ಅನ್ನಿಸಬೇಕು. ಭಜನೆ ಮಾಡೋರು ಇತ್ಲಾಗೆ ಮಾಡ್ಕಂತಿರ್ತಾರೆ , ಅತ್ಲಾಗೆ ಮಾತಾಡೋರು ಮಾತಾಡುತಾ ಇರ್ತಾರೆ.ಅಂತಹ ಕಡೆ ಹೋಗಲು ದತ್ತನಿಗೆ ಮನಸೇ ಬರಲ್ಲ. ಪರಮಾತ್ಮನೇ ಎಲ್ಲಾ ಮಾಡಿಸ್ತಿರದು ಅಂತ ವಿನಮ್ರವಾಗಿ ಇರಬೇಕು.
  • ನೀವು ಮಾಡೋ ಪ್ರಸಾದಕ್ಕಿಂತಲೂ ನೀವು ಎಷ್ಟು ಆದರದಿಂದ ಬಂದ ಭಕ್ತರನ್ನು ಉಪಚರಿಸಿದಿರಿ ಅನ್ನೋದು ಮುಖ್ಯ.ಪ್ರಸಾದ ವ್ಯವಸ್ಥೆಯು ಭಕ್ತರ ಅನುಕೂಲಕ್ಕೆ,ಬಂದವರಿಗೆ ಉಪಚಾರಕ್ಕೆ ಹೊಂದಿಕೆಯಾದರೆ ಸಾಕು.
  • ಯಾರಿಗಾದರೂ ಏನಾದರೂ ಹೇಳುವುದಾದರೆ ಎಲ್ಲರಿಗೂ ಹೇಳುವಾಗಲೇ ತಿಳಿಸಬಹುದು .ಅದುಬಿಟ್ಟು ಪ್ರತ್ಯೇಕವಾಗಿ ವೈಯಕ್ತಿಕವಾಗಿ ಜರಿಯಬಾರದು.

ನಿರ್ಲಿಪ್ತವಾದ ಪರವಸ್ತುವೇ
ಎಲ್ಲಾ ಜಗತ್ತಿನ ಸೃಷ್ಟಿ ಮಾಡಿದೆ.ತ್ರಿಮೂರ್ತಿಗಳ ರೂಪದಲ್ಲಿ ಅದರ ಪಾಲನೆ ಮಾಡ್ತಾ ಇದೆ .ಒಂದೇ ಬಂಗಾರದಿಂದ ಸರ,ಬಳೆ,ಬುಗುಡಿ,ಬೆಂಡೋಲೆ ಎಲ್ಲಾ ಮಾಡುವಂತೆ..

ಗುರು ಏನು ಮಾಡುತ್ತಾನೆ ಅಂದರೆ ನಾಮ ರೂಪಾದಿಗಳಾಗಿ ತೋರಿಕೊಂಡಿರುವುದನ್ನೇ ನಿಜ ಅಂತ ಜೀವಿ ಏನು ತಿಳಿದುಕೊಂಡಿರುತ್ತಾನೆಯೋ , ಆ ಭ್ರಾಂತಿ ಅಳಿಸಿ ಒಂದೇ ಬಂಗಾರದ ಗಟ್ಟಿ ಉಳಿಸುತ್ತಾನೆ.ಗುರು ಇದನ್ನೇ ಮಾಡದು!!.

ಪರಮಾತ್ಮನ ಕೃಪೆಗಾಗಿ ಹಂಬಲಿಸಿರಿ

ಪರಮಾತ್ಮನನ್ನು ಸುಮ್ಮನೆ ಪ್ರಾರ್ಥನೆ ಮಾಡಿರಿ..ಹೆಚ್ಚಾಗಿ ಏನೂ ಹೇಳಿಕೊಳ್ಳುವುದು ಇರುವುದಿಲ್ಲ..ಏಕೆಂದರೆ ಅವನಿಗೆ ಎಲ್ಲಾ ಗೊತ್ತಿರುತ್ತದೆ.ಈ ಜೀವಿಗೆ ಏನು ಕೊಡಬೇಕು, ಏನು ಬಿಡಬೇಕು ಎಂದು ಅವನಿಗೆ ಗೊತ್ತಿರುತ್ತದೆ.ಸಣ್ಣ ವಸ್ತುಗಳನ್ನು ಕೇಳಬೇಡಿ , ಭಗವಂತಾ ನೀನೇ ಬೇಕು ಎನ್ನಿರಿ.ಜಗತ್ತಿನದಾವುದನ್ನೂ ಕೇಳಬೇಡಿ , ಆ ಪರಮಾತ್ಮನನ್ನೇ ಕೇಳಿರಿ.ಅಂಗಡಿಯಲ್ಲಿ ಇರುವ ಸಣ್ಣ ವಸ್ತುಗಳನ್ನು ಕೇಳಬೇಡಿ.. ಅಂಗಡಿಯೇ ನಿನ್ನದಾದ ಮೇಲೆ ಕೇಳುವುದಕ್ಕೇನಿದೆ?

ಗುರುವಿನಾ ಪಾದ ಹಿಡಿದುಕೋ
ಗುರು ಅರುಹಿದಂತೆಯೇ ನಡೆದುಕೋ
ಕಷ್ಟವನೆಲ್ಲವ ತಡೆದುಕೋ ಮರಳಿ ಬಾರದ ವರ ಪಡೆದುಕೊ….

ನಾನೇ ಎಲ್ಲಾ ಆಗಿರುವೆ

ಎಲ್ಲವನ್ನೂ ವ್ಯಾಪಿಸಿಕೊಂಡಿರುವೆ

ಎಲ್ಲೆಲ್ಲೂ ತುಂಬಿಕೊಂಡಿರುವೆ

ಸರ್ವವ್ಯಾಪಕನಾಗಿರುವೆ

ಅಧ್ಯಾತ್ಮದ ಹುಚ್ಚು ಪವಿತ್ರವಾದದ್ದು

ಅಧ್ಯಾತ್ಮದ ಹುಚ್ಚು, ಭಗವಂತನನ್ನು ಪಡೆಯಬೇಕೆಂಬ ಹುಚ್ಚು, ಪ್ರಾಪಂಚಿಕರಿಂದ ದೂರವಿರಬೇಕೆಂಬ ಹುಚ್ಚು, ಬುದ್ಧಿ ಶುದ್ಧವಾಗಿ ಇರಬೇಕೆಂಬ ಹುಚ್ಚು ಯಾವ ಮನುಷ್ಯನಿಗೆ ಹಿಡಿಯುತ್ತದೆಯೋ ಅವನು ಉನ್ನತವಾದ ಭಾವದಲ್ಲಿ ಇದ್ದಾನೆಂದು ಅರ್ಥ. ಪ್ರಾಪಂಚಿಕ ವಿಷಯಾದಿಗಳನ್ನು ಮರೆತು ಬಿಟ್ಟವನಿಗೆ ಆಸೆ ಇರುವುದಿಲ್ಲ ,ಆಕಾಂಕ್ಷೆ ಇರುವುದಿಲ್ಲ ,ಚಿಂತೆ ಇರುವುದಿಲ್ಲ .ಈ ಶರೀರ ಯಾವಾಗ ಇರುತ್ತದೆಯೋ, ಯಾವಾಗ ಹೋಗುತ್ತದೆಯೋ ಗೊತ್ತಿರುವುದಿಲ್ಲ. ಇದು ಆಶಾಶ್ವತವಾದದ್ದು ಎಂದು ಅವನು ದೃಢ ಮಾಡಿ ಕೊಂಡಿರುತ್ತಾನೆ.

ಸತ್ಸಂಗದಲ್ಲಿ ಭಾಗವಹಿಸುವುದು ಶ್ರೀಮಂತನು ದತ್ತು ತೆಗೆದುಕೊಂಡಂತೆ ! . ದತ್ತಕದ ವ್ಯಕ್ತಿಗೆ, ಶ್ರೀಮಂತನ ಆಸ್ತಿಯು ಅನಾಯಾಸವಾಗಿ ದೊರೆಯುವಂತೆ ,ಸತ್ಸಂಗದಲ್ಲಿ ಭಾಗವಹಿಸುವವರಿಗೆ ಸುಲಭವಾಗಿ ಗುರುವಿನ ಅನುಗ್ರಹವು ಪ್ರಾಪ್ತಿಯಾಗುತ್ತದೆ.

ಸತ್ಸಂಗಿಗಳಿಗೆ ಸದ್ಗುರು ಹಿತವಚನ

ಭಕ್ತರು ತಮ್ಮ ಮನೆಯಲ್ಲಿ ಗುರುಪೂಜೆ ಮತ್ತು ಸತ್ಸಂಗವನ್ನು ಹಮ್ಮಿಕೊಂಡಾಗ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಪಾಲಿಸಬೇಕಾದ ಕೆಲವು ವಿಚಾರಗಳನ್ನು ಅಪ್ಪ ಹೇಳಿದರು.

  • ಭಕ್ತರು ಆಗಮಿಸಿದಾಗ ಬರಮಾಡಿಕೊಳ್ಳಬೇಕು.ಬರೋರು ಬರ್ತಾ ಇರ್ತಾರೆ , ಮನೆಗಳೋರು ತಮ್ಮ ಪಾಡಿಗೆ ತಾವು ಒಳಗೇ ಇರ್ತಾರೆ ಅನ್ನಂಗಾಗಬಾರದು.ಭಕ್ತರಲ್ಲಿನ ಭಕ್ತಿ ,ಭಾವನೆ ಮುಖ್ಯ, ಅದಕ್ಕೆ ಅನುಸಾರವಾಗಿ ಪರಮಾತ್ಮ ಕೃಪೆ ಮಾಡುತ್ತಾನೆ
  • ಸಮಯಕ್ಕೆ ಸರಿಯಾಗಿ ಎಲ್ಲರೂ ಬಂದು ಭಾಗವಹಿಸಬೇಕು.ಆ ಸಮಯ ಯಾವಾಗ ಬರುತ್ತೋ ಅಂತ ಕಾಯ್ತಿರಬೇಕು, ಕಾಟಾಚಾರಕ್ಕೆ ಹೋಗಿ ಬರೋದಲ್ಲ. ಸತ್ಸಂಗದಲ್ಲಿ ನೀನು ಎಷ್ಟು ಹೊತ್ತು ಭಜಿಸುತ್ತೀಯೋ ಅಷ್ಟೂ ಹೊತ್ತು ಅದರಲ್ಲೇ ತನ್ಮಯವಾಗಿರಬೇಕು.
  • ಬೇಡಿಕೆ ಬತ್ತಿದವನೇ ಭಕ್ತ.ದೇವರ ಮುಂದೆ ಕುತ್ಕಂತದ್ದಂಗೇ ಪಟ್ಟಿ ಶುರು ಮಾಡೋರು ಭಕ್ತರೇ ಅಲ್ಲ.ಅದೊಂಥರಾ ಭಕ್ತಿ.
  • ನಾನು ಭಜನೆ ಮಾಡಿದೆ , ನಾನು ಸೇವೆ ಮಾಡಿದೆ , ನಾನು ಕರೆದೆ , ಅನ್ನೋ ಭಾವನೆಗಳು ಇರಲೇಬಾರದು.
    ಭಾಗವಹಿಸುವವರಿಗೆ ಉತ್ತೇಜನ ಕೊಡಬೇಕು. ಈ ಸಾರಿಗಿಂತ ಮುಂದಿನದು ಇನ್ನೂ ಚೆನ್ನಾಗಿ ಆಗಬೇಕು ಅನ್ನುವ ಪ್ರಯತ್ನ ಮಾಡ್ತಿರಬೇಕು.
  • ಮಧ್ಯ ಮಾತಾಡುವುದು ಎದ್ದು ಹೋಗುವುದು ಮಾಡಬಾರದು.ಸಿಕ್ಕಿದ ಸುಸಮಯದಲ್ಲೇ ವ್ಯರ್ಥ ಕಾಲಹರಣ ಮಾಡಿದರೆ ಗುರುವಿನ ಕೃಪೆಯನ್ನು
    ಪ್ರಾಪ್ತಿ ಮಾಡ್ಕಣದ್ಯಾವಾಗ ?.ಬಂದ ಭಕ್ತರನ್ನು ಎಷ್ಟು ವಿಶ್ವಾಸದಿಂದ ಬರಮಾಡಿಕೊಳ್ಳಬೇಕೆಂದರೆ, ಅವರಿಗೆ ಮತ್ತೆ ಬರಬೇಕು ಅನ್ನಿಸಬೇಕು. ಭಜನೆ ಮಾಡೋರು ಇತ್ಲಾಗೆ ಮಾಡ್ಕಂತಿರ್ತಾರೆ , ಅತ್ಲಾಗೆ ಮಾತಾಡೋರು ಮಾತಾಡುತಾ ಇರ್ತಾರೆ.ಅಂತಹ ಕಡೆ ಹೋಗಲು ದತ್ತನಿಗೆ ಮನಸೇ ಬರಲ್ಲ.

*ಪರಮಾತ್ಮನೇ ಎಲ್ಲಾ ಮಾಡಿಸ್ತಿರದು ಅಂತ ವಿನಮ್ರವಾಗಿ ಇರಬೇಕು.

  • ನೀವು ಮಾಡೋ ಪ್ರಸಾದಕ್ಕಿಂತಲೂ ನೀವು ಎಷ್ಟು ಆದರದಿಂದ ಬಂದ ಭಕ್ತರನ್ನು ಉಪಚರಿಸಿದಿರಿ ಅನ್ನೋದು ಮುಖ್ಯ.ಪ್ರಸಾದ ವ್ಯವಸ್ಥೆಯು ಭಕ್ತರ ಅನುಕೂಲಕ್ಕೆ,ಬಂದವರಿಗೆ ಉಪಚಾರಕ್ಕೆ ಹೊಂದಿಕೆಯಾದರೆ ಸಾಕು.
  • ಯಾರಿಗಾದರೂ ಏನಾದರೂ ಹೇಳುವುದಾದರೆ ಎಲ್ಲರಿಗೂ ಹೇಳುವಾಗಲೇ ತಿಳಿಸಬಹುದು .ಅದುಬಿಟ್ಟು ಪ್ರತ್ಯೇಕವಾಗಿ ವೈಯಕ್ತಿಕವಾಗಿ ಜರಿಯಬಾರದು.

“ಜೀವಿ ನಿರಂತರವಾಗಿ ಧ್ಯಾನಸಾಧನೆ ಮಾಡಬೇಕು. ಪ್ರಯತ್ನ ಮಾಡ್ತಾ ಭಗವಂತನ ಇರುವಿಕೆಯನ್ನು , ತಾನ್ಯಾರು ಅನ್ನದುನ್ನ ಕಂಡುಕೊಳ್ಳಬೇಕು.ಭಕ್ತಿ ಮಾಡಿ ಕೊಂಡಿರುವುದೇ ಸಾಕು ಅಂತ ಅಲ್ಲೇ ಇರುವುದಲ್ಲ. ‘ಹತ್ತನೆಯ ಬಾಗಿಲು ತೆಗೆಯೋವರೆಗೂ ಪ್ರಯತ್ನ ಮಾಡಬೇಕು. ಎರಡು ಹುಬ್ಬಿನ ಮಧ್ಯ ಇರ್ತಕ್ಕಂತಹ ಆರನೆಯ ಚಕ್ರ ತೆಗೆಯೋವರೆಗೂ ಅಧ್ಯಾತ್ಮ ಜ್ಞಾನ ಉದಯವಾಗಲ್ಲ.ಆದ್ದರಿಂದ ಇವತ್ತು, ನಾಳೆ ಅಂದುಕೊಂಡು ಕೂರದಂಗೆ, ಇಂದ್ರಿಯಗಳಿಗೆ ದಾಸರಾಗದಂತೆ, ನಿರಂತರ ಧ್ಯಾನಿಸಿರಿ”.